ಜೆಡಿಎಸ್ ಭದ್ರಕೋಟೆ ಬೇಲೂರಿನಲ್ಲಿ “ಕೈ”ಗೆ ಅಧಿಕಾರ
ಹಾಸನ : ಜೆಡಿಎಸ್ ಭದ್ರಕೋಟೆ ಬೇಲೂರಿನಲ್ಲಿ ಕಾಂಗ್ರೆಸ್ ಬಾವುಟ ಹಾರಿದೆ.
ಬೇಲೂರು ಪುರಸಭೆಗೆ ನಡೆದ ಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು ಕಾಂಗ್ರೆಸ್ ಅಧಿಕಾರ ಹಿಡಿದಿದೆ.
ಕಾಂಗ್ರೆಸ್ 17 ಸ್ಥಾನಗಳನ್ನು ಪಡೆದು ಭರ್ಜರಿ ಗೆಲುವು ಸಾಧಿಸಿದೆ.
ಕಳೆದ ಬಾರಿ 13 ಸ್ಥಾನಗಳನ್ನು ಗೆದ್ದಿದ್ದ ಜೆಡಿಎಸ್ ಅಧಿಕಾರದ ಚುಕ್ಕಾಣಿಯನ್ನು ಹಿಡಿದಿತ್ತು.
ಆದರೆ ಈ ಬಾರಿ ಕೇವಲ ಐದು ಸ್ಥಾನಗಳಿಗೆ ಸೀಮಿತವಾಗಿ ತೀವ್ರ ಮುಖಭಂಗ ಅನುಭವಿಸಿದೆ.
ಇನ್ನು ಬಿಜೆಪಿ ಪಕ್ಷ ಕೇವಲ 1 ಸ್ಥಾನ ಪಡೆಯುವ ಮೂಲಕ ತನ್ನ ಖಾತೆಯನ್ನು ತೆರೆದಿದೆ.