ಕೊರೊನಾ ಸೋಂಕಿತರ ಚಿಕಿತ್ಸೆಗಾಗಿ ಭಾರತದಲ್ಲಿ ಈಗಾಗಲೇ ಸಿದ್ಧಪಡಿಸಿದ ಕೊವಿಡ್-19 ಲಸಿಕೆ ಸಿದ್ಧವಾಗುತ್ತಿದ್ದು, ಇದೇ ಲಸಿಕೆಯನ್ನು ಯನ್ನು ಬಳಸಿಕೊಂಡು ಬಾಂಗ್ಲಾದೇಶ ಪ್ರಯೋಗವನ್ನು ನಡೆಸಲು ಸಿದ್ಧವಾಗಿದೆ. ಕೊರೊನಾ ಸೋಂಕಿಗೆ ಲಸಿಕೆ ಕಂಡು ಹಿಡಿಯುವುದರಲ್ಲಿ ಮತ್ತು ಸಂಬಂಧಿತ ಪ್ರಯೋಗಗಳಲ್ಲಿ ಭಾರತದ ಜೊತೆಗೆ ಬಾಂಗ್ಲಾದೇಶ ಸಹಯೋಗವನ್ನು ಹೊಂದಲು ಮುಂದಾಗಿದೆ ಎನ್ನಲಾಗಿದೆ. ಲಸಿಕೆ ಅಭಿವೃದ್ಧಿ ಕುರಿತು ಬಾಂಗ್ಲಾದೇಶದ ಜೊತೆಗೆ ಭಾರತೀಯ ವಿದೇಶಾಂಗ ಕಾರ್ಯದರ್ಶಿ ಹರ್ಷವರ್ಧನ್ ಶ್ರಿಂಗ್ಲಾ ಈಗಾಗಲೇ ಚರ್ಚಿಸಿದ್ದಾರೆ.
ಇನ್ನೂ ಈ ಕುರಿತು ಮಾತನಾಡಿರುವ ಬಾಂಗ್ಲಾದೇಶದ ವಿದೇಶಾಂಗ ಕಾರ್ಯದರ್ಶಿ ಮಸೂದ್ ಬಿನ್ ಮೊಮೆನ್ ಭಾರತೀಯರು ಕೊರೊನಾ ಸೋಂಕಿತರ ಚಿಕಿತ್ಸೆಗಾಗಿ ಲಸಿಕೆಯನ್ನು ಕೇವಲ ತಮಗೋಸ್ಕರವಷ್ಟೇ ಅಭಿವೃದ್ಧಿಪಡಿಸುತ್ತಿಲ್ಲ. ಇದರಿಂದಾಗಿ ಅನ್ಯರಿಗೂ ಉಪಯೋಗವಾಗಲಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.