ಬೆಂಗಳೂರಿನಿಂದ ಭಕ್ತರು ಶ್ರೀರಾಮನ ದರ್ಶನ ಮಾಡಲು ಅಯೋಧ್ಯೆಗೆ ನೇರ ವಿಮಾನ ಸೇವೆ ಆರಂಭವಾಗಲಿದೆ. ಇಂಡಿಗೋ ಏರ್‌ಲೈನ್ಸ್ ಸಂಸ್ಥೆ ಡಿ. 31ರಿಂದಲೇ ಈ ಕಾರ್ಯಾಚರಣೆಗೆ ಚಾಲನೆ ನೀಡಲಿದೆ ಎಂದು ತಿಳಿದು ಬಂದಿದೆ. ಪ್ರಾರಂಭದ ಹಂತದಲ್ಲಿ ವಿಮಾನಗಳು ಹಗಲಿನ ಸಮಯದಲ್ಲಿ ಮಾತ್ರ ಸೇವೆ ನೀಡಲಿದೆ. ವಿಮಾನ 6E 934 ಬೆಳಗ್ಗೆ 11:40ಕ್ಕೆ ಬೆಂಗಳೂರಿನಿಂದ ಹೊರಡಲಿದೆ. ಮಧ್ಯಾಹ್ನ 2:25ಕ್ಕೆ ಅಯೋಧ್ಯೆಗೆ ಆಗಮಿಸಲಿದೆ. ಹಿಂತಿರುಗಿ ಬರುವಾಗ 6E 926 ವಿಮಾನ ಅಯೋಧ್ಯೆಯಿಂದ ಮಧ್ಯಾಹ್ನ 2:55 ಕ್ಕೆ ಹೊರಟು ಸಂಜೆ 5:30ಕ್ಕೆ ಬೆಂಗಳೂರು ತಲುಪಲಿದೆ.
‘ಭಾವಾಂತರ’ ಚಿತ್ರದ ‘ಮದುರೆಗೆ ಹೋದನು ಮಾಧವ’ ಹಾಡು ರಿಲೀಸ್: ಸಿಂಗಲ್ ಶಾಟ್‌ನಲ್ಲಿ ಮೂಡಿಬಂದ ಅದ್ಭುತ ನೃತ್ಯ!
ಕಾರ್ತಿಕ್ ಶರ್ಮಾ ಚೊಚ್ಚಲ ನಿರ್ದೇಶನದ ಬಹುನಿರೀಕ್ಷಿತ ‘ಭಾವಾಂತರ’ ಚಿತ್ರದ 3ನೇ ಹಾಡು ಹೊಂಬಾಳೆ ಮ್ಯೂಸಿಕ್ ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಯಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದೆ. ಖ್ಯಾತ...








