ಬೆಳಗಾವಿ ಲೋಕಸಭಾ ಚುನಾವಣೆ : ಪ್ರಚಾರಕ್ಕೆ ಜಾರಕಿಹೊಳಿ ಬರ್ದರ್ಸ್ ಬರುತ್ತಾರೆ..!  – ಶೆಟ್ಟರ್

1 min read

ಬೆಳಗಾವಿ ಲೋಕಸಭಾ ಚುನಾವಣೆ : ಪ್ರಚಾರಕ್ಕೆ ಜಾರಕಿಹೊಳಿ ಬರ್ದರ್ಸ್ ಬರುತ್ತಾರೆ..!  – ಶೆಟ್ಟರ್

ಬೆಳಗಾವಿ : ಬೆಳಗಾವಿ ಲೋಕಸಭೆ ಉಪ ಚುನಾವಣೆ ಕುರಿತು ಸಚಿವ ಜಗದೀಶ್ ಶೆಟ್ಟರ್ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಬೆಳಗಾವಿಯಲ್ಲಿ ಮಾತನಾಡಿರೋ ಅವರು  ಪ್ರಚಾರ ಕುರಿತು ಪೂರ್ವಭಾವಿ ಸಭೆ ಮಾಡ್ತಿದ್ದೇವೆ. ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ನಾನು, ಸಚಿವರು, ಶಾಸಕರು ಒಳಗೊಂಡ ಮುಖಂಡರು ಚರ್ಚೆ ಮಾಡ್ತಿವಿ.

ಬಿಜೆಪಿ ಅಭ್ಯರ್ಥಿ ಘೋಷಣೆ ಆಗಿದೆ‌. ನಾಮಪತ್ರ ಸಲ್ಲಿಕೆ, ಚುನಾವಣಾ ಪ್ರಚಾರದ ರಣತಂತ್ರ ಕುರಿತು ಚರ್ಚೆ ನಡೆಯಲಿದೆ. ಈ ಬಾರಿಯೂ ಬಿಜೆಪಿ ಅಭ್ಯರ್ಥಿ ಗೆಲುವು ಖಚಿತ. ಬೆಳಗಾವಿ ಲೋಕಸಭೆ ಉಪ ಚುನಾವಣೆಯಲ್ಲಿ ಬಿಜೆಪಿ ಕಾಂಗ್ರೆಸ್ ಮಧ್ಯೆ ನೇರಾನೇರ ಫೈಟ್ ಇದೇ. ಜೆಡಿಎಸ್ ನವರು ಅಭ್ಯರ್ಥಿ ಹಾಕ್ತಿಲ್ಲ. ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಜಾರಕಿಹೊಳಿ‌ ಅನ್ನೋದು ಚರ್ಚೆಗೆ ಬರಲ್ಲ. ಇಲ್ಲಿ ಕಾಂಗ್ರೆಸ್ ಬಿಜೆಪಿ ಮಧ್ಯೆ ಚುನಾವಣೆ ನಡೆಯಲಿದೆ. ಪ್ರಧಾನಿ ಮೋದಿ, ಸಿಎಂ ಯಡಿಯೂರಪ್ಪ ಆಗಲಿ ಬಿಜೆಪಿ ಸರ್ಕಾರದ ವಿರುದ್ಧವಾದ ಅಲೆ ಇಲ್ಲ. ಕಾಂಗ್ರೆಸ್ ನವರು ಸುಖಾಸುಮ್ಮನೆ ಅಪಪ್ರಚಾರ ಮಾಡುತ್ತಿದ್ದಾರೆ ಎಂದಿದ್ದಾರೆ.

ಇದೇ ವೇಳೆ ರಮೇಶ್ ಜಾರಕಿಹೊಳಿ‌ ಸಿಡಿ ಪ್ರಕರಣ ವಿಚಾರವಾಗಿ ಮಾತನಾಡಿದ ಸಚಿವರು ಈ ಚುನಾವಣೆಯಲ್ಲಿ ಸಿಡಿ ವಿಚಾರ ಪ್ರಭಾವ ಬೀರಲ್ಲ. ಸಿಡಿ ಕುರಿತು ಜನರಲ್ಲಿ ಸಾಕಷ್ಟು ಸಂಶಯಗಳು ಮೂಡಿವೆ. ಸಿಡಿ ಪ್ರಕರಣದ ತನಿಖೆ ಎಸ್ಐಟಿ ನಡೆಸುತ್ತಿದೆ. ತನಿಖೆ ಯಿಂದ ಸತ್ಯ ಹೊರಗೆ ಬರಬೇಕಿದೆ. ಇನ್ನೂ ಲೋಕಸಭಾ ಚುನಾವಣಾ ಪ್ರಚಾರಕ್ಕೆ ಜಾರಕಿಹೊಳಿ‌ ಬ್ರದರ್ಸ್ ಬರ್ತಾರೆ. ಬಾಲಚಂದ್ರ ಜಾರಕಿಹೊಳಿ‌, ರಮೇಶ್ ಜಾರಕಿಹೊಳಿ‌ ಪ್ರಚಾರಕ್ಕೆ ಬರ್ತಾರೆ. ಈ ಬಗ್ಗೆ ನಾನು ಅವರೊಂದಿಗೆ ಮಾತನಾಡಿರುವೆ ಎಂದು ತಿಳಿಸಿದ್ದಾರೆ.

ಸಿಡಿ ವಿಚಾರವಾಗಿ ನೋ ಕಮೇಂಟ್ಸ್ – ಉಮೇಶ್ ಕತ್ತಿ

ಕೆ.ಹೆಚ್.ಮುನಿಯಪ್ಪರನ್ನ ಕಾಂಗ್ರೆಸ್ ಪಕ್ಷದಿಂದ ಉಚ್ಛಾಟಿಸಿ : ವರ್ತೂರು ಪ್ರಕಾಶ್

ಅವರನ್ನು ಟ್ರ್ಯಾಕ್ ಮಾಡಿದ್ದು ನಿಜ : ಡಿ.ಕೆ.ಶಿವಕುಮಾರ್

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd