Bengaluru : ಪಬ್ ನಲ್ಲಿ ಕನ್ನಡ ಕಡೆಗಣನೆ – ಮ್ಯಾನೇಜರ್ ಕ್ಷಮೆಯಾಚನೆ
ಬೆಂಗಳೂರು : ಕೋರಮಂಗಲದ ಬಳಿಯ ಬದ್ಮಾಶ್ ಪಬ್ ನಲ್ಲಿ ಕನ್ನಡ ಕಡಡೆಗಣನೆ ಹಿನ್ನೆಲೆ ಕನ್ನಡಪರ ಹೋರಾಟಗಾರರು ಆಕ್ರೋಶ ಹೊರಹಾಕಿದ್ದಾರೆ… ಆದ್ರೆ ಅವರನ್ನ ಸಮಾಧಾನಪಡಿಸಲು ಪ್ರಯತ್ನಿಸಿರುವ ಪಬ್ ನ ಮ್ಯಾನೇಜರ್ ನಿನ್ನೆ ನಾನಿಲ್ಲದಾಗ ಡಿಜೆ ಈ ರೀತಿ ವರ್ತಿಸಿದ್ದಾನೆ..
ನಾನು ಕೂಡ ಕನ್ನಡ ಅಭಿಮಾನಿ.. ನಾನೂ ಕನ್ನಡ ಓದಿ, ಬರದಿದ್ದೀನಿ..ಮುಂದೆ ಈ ರೀತಿ ರಿಪೀಟ್ ಆಗಲ್ಲ.. ಆ ಡಿಜೆ ಬಗ್ಗೆ ಮಾಹಿತಿ ಪಡೆದು ಅಮಾನತಿನ ಬಗ್ಗೆ ಚರ್ಚೆ ಮಾಡ್ತೀವಿ.. ಇನ್ಮೇಲೆ ದಿನ ಕನ್ನಡ ಹಾಡು ಹಾಕ್ತೀವಿ.. ನಾನಿದ್ದಾಗ ಈ ರೀತಿ ಆಗಲ್ಲ.. ಕನ್ನಡ ಹಾಡುಗಳನ್ನ ಹಾಕಿಸ್ತೀನಿ ಎಂದು ಬದ್ಮಾಶ್ ಪಬ್ ಮ್ಯಾನೇಜರ್ ಡಾಮನಿಕ್ ಹೇಳಿಕೆ ನೀಡಿದ್ದಾರೆ ..
ಕರ್ನಾಟಕದಲ್ಲೇ ಇರುವ ಪಬ್ ಗಳಲ್ಲಿ ಕನ್ನಡ ಹಾಡು ಹಾಕದೆ ಕನ್ನಡ ಭಾಷೆ ಕಡೆಗಣನೆ ಮಾಡ್ತಿರುವ ಅನುಮಾನವೊಂದು ಇದೀಗ ಮೂಡಲಾರಂಭಿಸಿದೆ.
ಬದ್ಮಾಷ್ ಬ್ ಒಂದ್ರಲ್ಲಿ ಯುವತಿ ಮತ್ತಾಕೆ ಕುಟುಂಬವರು ಕನ್ನಡ ಹಾಡು ಹಾಕಿ ಎಂದಿದ್ದಕ್ಕೆ ಡಿಜೆ ಅವಾಚ್ಯ ಶಬ್ಧಗಳಲ್ಲಿ ನಿಂದಿಸಿದ್ದೂ ಅಲ್ದೇ , ಹಲ್ಲೆಗೆ ಯತ್ನಿಸಿರುವ ಘಟನೆ ನಡೆದಿದೆ..
ಈ ಮೂಲಕ ಬೆಳಗಾವಿಯಲ್ಲಿ ಅಷ್ಟೇ ನಮ್ಮ ಕನ್ನಡಿಗರ ಮೇಲೆ ದರ್ಪ ತೋರುತ್ತಿಲ್ಲ.. ಬೆಂಗಳೂರಿನ ಪಬ್ ಗಳಲ್ಲೂ ಇದೇ ಸ್ಥಿತಿ ಇದೆ ಎಂದೆನಿಸುತ್ತಿದೆ..