ಹೆಂಡತಿಯೊಂದಿಗೆ ಅಸಭ್ಯ ವರ್ತನೆ – ಗೆಳಯನನ್ನ ಕೊಂದು ಅರಣ್ಯದಲ್ಲಿ ಬಿಸಾಕಿದ….
ತನ್ನ ಹೆಂಡತಿಯೊಂದಿಗೆ ಅಸಭ್ಯ ವರ್ತನೆ ಮಾಡಿದ್ದ ಸ್ನೇಹಿತನನ್ನು ಹತ್ಯೆ ಮಾಡಿ ಅರಣ್ಯದಲ್ಲಿ ಬೀಸಾಕಿದ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಕರೋಶಿ ಗ್ರಾಮದಲ್ಲಿ ನಡೆದಿದೆ.
ಕರೋಶಿ ಗ್ರಾಮದ ಸುನೀಲ್ ಮಹಾದೇವ ಸಾಳುಂಕೆ (25) ಮೃತ ಯುವಕ. ಈತನಿಗೆ ಅದೇ ಗ್ರಾಮದ ಮಹಾಂತೇಶ್ ತಳವಾರ್ ಎಂಬಾತ ಸ್ನೇಹಿತನಾಗಿದ್ದ ಆದರೆ ಸುನೀಲ್ ಎಂಬಾತ ಮಹಾಂತೇಶ್ ಪತ್ನಿಯೊಂದಿಗೆ ಅಸಭ್ಯವಾಗಿ ಅಸಭ್ಯವಾಗಿ ವರ್ತಿಸಿದ್ದಾನೆ. ಇದನ್ನ ತಿಳಿದ ನಂತರ ಆತನನ್ನು ಕೊಲೆ ಮಾಡಲು ಮಹಂತೇಶ್ ಹೊಂಚು ಹಾಕಿದ್ದಾನೆ.
ಸುನೀಲ್‌ನನ್ನು ಆತನ ಬೈಕ್‌ನಲ್ಲೇ ಕರೆದುಕೊಂಡು ಹೋಗಿ ಕೊಲೆ ಮಾಡಿದ್ದಾನೆ. ನಂತರ ಕರೋಶಿ ಗ್ರಾಮದ ಹತ್ತಿರವಿರುವ ಅರಣ್ಯದಲ್ಲಿ ಸುನೀಲ್‌ನ ಶವವನ್ನು ಎಸೆದು ಹೋಗಿದ್ದಾನೆ. ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನ ಬಂಧಿಸಿ ಜೈಲಿಗಟ್ಟಿದ್ದಾರೆ.
Belagavi: Indecent behavior with wife – friend killed and dumped in forest….