BIGGBOSS 8 – ‘ಕಾಮನಬಿಲ್ಲಿಗೂ ಕಲರ್ ಕಲರ್ ಕಾಗೆ ಹಾರಿಸುತ್ತಾರಂತೆ ಸಂಬರಗಿ’..!

1 min read

BIGGBOSS 8 – ‘ಕಾಮನಬಿಲ್ಲಿಗೂ ಕಲರ್ ಕಲರ್ ಕಾಗೆ ಹಾರಿಸುತ್ತಾರಂತೆ ಸಂಬರಗಿ’..!

ಬೆಂಗಳೂರು : ದೊಡ್ಮನೆಗೆ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಪಡೆದುಕೊಂಡಿರುವ ಪತ್ರಕರ್ತ ಚಕ್ರವರ್ತಿ ಚಂದ್ರಚೂಡ ಮೊದಲ ದಿನವೇ ಮನೆ ಸದಸ್ಯರಿಂದ ನಿಷ್ಠೂರಕ್ಕೆ ಗುರಿಯಾಗಿದ್ದಾರೆ. ಇದಕ್ಕೆ ಕಾರಣ ಅವರ ನೇರ ನುಡಿ. ಮನೆಗೆ ಬರುತ್ತಿದ್ದಂತೆ ಸದಸ್ಯರೆಲ್ಲರಿಗೂ ಅವರ ಹಾವ , ಬಾವ, ನಡೆತೆಯ ಮೇಲೆ ಅವರಿಗೆ ಅಂಕಗಳನ್ನ ನೀಡಿ ಅನೇಕ ಸದಸ್ಯರ ದೃಷ್ಟಿಯಲ್ಲಿ ನೆಗೆಟಿವ್ ಇಮೇಜ್ ಮೂಡಿಸಿದ್ದಾರೆ.

ಇದೀಗ ವಾರದ ಕಥೆ ಕಿಚ್ಚನ ಜೊತೆ ಸಂಚಿಕೆಯಲ್ಲಿ ಪ್ರಶಾಂತ್ ಸಂಬರಗಿ ಬಗ್ಗೆ ಒಂದು ಮಾತನ್ನ ಹೇಳಿ ಗಮನ ಸೆಳೆದಿದ್ದಾರೆ. ಹೌದು..  ಈ ಕುರಿತಾಗಿ ಒಂದು ಕವಿತೆಯನ್ನೇ ಬರೆದಿದ್ದ ಚಕ್ರವರ್ತಿ ‘ಕಲ್ಲದೇವರನ್ನೇ ಕಡಿದು ದೇವರಾಗಿಸಿದವನು, ಮೊಸಳೆಯ ಸಾಕಿ ಹಸುಳೆಯನ್ನಾಗಿಸಿದವನು, ಕಡಲನೇ ತಂದು ಮಡಿಲಿಗೆ ಸುರಿದವನು. ಕಾಮನ ಬಿಲ್ಲಿಗೆ ಬಣ್ಣ ಬಣ್ಣಗಳ ಕಲರ್ ಕಾಗೆ ಹಾರಿಸಿದವನು’ ಎಂಬ ಸಾಲುಗಳನ್ನ ಹೇಳಿದ್ದಾರೆ. ಇವರ ಕವಿತೆ ಕೇಳಿ ಕಿಚ್ಚ ಸುದೀಪ್ ಹಾಗೂ ಮನೆ ಮಂದಿ ಜೊತೆಗೆ ಖುದ್ದು ಪ್ರಶಾಂತ್ ಸಂಬರಗಿ ಕೂಡ ನಕ್ಕಿದ್ದಾರೆ.

ಈ ವೇಳೆ ಕಿಚ್ಚ ಸುದೀಪ್ ಪ್ರಶಾಂತ್ ಸಂಬರ್ಗಿಯವರೆ ನಿಮಗೆ ಯಾಕೆ ಈ ಸಾಲುಗಳನ್ನು ಹೇಳಿದರು ಎಂದು ಪ್ರಶ್ನಿಸುತ್ತಾರೆ. ಇದಕ್ಕೆ ಪ್ರಶಾಂತ್ ಗೊತ್ತಿಲ್ಲ ಎಂದಾಗ ಸುದೀಪ್ ಹಾಸ್ಯಮಯವಾಗಿ ನಿಮಗೆ ಗೊತ್ತಿಲ್ವಾ ಎನ್ನುತ್ತಾ ನಗುತ್ತಾರೆ.

ಬಳಿಕ ಸುದೀಪ್ ಚಕ್ರವರ್ತಿವಯರೇ ಯಾಕೆ ಪ್ರಶಾಂತ್ ಸಂಬರ್ಗಿಯವರ ಮೇಲೆ ಈ ಸಾಹಿತ್ಯ ಬರೆದಿದ್ದೀರಾ ವಿವರಿಸಿ  ಎಂದು ಹೇಳ್ತಾರೆ.  ಚಕ್ರವರ್ತಿ ವಿವರಣೆ ನೀಡಿ ಕಲ್ಲದೇವರನ್ನೇ ಕಡಿದು ದೇವರಾಗಿಸಿದವನು ಎಂದರೆ ಕಲ್ಲಾಗಿದ್ದಾಗ ಅದು ಯಾರಿಗೂ ಬೇಡವಾಗಿರುತ್ತದೆ, ಆದರೆ ಅದು ದೇವರಾದಾಗ ಎಲ್ಲರಿಗೂ ಬೇಕಾಗುತ್ತದೆ. ಒಂದು ಬೇಡವಾಗಿರುವುದನ್ನು ಬೇಕಾಗಿಸುವಂತಹ ಶಕ್ತಿ ಪ್ರಶಾಂತ್‍ ರವರಿಗೆ ಇದೆ.

ಮೊಸಳೆಯ ಸಾಕಿ ಹಸುಳೆಯನ್ನಾಗಿಸಿದವನು ಎಂದರೆ ಮೊಸಳೆ ನೀರಿನಲ್ಲಿದ್ದಾಗ ಯಾರಾದರೂ ಹೋದರೆ, ಒಮ್ಮೆ ಅದು ಹಿಡಿದುಕೊಂಡರೆ ಬಿಡುವುದಿಲ್ಲ. ಆದರೆ ಅದನ್ನು ಮಗುವಿನಂತೆ ಮಾಡಿಸುತ್ತಾನೆ ಎಂದರೆ ಅವನು ನೂರಾರು ಬ್ರಹ್ಮಗಳಿಗೆ ತಂದೆ ಎಂದರ್ಥ. ಕಡಲನೇ ತಂದು ಮಡಿಲಿಗೆ ಸುರಿದ ಎಂದರೆ ಈ ಮನುಷ್ಯ ಯಾರಿಗಾದರೂ ಸಂತೋಷ ಕೊಡಲು ಪ್ರಾರಂಭಿಸಿದರೆ, ಸಾಕಷ್ಟು ಅಷ್ಟು ಸಂತೋಷ ಕೊಡುವ ತಾಕತ್ತಿದೆ. ಹಾಗೇಯೇ ಅಷ್ಟೇ ಕಾಟವನ್ನು ಕೂಡ ಕೊಡುತ್ತಾನೆ. ಕಾಮನ ಬಿಲ್ಲಿಗೆ ಬಣ್ಣ ಬಣ್ಣಗಳ ಕಲರ್ ಕಾಗೆ ಹಾರಿಸಿದವನು ಅಂದರೆ ಕಾಮನ ಬಿಲ್ಲು ಶಾಶ್ವತ ಅಲ್ಲ ಹೀಗೆ ಬಂದು ಹೀಗೆ ಹೋಗುತ್ತದೆ. ಸುಳ್ಳನ್ನೆ ತಂದು, ಸುಳ್ಳನ್ನೇ ಅಡುಗೆ ಮಾಡಿ, ಸುಳ್ಳನ್ನೇ ಬಡಿಸುವಷ್ಟು ಸತ್ಯವಂತ ಅಂತ ನಾನು ಭಾವಿಸಿದ್ದೇನೆ ಎಂದು ಬಣ್ಣಿಸಿದ್ದಾರೆ.

ಅಂದ್ಹಾಗೆ ಪ್ರಶಾಂತ್ ಸಂಬರಗಿ ಹಾಗೂ ಚಕ್ರವರ್ತಿ ನೋಡಿದ್ರೆ ತುಂಬಾ ವ್ಯತ್ಯಾಸವೇನು ಎಲ್ಲ. ಇಬ್ಬರೂ ಒಂದೇ ಮನಸ್ಥಿತಿಯವರು ಎಂಬಂತೆ ಕಾಣುತ್ತೆ. ಒಂದೇ ನಾಣ್ಯದ 2 ಮುಖಗಳಂತೆ ಇವರಿಬ್ಬರ ನಡುವೆ ನೆಟಗಟಿರು ಹೋಲಿಕೆ ಮಾಡ್ತಿದ್ಧಾರೆ.

ಐಪಿಎಲ್ 2021-ಪಡಿಕ್ಕಲ್ ಗೆ ಕೊರೋನಾ… ಕೊಹ್ಲಿ ಜೊತೆ ಇನಿಂಗ್ಸ್ ಆರಂಭಿಸೋದು ಯಾರು ?

BIGGBOSS 8 – ಚಕ್ರವರ್ತಿ ತುಂಬಾ ಡಾಮಿನೇಟಿಂಗ್ ಎಂದು ರೇಟ್ ಕೊಟ್ಟ ಸದಸ್ಯರು..!

50 % ಸೀಟಿಂಗ್ ನಿರ್ಬಂಧದಲ್ಲಿ ಸಡಿಲಿಕೆ – ಸರ್ಕಾರಕ್ಕೆ ಥ್ಯಾಂಕ್ಸ್ ಹೇಳಿದ ಅಪ್ಪು..!

ಬಾಲಿವುಡ್ ನ ಆಕ್ಷನ್ ಕಿಂಗ್ ಅಕ್ಷಯ್ ಕುಮಾರ್ ಗೂ ಕೊರೊನಾ ಪಾಸಿಟಿವ್..!

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd