ADVERTISEMENT
Thursday, July 2, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಸಿಎಂ ಕುಟುಂಬದಿಂದ ಸಾವಿರಾರು ಕೋಟಿ ಭ್ರಷ್ಟಾಚಾರ : ಯತ್ನಾಳ್

admin by admin
February 15, 2021
in Newsbeat, Politics, ರಾಜಕೀಯ
Arun singh Yatnal is not our party leader

Arun singh Yatnal is not our party leader

Share on FacebookShare on TwitterShare on WhatsappShare on Telegram

ಸಿಎಂ ಕುಟುಂಬದಿಂದ ಸಾವಿರಾರು ಕೋಟಿ ಭ್ರಷ್ಟಾಚಾರ : ಯತ್ನಾಳ್

ವಿಜಯಪುರ : ಯಡಿಯೂರಪ್ಪನವರ ಇಡೀ ಕುಟುಂಬ ಲೂಟಿ ಮಾಡುತ್ತಿದೆ. ಹಾವು ಚೇಳುಗಳು ಸಿಎಂ ಮನೆಯಲ್ಲಿಯೇ ಇವೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸಿಎಂ ಪುತ್ರನ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

Related posts

ವೈರಲ್ ಆಡಿಯೋದಿಂದ ರಾಜ್ಯ ಬಿಜೆಪಿಯಲ್ಲಿ ಸಂಚಲನ; ಡಿವಿಎಸ್ ಸ್ಪಷ್ಟನೆ

ಕಿಕ್ ಔಟ್ ಮಾಡಲು ನಾನೇನು ತಪ್ಪು ಮಾಡಿದ್ದೆ ಬಿಜೆಪಿಯಲ್ಲಿ ಆಡಿಯೋ ಬಾಂಬ್ ಸ್ಫೋಟ ಸದಾನಂದ ಗೌಡರ ನಡೆಯಿಂದ ಬೇಸತ್ತ ರಾಜ್ಯಾಧ್ಯಕ್ಷ

July 2, 2026
ನಮ್ಮ ಮೆಟ್ರೋ ಸೇವೆ ವ್ಯತ್ಯಯ; BMRCLಗೆ ತನಿಖೆಗೆ ಆದೇಶ

ನಮ್ಮ ಮೆಟ್ರೋ ಸೇವೆ ವ್ಯತ್ಯಯ; BMRCLಗೆ ತನಿಖೆಗೆ ಆದೇಶ

July 2, 2026

ವಿಜಯಪುರದಲ್ಲಿ ಮಾತನಾಡಿದ ಅವರು, ಮಕ್ಕಳು, ಮೊಮ್ಮಕ್ಕಳು, ಮರಿಮೊಮ್ಮಕ್ಕಳು ಈಗ ಸಿಎಂ ಅವರನ್ನು ಹಿಡಿದಿಟ್ಟುಕೊಂಡಿದ್ದಾರೆ. ಯಡಿಯೂರಪ್ಪ ಪ್ರತಿಪಕ್ಷ ನಾಯಕರಾಗಿದ್ದಾಗ ಅವರ ನಿವಾಸದಲ್ಲಿ ಯಾರೂ ಇರುತ್ತಿರಲಿಲ್ಲ.

ಈಗ ಸಿಎಂ ಆದ ನಂತರ ಅವರ ಇಡೀ ಕುಟುಂಬ ಬಂದು ಅವರ ನಿವಾಸ ಸೇರಿ ಬಿಟ್ಟಿದೆ. ಅವರ ಕುಟುಂಬದಿಂದ ಸಿಎಂ ಹೆಸರು ಕೆಡುತ್ತಿದೆ. ಯಡಿಯೂರಪ್ಪ ಸಂಪೂರ್ಣವಾಗಿ ಬದಲಾಗಿದ್ದಾರೆ.

ವಿಶೇಷವಾಗಿ ವಿಜಯೇಂದ್ರ, ಅವರ ಕುಟುಂಬದವರಿಂದ ಹೆಸರು ಕೆಟ್ಟಿದೆ ಎಂದು ವಾಗ್ದಾಳಿ ನಡೆಸಿದರು.

ಇನ್ನು ವಿಜಯೇಂದ್ರ ಅವರ ಚೇಲಾಗಳೆಲ್ಲ, ರಾತ್ರಿ ವ್ಯವಸ್ಥೆ ಮಾಡುವರೆಲ್ಲ ಈಗ ನಿಗಮ, ಮಂಡಳಿ ಅಧ್ಯಕ್ಷ, ನಿರ್ದೇಶಕರಾಗಿದ್ದಾರೆ. ವಿಜಯೇಂದ್ರನ ದೊಡ್ಡ ತಂಡವಿದೆ.

ತಮಗೆ ಬೇಡವಾದವರ ನಕಲಿ ಸಿಡಿ ತಯಾರಿಸುವ ಕೇಂದ್ರವಿದೆ. ಈ ಬಗ್ಗೆ ತಮ್ಮ ಬಳಿ ಮಾಹಿತಿಯಿದೆ ಎಂದು ಗಂಭೀರ ಆರೋಪ ಮಾಡಿದರು.

ಯಡಿಯೂರಪ್ಪ ಪುತ್ರ ವ್ಯಾಮೋಹದ ಪರಾಕಾಷ್ಟೆ ತಲುಪಿದ್ದಾರೆ. ಸುತ್ತೂರ ಶ್ರೀಗಳಿಗೆ ನೇತೃತ್ವ ತೆಗೆದುಕೊಳ್ಳಲು ಹೇಳಿದ್ದಾರೆ. ಮೊನ್ನೆ ವೀರಶೈವ ಲಿಂಗಾಯಿತರನ್ನು ಒಡೆಯಲು ಪ್ರಯತ್ನಿಸಿದರು, ವಿಫಲವಾಯಿತು. ವೀರಶೈವ ಲಿಂಗಾಯಿತರನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳುತ್ತಾರೆ. ಇದರಿಂದ ಪಕ್ಷಕ್ಕೆ ಹಾನಿಯಾಗುತ್ತದೆ ಎಂದು ಎಚ್ಚರಿಸಿದರು.

basanagouda patil yatnal
ನಮ್ಮದು ಕಾಂಗ್ರೆಸ್, ಮುಲಾಯಂ ಸಿಂಗ್, ಲಾಲೂ ಪ್ರಸಾದ್, ದೇವೇಗೌಡರಂತೆ ಕುಟುಂಬ ಪಕ್ಷವಲ್ಲ. ನಮ್ಮದು ಕಾರ್ಯಕರ್ತರ ಪಕ್ಷ. ಪ್ರಧಾನಿಯ ಆಶಯದಂತೆ ಕುಟುಂಬ ರಾಜಕೀಯ ಬಿಡಬೇಕು. ಆದ್ದರಿಂದ ವಿಜಯೇಂದ್ರ ಕುಟುಂಬದಲ್ಲಿ ಎಲ್ಲರೂ ರಾಜಕೀಯ ಮಾಡಬಾರದು.

24 ಗಂಟೆಯಲ್ಲಿ 5 ಕಾಂಗ್ರೆಸ್ ಶಾಸಕರು ರಾಜೀನಾಮೆ : ರಮೇಶ್ ಜಾರಕಿಹೊಳಿ

ಒಬ್ಬರು ಮಾತ್ರ ರಾಜಕೀಯ ಮಾಡಿ, ಬೆಂಗಳೂರಿನಲ್ಲಿ ನಿಮಗೆ ಸೇರಿದ ಸಾಕಷ್ಟು ವ್ಯವಹಾರವಿದೆ. ನೂರಾರು ಮನೆಗಳಿವೆ. ಸಿಎಂ ಮನೆಯಲ್ಲಿ ಕುಳಿತು ವಸೂಲಿ ಮಾಡುವ ಕೆಲಸ, ವರ್ಗಾವಣೆಯನ್ನು ನೀವೇ ಮಾಡುತ್ತಿದ್ದೀರಿ.

ಯಡಿಯೂರಪ್ಪ ಅವರಿಗೆ ವಯಸ್ಸಾಗಿದೆ. ಅವರಿಗೇನೂ ತಿಳಿಯುತ್ತಿಲ್ಲ, ಅದನ್ನು ನಿಮ್ಮ ಇಡೀ ಕುಟುಂಬ, ಸುಮಾರು 35 ಜನ ಸಿಎಂ ಗೃಹ ಕಚೇರಿಯಲ್ಲಿ ಕುಳಿತುಕೊಂಡು ವ್ಯವಹಾರ ಮಾಡುತ್ತಿದ್ದೀರಿ. ಸಾವಿರಾರು ಕೋಟಿ ರೂಪಾಯಿ ಭ್ರಷ್ಟಾಚಾರ ಮಾಡಿದ್ದೀರಿ ಎಂದು ಕಿಡಿಕಾರಿದರು.

ಇನ್ನು ವಿಶೇಷ ವಿಮಾನದಲ್ಲಿ ಮೊನ್ನೆ ಇಡೀ ಕುಟುಂಬ ಮಾರಿಷಸ್ ಗೆ ವಿಶೇಷ ವಿಮಾನ ತೆಗೆದುಕೊಂಡು ಹೋಗಿದ್ದೀರಿ. ಅಲ್ಲಿಗೆ ಯಾಕೆ ಹೋಗಿದ್ದೀರಿ? ಏನು ಕೆಲಸವಿತ್ತು? ಹಣದ ವ್ಯವಹಾರ ಇತ್ತು? ನಮ್ಮ ಹೋರಾಟ ತತ್ವಾಧಾರಿತ ಹೋರಾಟ. ಯಡಿಯೂರಪ್ಪ ಬಹಳ ದುಡಿದಿದ್ದಾರೆ. ಅವರನ್ನು ಮುಕ್ತರಾಗಿ ಕೆಲಸ ಮಾಡಲು ಬಿಡಿ, ಅವರು ಸಿಎಂ ಆದ ಮೇಲೆ ಯಾಕೆ ಅವರ ನಿವಾಸದಲ್ಲಿ ಉಳಿದಿದ್ದೀರಿ ಎಂದು ಯತ್ನಾಳ್ ಪ್ರಶ್ನಿಸಿದರು.

ವಿಜಯೇಂದ್ರನ ಸರ್ವಾಧಿಕಾರ, ದುರಹಂಕಾರ ಬಗ್ಗೆ ಎಲ್ಲ ಶಾಸಕರ ಅಸಮಾಧಾನವಿದೆ. ಕೆಲವು ಸಚಿವರು ವಿಜಯೇಂದ್ರ ಬಳಿ ಹೋದರೆ ಕುಳಿತುಕೊಳ್ಳಲು ಕುರ್ಚಿ ಕೂಡ ಇಲ್ಲ.

basanagouda patil yatnal
ಅಧಿಕಾರಕ್ಕಾಗಿ ಎಲ್ಲರೂ ಸುಮ್ಮನಿದ್ದಾರೆ. ಯಡಿಯೂರಪ್ಪ ಅವರ ಇಡೀ ಕುಟುಂಬ ಲೂಟಿ ಮಾಡುತ್ತಿದೆ. ಪ್ರಧಾನಿ ಪ್ರಕಾರ ನಾ ಖಾವೂಂಗಾ, ನಾ ಖಾನೆ ದೂಂಗಾ ಅಂತಾರೆ.ಅವರ ಆಶಯದಂತೆ ನಾನು ಹೋರಾಟ ಮಾಡುತ್ತಿದ್ದೇನೆ ಎಂದು ತಿಳಿಸಿದರು.

ಇನ್ನು ಎಂದೂ ಲಿಂಗಪೂಜೆ ಮಾಡದ ವಿಜಯೇಂದ್ರ ಚಿತ್ರದುರ್ಗ ಸ್ವಾಮೀಜಿ ಹಿಡಿದುಕೊಂಡು ಲಿಂಗಪೂಜೆ ಮಾಡಿದ ಫೋಟೋ ತೆಗೆಸಿಕೊಂಡಿದ್ದಾರೆ. ಪ್ರತಿದಿನ ಪೂಜೆ ಮಾಡ್ತಾರೆ, ಇದು ಬರೀ ನಾಟಕ ಕಂಪನಿ.ರೂ. 10 ಕೋ. ಖರ್ಚು ಮಾಡಿ ಬೆಂಗಳೂರಿನಲ್ಲಿ ಚಿತ್ರದುರ್ಗ ಸ್ವಾಮೀಜಿಗಳನ್ನು ಹಿಡಿದುಕೊಂಡು ಕಾರ್ಯಕ್ರಮ ಮಾಡಿದರು.

ಅಂದು ಸುತ್ತೂರ ಸ್ವಾಮೀಜಿ ಇವರಿಗೆ ನೆನಪಿಗೆ ಬರಲ್ಲಲಿಲ್ಲ. ಈಗ ಮೈಸೂರಿಗೆ ಹೋಗಿ ಸುತ್ತೂರು ಸ್ವಾಮೀಜಿಗಳಿಗೆ ಜೈ ಅಂತಾರೆ. ಅವರು ಸಿಗದಿದ್ದರೆ ಮುಂದೆ ತುಮಕೂರು ಸ್ವಾಮೀಜಿಗಳನ್ನು ಹಿಡಿದುಕೊಂಡು ಜೈ ಅಂತಾರೆ. ಅಲ್ಲಿಯೂ ಲಾಭವಾಗದಿದ್ದರೆ ಅಮಿತ್ ಶಾ ಜೈ ಅಂತಾರೆ ಎಂದು ವಿಜಯೇಂದ್ರ ವಿರುದ್ಧ ಯತ್ನಾಳ್ ವಾಗ್ದಾಳಿ ನಡೆಸಿದರು.

ಶ್ರೀ ಕಟೀಲು ದುರ್ಗಾಪರಮೇಶ್ವರೀ ಕ್ಷೇತ್ರ ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ 8548998564
ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಅಷ್ಟಮಂಗಳ ಪ್ರಶ್ನೆ, ತಾಂಬೂಲಪ್ರಶ್ನೆ ,ಜಾತಕ ವಿಶ್ಲೇಷಣೆ,ಪಂಚಪಕ್ಷಿ ಪ್ರಶ್ನೆಗಳ ಮುಖಾಂತರ ಸಂಪೂರ್ಣವಾಗಿ ಅವಲೋಕನೇ ಮಾಡಿ ಪರಿಹಾರ ಸೂಚಿಸುವರು ಕರೆ ಮಾಡಿ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ  ತಪ್ಪದೆ ಕರೆ ಮಾಡಿ 85489 98564

Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel

Tags: B.S. YeddyurappaBasanagouda Patil YatnalBJP
ShareTweetSendShare
Join us on:

Related Posts

ವೈರಲ್ ಆಡಿಯೋದಿಂದ ರಾಜ್ಯ ಬಿಜೆಪಿಯಲ್ಲಿ ಸಂಚಲನ; ಡಿವಿಎಸ್ ಸ್ಪಷ್ಟನೆ

ಕಿಕ್ ಔಟ್ ಮಾಡಲು ನಾನೇನು ತಪ್ಪು ಮಾಡಿದ್ದೆ ಬಿಜೆಪಿಯಲ್ಲಿ ಆಡಿಯೋ ಬಾಂಬ್ ಸ್ಫೋಟ ಸದಾನಂದ ಗೌಡರ ನಡೆಯಿಂದ ಬೇಸತ್ತ ರಾಜ್ಯಾಧ್ಯಕ್ಷ

by Shwetha
July 2, 2026
0

ಕರ್ನಾಟಕ ಬಿಜೆಪಿಯಲ್ಲಿ ನಾಯಕತ್ವದ ಸಂಘರ್ಷ ಮತ್ತು ಆಂತರಿಕ ಭಿನ್ನಮತ ಈಗ ಹೊಸ ರೂಪ ಪಡೆದುಕೊಂಡಿದೆ. ಮಾಜಿ ಮುಖ್ಯಮಂತ್ರಿ ಡಿವಿ ಸದಾನಂದ ಗೌಡರದ್ದು ಎನ್ನಲಾದ ಆಡಿಯೋ ವೈರಲ್ ಆದ...

ನಮ್ಮ ಮೆಟ್ರೋ ಸೇವೆ ವ್ಯತ್ಯಯ; BMRCLಗೆ ತನಿಖೆಗೆ ಆದೇಶ

ನಮ್ಮ ಮೆಟ್ರೋ ಸೇವೆ ವ್ಯತ್ಯಯ; BMRCLಗೆ ತನಿಖೆಗೆ ಆದೇಶ

by Shwetha
July 2, 2026
0

ಬೆಂಗಳೂರು ನಮ್ಮ ಮೆಟ್ರೋ ಸೇವೆಗಳಲ್ಲಿ ಪದೇ ಪದೇ ಉಂಟಾಗುತ್ತಿರುವ ವ್ಯತ್ಯಯಗಳ ಕುರಿತು ತನಿಖೆ ನಡೆಸುವಂತೆ ಮೆಟ್ರೋ ರೈಲ್ವೆ ಸುರಕ್ಷತಾ ಮುಖ್ಯ ಆಯುಕ್ತರು, ಬೆಂಗಳೂರು ಮೆಟ್ರೋ ರೈಲು ಕಾರ್ಪೋರೇಷನ್...

ಬೆಂಗಳೂರಿನ ವಾಹನ ಸವಾರರಿಗೆ ಶಾಕ್; ನೈಸ್ ರಸ್ತೆಯ ಹೊಸ ಟೋಲ್ ದರ ಜಾರಿ

ಬೆಂಗಳೂರಿನ ವಾಹನ ಸವಾರರಿಗೆ ಶಾಕ್; ನೈಸ್ ರಸ್ತೆಯ ಹೊಸ ಟೋಲ್ ದರ ಜಾರಿ

by Shwetha
July 2, 2026
0

ಬೆಂಗಳೂರಿನ ವಾಹನ ಸವಾರರಿಗೆ ಮತ್ತೊಂದು ಬೆಲೆ ಏರಿಕೆ ಹೊರೆ ಎದುರಾಗಿದೆ. ನಗರದ ಪ್ರಮುಖ ಟೋಲ್ ಮಾರ್ಗಗಳಾದ ಬೆಂಗಳೂರಿನ ಎಲೆಕ್ಟ್ರಾನಿಕ್ಸ್ ಸಿಟಿ ಎಲಿವೇಟೆಡ್ ಎಕ್ಸ್‌ಪ್ರೆಸ್‌ವೇ (ಹೊಸೂರು ರಸ್ತೆ) ಹಾಗೂ...

ಗೃಹಜ್ಯೋತಿಗೆ ಜಾತಿ ಭೂತ: ಉಚಿತ ವಿದ್ಯುತ್ ನೀಡಲು ಜಾತಿ ಪ್ರಮಾಣಪತ್ರ ಕಡ್ಡಾಯ ಯಾಕೆ? – ಇದು ಯಾವ ಸೀಮೆ ಗ್ಯಾರಂಟಿ ಎಂದ ಆರ್ ಅಶೋಕ್!

ಗೃಹಜ್ಯೋತಿಗೆ ಜಾತಿ ಭೂತ: ಉಚಿತ ವಿದ್ಯುತ್ ನೀಡಲು ಜಾತಿ ಪ್ರಮಾಣಪತ್ರ ಕಡ್ಡಾಯ ಯಾಕೆ? – ಇದು ಯಾವ ಸೀಮೆ ಗ್ಯಾರಂಟಿ ಎಂದ ಆರ್ ಅಶೋಕ್!

by Shwetha
July 2, 2026
0

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಗೃಹಜ್ಯೋತಿ ಯೋಜನೆ ಈಗ ಹೊಸ ವಿವಾದಕ್ಕೆ ನಾಂದಿ ಹಾಡಿದೆ. ಪ್ರತಿ ತಿಂಗಳು 200 ಯೂನಿಟ್ ಉಚಿತ ವಿದ್ಯುತ್ ನೀಡುವ ಈ ಯೋಜನೆಗೆ ಈಗ...

ಬೆಂಗಳೂರಿನ ವಾಹನ ಸವಾರರಿಗೆ ಮತ್ತೊಂದು ಶಾಕ್; ಪ್ರಮುಖ ಟೋಲ್ ರಸ್ತೆಗಳಲ್ಲಿ ದರ ಏರಿಕೆ

ಬೆಂಗಳೂರಿನ ವಾಹನ ಸವಾರರಿಗೆ ಮತ್ತೊಂದು ಶಾಕ್; ಪ್ರಮುಖ ಟೋಲ್ ರಸ್ತೆಗಳಲ್ಲಿ ದರ ಏರಿಕೆ

by Shwetha
July 2, 2026
0

ಬೆಂಗಳೂರಿನ ವಾಹನ ಸವಾರರಿಗೆ ಮತ್ತೊಂದು ಬೆಲೆ ಏರಿಕೆ ಹೊರೆ ಎದುರಾಗಿದೆ. ನಗರದ ಪ್ರಮುಖ ಟೋಲ್ ರಸ್ತೆಗಳ ಬಳಕೆಯ ಶುಲ್ಕವನ್ನು ಪರಿಷ್ಕರಿಸಲಾಗಿದ್ದು, ಇಂದಿನಿಂದ ಹೊಸ ಟೋಲ್ ದರಗಳು ಜಾರಿಗೆ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram