ಲಂಡನ್ : ಜಗತ್ತನ್ನೇ ತಲ್ಲಣಗೊಳಿಸಿರುವ ಹೆಮ್ಮಾರಿ ಕೊರೊನಾ ವೈರಸ್ ಸೋಂಕಿಗೆ ಲಸಿಕೆ ಕಂಡು ಹಿಡಿಯಲು ಎಲ್ಲಾ ದೇಶಗಳು ಸಾಕಷ್ಟು ಪ್ರಯತ್ನಿಸುತ್ತಿವೆ. ಅದರಂತೆ ಇಂಗ್ಲೆಂಡ್ ಕೂಡ ಕೊರೊನಾಗೆ ಔಷಧಿ ಕಂಡು ಹಿಡಿಯಲು ಮುಂದಾಗಿದೆ. ಅದರ ಭಾಗವಾಗಿ ಇದೀಗ ಇಂಗ್ಲೆಂಡ್, ಹೊಸ ಲಸಿಕೆಯನ್ನು ತಯಾರಿಸಿದ್ದು, ಪ್ರಾಣಿಗಳ ಮೇಲೆ ಪ್ರಯೋಗ ಯಶಸ್ವಿಯಾದ ಬಳಿಕ ಮನುಷ್ಯರ ಮೇಲೆ ಪ್ರಯೋಗ ನಡೆಸಿದೆ.
ಲಂಡನ್ ನ ಇಂಪೀರಿಯಲ್ ಕಾಲೇಜಿನಲ್ಲಿ ರಾಬಿನ್ ಶಟ್ಟಾಕ್ ಮತ್ತು ಅವರ ಸಹೋದ್ಯೋಗಿಗಳ ನೇತೃತ್ವದಲ್ಲಿ ಮುಂಬರುವ ವಾರಗಳಲ್ಲಿ ಸುಮಾರು 300 ಜನರಿಗೆ ಈ ಲಸಿಕೆ ನೀಡಲಾಗುವುದು. ಈ ಲಸಿಕೆಯನ್ನು ಪಡೆಯಲು 300 ಸ್ವಯಂಸೇವಕರು ಮುಂದೆ ಬಂದಿದ್ದಾರೆ.
ಅಂದಹಾಗೆ ಈ ಲಸಿಕೆ ಪರಿಣಾಮಕಾರಿ ರೋಗನಿರೋಧಕ ಪ್ರತಿಕ್ರಿಯೆಯನ್ನು ಪ್ರಚೋದಿಸುತ್ತದೆ. ಹೀಗಾಗಿ ಆಕ್ಸ್ಫರ್ಡ್ ವಿಶ್ವವಿದ್ಯಾಲಯದ ತಜ್ಞರು ಈಗಾಗಲೇ ಮಾನವ ಪ್ರಯೋಗಗಳನ್ನು ಪ್ರಾರಂಭಿಸಿದ್ದಾರೆ ಎಂದು ಬಿಬಿಸಿ ವರದಿ ಮಾಡಿದೆ.
ಇನ್ನು ಈ ಲಸಿಕೆಯ ಮೊದಲ ಹಂತದ ಪ್ರಯೋಗ ಯಶಸ್ವಿಯಾದ ಬಳಿಕ, 6,000 ಜನರನ್ನು ಒಳಗೊಂಡಂತೆ ಅಕ್ಟೋಬರ್ನಲ್ಲಿ ಮತ್ತೊಂದು ಪ್ರಯೋಗವನ್ನು ಯೋಜಿಸಲಾಗಿದೆ ಎಂದು ವರದಿಗಳು ತಿಳಿಸಿವೆ.