ಬೆಂಗಳೂರು : ಡಿಜೆ ಹಳ್ಳಿ ಗಲಭೆಗೆ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಅಳಿಯ ನವೀನ್ ರ ಫೇಸ್ ಬುಕ್ ಪೋಸ್ಟ್ ಯೇ ಕಾರಣ ಎನ್ನಲಾಗಿತ್ತು. ಇದೀಗ ಈ ಬಗ್ಗೆ ನವೀನ್, “ನಾನು ಬೇಕೂ ಅಂತ ಯಾವುದನ್ನೂ ಪೋಸ್ಟ್ ಮಾಡಿಲ್ಲ. ಅವರು ಮಾಡಿದ್ದ ಪೋಸ್ಟ್ ಗೆ ಕಮೆಂಟ್ ಮಾಡಿದ್ದೆ ಅಷ್ಟೆ ಎಂದು ವಿಚಾರಣೆ ವೇಳೆ ತಿಳಿಸಿದ್ದಾನೆ. ಹಿಂದೂ ದೇವರ ಬಗ್ಗೆ ಅವಹೇಳನಕಾರಿ ಪೋಸ್ಟ್ ಮಾಡಿದ್ದರು. ಇದಕ್ಕೆ ಪ್ರತಿಯಾಗಿ ಕಮೆಂಟ್ ಅಷ್ಟೇ ಮಾಡಿದ್ದೆ ಎಂದು ತನ್ನ ಪೋಸ್ಟ್ ಬಗ್ಗೆ ಆರೋಪಿ ನವೀನ್ ಸ್ಪಷ್ಟನೆ ನೀಡಿದ್ದಾನೆ.
ಇನ್ನು ವಿಚಾರಣೆ ವೇಳೆ ನವೀನ್, ಗಲಭೆಯ ಮಾಸ್ಟರ್ ಮೈಂಡ್ ಪೈರೋಜ್ ಖಾನ್ ಒಂದು ಪೋಸ್ಟ್ ಮಾಡಿದ್ದ, ಇದಕ್ಕೆ ಉತ್ತರವಾಗಿ ಕಮೆಂಟ್ ಮಾಡಿದ್ದೆ. ಕಮೆಂಟ್ ಮಾಡೋ ಸಲುವಾಗಿ ಗೂಗಲ್ ನಲ್ಲಿ ಇಮೇಜ್ ಹುಡುಕಿದ್ದೆ. ಬಳಿಕ ಒಂದು ಇಮೇಜ್ ತೆಗೆದು ಕಮೆಂಟ್ ಬಾಕ್ಸ್ ನಲ್ಲಿ ಪೋಸ್ಟ್ ಮಾಡಿದ್ದೆ ಎಂದು ತಿಳಿಸಿದ್ದಾನೆ.
ಅಲ್ಲದೆ ಪಾದರಾಯನಪುರ ಪುಂಡರ ಗಲಭೆ, ಸಿಎಎ ಮತ್ತು ಎನ್ ಆರ್ ಸಿ ಪ್ರತಿಭಟನೆ ವೇಳೆಯು ಕಮೆಂಟ್ ಮಾಡಿದ್ದೆ. ಬೇರೆಯವರ ಪೋಸ್ಟ್ ಸಲುವಾಗಿಯಷ್ಟೇ ನಾನು ಕಮೆಂಟ್ ಮಾಡಿದ್ದೇನೆ. ನಾನಾಗಿ ಯಾವುದೇ ಪೋಸ್ಟ್ ಮಾಡಿಲ್ಲ. ರಾಮ ಜನ್ಮಭೂಮಿ ಶಿಲಾನ್ಯಾಸದ ವೇಳೆ ಏರಿಯಾದಲ್ಲಿ ಪಟಾಕಿ ಸಿಡಿಸಿ ಸಿಹಿ ಹಂಚಿಕೆ ಮಾಡಿದ್ದೆ. ಈ ವೇಳೆ ಅಪರಿಚಿತ ನಂಬರ್ ಗಳಿಂದ ನನಗೆ ಬೆದರಿಕೆ ಕರೆಗಳು ಬಂದಿದ್ದವು. ದುಷ್ಕರ್ಮಿಗಳು ಫೋನ್ ಮಾಡಿ ಬೆದರಿಕೆ ಹಾಕಿದ್ದರು ಎಂದು ಆರೋಪಿಸಿದ್ದಾರೆ.







