ಬಿಬಿಎಂಪಿ ಬಜೆಟ್ ಮಂಡನೆ : ಪ್ರಮುಖ ಅಂಶಗಳು ಇಲ್ಲಿವೆ..!!
ಬೆಂಗಳೂರು : ಕೊರೊನಾ ನಡುವೆಯೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಪ್ರಸ್ತುತ ಸಾಲಿನಲ್ಲಿ 9286.80 ಕೋಟಿ ರೂ. ಮೊತ್ತದ ಬಜೆಟ್ ಮಂಡನೆಯಾಗಿದೆ.
9286.80 ಕೋಟಿ ರೂ. ಮೊತ್ತದ ಬಜೆಟ್ ನ ಪ್ರಮುಖ ಅಂಶಗಳು
ಪೌರ ಕಾರ್ಮಿಕರ ಮಕ್ಕಳಿಗೆ 1 ಲಕ್ಷ ಬೋಧನಾ ಶುಲ್ಕ ಮರುಪಾವತಿ
ಸೈಕಲ್ ಪಾತ್ ನಿರ್ಮಾಣಕ್ಕೆ ಹೆಚ್ಚಿನ ಆದ್ಯತೆ
ಬಿಬಿಎಂಪಿ ಶಾಲೆಗಳ ಅಭಿವೃದ್ಧಿಗೆ 84 ಕೋಟಿ ಮೀಸಲು
ನಮ್ಮ ಗಾರ್ಡನ್ ಸಿಟಿ ಯೋಜನೆಯಡಿ ಉದ್ಯಾನವನ ಅಭಿವೃದ್ಧಿ
ವಾಯು ಗುಣಮಟ್ಟ ನಿರ್ವಹಣೆಗೆ 279 ಕೋಟಿ ಮೀಸಲು
ಎಸ್ಎಸ್ಎಲ್ ಸಿ ಮತ್ತು ಪಿಯುಸಿಯಲ್ಲಿ ಶೇಕಡಾ 85 ರಷ್ಟು ಅಂಕ ಪಡೆದ ವಿದ್ಯಾರ್ಥಿಗಳಿಗೆ 25 ಸಾವಿರ, ಶೇ 60 ರಷ್ಟು ವಿದ್ಯಾರ್ಥಿಗಳು ಶೇ 85 ರಷ್ಟು ಅಂಕ ಪಡೆದ ಶಿಕ್ಷಕರಿಗೆ 2 ಲಕ್ಷ ಪೆÇ್ರೀತ್ಸಾಹ ಧನ
ನಗರದಲ್ಲಿ ಕೊರೊನಾ ನಿಯಂತ್ರಣಕ್ಕೆ 337 ಕೋಟಿ ಅನುದಾನ
ಬೀದಿ ನಾಯಿಗಳ ಹಾವಳಿ ತಡೆಯಲು 5 ಕೋಟಿ ಮೀಸಲು
ಆಸ್ತಿ ತೆರಿಗೆ ದರ ಹೆಚ್ಚಳ ಮಾಡಿಲ್ಲ.
ಸಂಪನ್ಮೂಲ ಕ್ರೋಢೀಕರಣಕ್ಕೆ ಕೈ ಬಿಟ್ಟು ಹೋಗಿರುವ ಎಲ್ಲಾ ಆಸ್ತಿಗಳನ್ನು ತೆರಿಗೆ ವ್ಯಾಪ್ತಿಗೆ ತರುವುದು
ಕೆ.ಆರ್.ಮಾರುಕಟ್ಟೆ ಕಟ್ಟಡ ಅಡಮಾನ ಮುಕ್ತ ಮಾಡುವುದು
ಪ್ರಸ್ತುತ ವರ್ಷ 10 ಲಕ್ಷ ಸಸಿ ನೆಡಲು ಕ್ರಮ
ರಾಜಕಾಲುವೆ ಹೂಳು ತೆಗೆಯಲು 60 ಕೋಟಿ
ಸಾಂಸ್ಕøತಿಕ , ಕ್ರೀಡಾ ಚಟುವಟಿಕೆಗಳಿಗೆ 21.75 ಕೋಟಿ ಮೀಸಲು
ಬಿಬಿಎಂಪಿ ಕೌನ್ಸಿಲ್ ಕಟ್ಟಡ ನವೀಕರಣಕ್ಕೆ 10 ಕೋಟಿ ಮೀಸಲು
ಪಾಲಿಕೆ ಶಾಲೆಯಲ್ಲಿ ಓದಿದ ವಿದ್ಯಾರ್ಥಿಗಳಿಗೆ ಆರ್ಥಿಕ ಸಹಾಯ
ಕೌನ್ಸಿಲ್ ಕಟ್ಟಡ ನವೀಕರಣಕ್ಕೆ ಹತ್ತು ಕೋಟಿ ಅನುದಾನ ಮೀಸಲಿಡಲಾಗಿದೆ.
ಆಸ್ತಿ ತೆರಿಗೆಯಿಂದ 2800 ಕೋಟಿ, ಕರಗಳಿಂದ 3500 ಕೋಟಿ ಸಂಗ್ರಹದ ನಿರೀಕ್ಷೆ ಮಾಡಲಾಗಿದೆ.
116 ಮಾರುಕಟ್ಟೆ ಸಂಕೀರ್ಣಗಳು, 5918 ಅಂಗಡಿಗಳಿಂದ ವರ್ಷಕ್ಕೆ 23 ಕೋಟಿ ರೂ ಮಾತ್ರ ಬಾಡಿಗೆ ಸಂಗ್ರಹ ಆಗುತ್ತಿತ್ತು. ಈ ವರ್ಷ 38 ಕೋಟಿ ನಿರೀಕ್ಷೆ ಮಾಡಲಾಗಿದೆ.
ಈ ಬಾರಿ 3500 ಕೋಟಿ ಆಸ್ತಿ ತೆರಿಗೆ ಸಂಗ್ರಹ ನಿರೀಕ್ಷೆ ಮಾಡಲಾಗಿದೆ.
ಬಜೆಟ್ ನಲ್ಲಿ ಸಮಾಜ ಕಲ್ಯಾಣ ಇಲಾಖೆಗೆ 546 ಕೋಟಿ ಮೀಸಲಿಡಲಾಗಿದೆ.
ಒಂಟಿ ಮನೆ ಯೋಜನೆಯಡಿ ನಿವೇಶನ ಕಟ್ಟಲು 900 ಕೋಟಿ ಮೀಸಲು
ಆಸ್ತಿ ನೋಂದಣಿಗೆ ಶೇ 2 ರಷ್ಟು ಸ್ಟಾಂಪ್ ಡ್ಯೂಟಿ ಸಂಗ್ರಹಕ್ಕೆ ಕ್ರಮ ಹಾಗೆ 200 ಕೋಟಿ ಆದಾಯ ನಿರೀಕ್ಷೆ
ಭಿಕ್ಷುಕರ ಸೆಸ್ ಹಣದಿಂದ ನಿರಾಶ್ರಿತರ ತಾಣ ನಿರ್ಮಾಣಕ್ಕೆ ಕ್ರಮ
ಕಸ ಸಂಗ್ರಹಣೆಗೆ ಟೆಂಡರ್ ಕರೆಯಲು ಅಗತ್ಯ ಕ್ರಮ
ಇಡೀ ನಗರದಲ್ಲಿ ಬ್ಲಾಕ್ ಸ್ಪಾಟ್ ಇಲ್ಲದ ರೀತಿ ಅಗತ್ಯ ಕ್ರಮ ತೆಗೆದುಕೊಳ್ಳುವುದು. ಹಾಗೆ ಬ್ಲಾಕ್ ಸ್ಪಾಟ್ ಇಲ್ಲದ ವಾರ್ಡ್ಗಳಿಗೆ 50 ಲಕ್ಷ ಪ್ರೋತ್ಸಾಹ ಹಣ ನೀಡುವುದು.