ಬೆಂಗಳೂರು ನಗರದಲ್ಲಿ ಬೀದಿ ನಾಯಿಗಳ ದಾಳಿಗಳ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಹೊಸ ಪ್ರಯೋಗಕ್ಕೆ ಮುಂದಾಗಿದೆ.
ಬೀದಿನಾಯಿಗಳಿಗೆ ತರಬೇತಿ ಕೊಡಿಸಲು BBMP ನಿರ್ಧರಿಸಿದ್ದು, ಇದಕ್ಕಾಗಿ ಪೊಲೀಸ್ ಡಾಗ್ ಟ್ರೈನರ್‌ಗಳನ್ನು ಬಳಸುವ ಯೋಜನೆ ಇದೆ. ನಾಯಿಗಳ ಚಲನೆ, ವರ್ತನೆಗಳನ್ನು ನಿಯಂತ್ರಿಸಲು ಹಾಗೂ ಮನುಷ್ಯರ ಮೇಲೆ ದಾಳಿ ತಪ್ಪಿಸಲು ಈ ಕ್ರಮ ಕೈಗೊಳ್ಳಲಾಗುತ್ತಿದೆ.
ಪ್ರತಿಯೊಬ್ಬ ಟ್ರೈನರ್‌ಗೆ ದಿನಕ್ಕೆ ₹233 ಸಂಬಳ ನೀಡುವ ಪ್ರಸ್ತಾವನೆ ಪಾಲಿಕೆ ಮಾಡಿದ್ದು, ಇದರ ಮೂಲಕ ಬೀದಿನಾಯಿಗಳನ್ನು ನಿಯಂತ್ರಣಕ್ಕೆ ತರಲು ಉದ್ದೇಶಿಸಿದೆ.
ಆದರೆ ಈ ನಿರ್ಧಾರ ಜನಮನದಲ್ಲಿ ಪ್ರಶ್ನೆ ಹುಟ್ಟಿಸಿದೆ. ಬೀದಿ ನಾಯಿಗಳನ್ನು ತಕ್ಷಣ ನಿಯಂತ್ರಿಸಲು ಅಗತ್ಯ ಕ್ರಮ ತೆಗೆದುಕೊಳ್ಳುವ ಬದಲು, ಕೆಲಸಕ್ಕೆ ಬಾರದ ಪ್ರಯೋಗ ಮಾಡುತ್ತಿದೆ BBMP ಎಂದು ಸಾರ್ವಜನಿಕರು ಟೀಕೆ ವ್ಯಕ್ತಪಡಿಸಿದ್ದಾರೆ.
ಇದೀಗ BBMPಯ ಈ ನಿರ್ಧಾರ ಯಶಸ್ವಿಯಾಗುತ್ತದೆಯೇ ಅಥವಾ ಮತ್ತೊಂದು ವಿಫಲ ಪ್ರಯತ್ನವಾಗುತ್ತದೆಯೇ ಎಂಬ ಕುತೂಹಲ ಮೂಡಿದೆ.







