Bangalore | ಪಿಜಿಯಲ್ಲಿ ಯುವಕ ಅನುಮಾನಾಸ್ಪದ ಸಾವು
ಬೆಂಗಳೂರು : ಪಿಜಿಯಲ್ಲಿ ಯುವಕ ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ಬೆಂಗಳೂರಿನ ದಾಸರಹಳ್ಳಿಯಲ್ಲಿ ನಡೆದಿದೆ. ಅನಿಲ್ ಕುಮಾರ್ ಮೃತ ದುರ್ದೈವಿ.
ಸಿನಿಮಾ ರಂಗದಲ್ಲಿ ಹೆಸರು ಮಾಡಬೇಕು ಅಂತ ಶಿವಮೊಗ್ಗದಿಂದ ಬೆಂಗಳೂರಿಗೆ ಬಂದಿದ್ದ ಅನಿಲ್ ಕುಮಾರ್, ದಾಸರಹಳ್ಳಿಯ ವಿನಾಯಕ ಪಿಜಿಯಲ್ಲಿ ಕಳೆದ 20 ದಿನಗಳಿಂದ ವಾಸವಾಗಿದ್ದ.
ಕಳೆದ ಗುರುವಾರ ತನ್ನ ತಾಯಿಗೆ ಕರೆ ಮಾಡಿ ಫುಡ್ ಪಾಯಿಸನ್ ಆಗಿದೆ. ಹಾಸ್ಪಿಟಲ್ ಗೆ ಹೋಗಿ ಬಂದು ಕರೆ ಮಾಡುತ್ತಿನಿ ಅಂತ ಹೇಳಿದ್ದ.

ಶುಕ್ರವಾರ ಸಂಜೆ ಸ್ನಾನಕ್ಕೆಂದು ಬಾತ್ರೂಮಿಗೆ ಹೋದವನು ಸೋಮವಾರ ಬೆಳಗ್ಗೆ ಪಿಜಿ ಯ ಶವವಾಗಿ ಪತ್ತೆಯಾಗಿದ್ದಾನೆ. ಸೋಮವಾರ ಬೆಳಗ್ಗೆ ಹೌಸ್ ಕೀಪಿಂಗ್ ನವರು ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ.
ಪಿಜಿ ಮಾಲೀಕರ ನಿರ್ಲಕ್ಷವೇ ಈ ಸಾವಿಗೆ ನೇರ ಕಾರಣ ಅಂತ ಸ್ಥಳೀಯರು ಆರೋಪಿಸಿದ್ದಾರೆ.
ಅಲ್ಲದೆ ಅನಿಲ್ ತಂದೆ ಪಿಜಿ ಅವರೇ ನನ್ನ ಮಗನ ಸಾವಿಗೆ ನೇರ ಕಾರಣ ಎಂದು ಗೋವಿಂದರಾಜ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ.








