70ಕ್ಕೆ 73 ಅಂಕ ನೀಡಿದ ವಿಶ್ವವಿದ್ಯಾಲಯ Saaksha Tv
ಬೆಂಗಳೂರು: ರಾಜ್ಯದ ಅತಿ ದೊಡ್ಡ ವಿಶ್ವವಿದ್ಯಾಲಯ ಬೆಂಗಳೂರು ವಿಶ್ವವಿದ್ಯಾಲಯ (Bengaluru University) ಪರೀಕ್ಷೆಯಲ್ಲಿ 70 ಕ್ಕೆ 73 ಅಂಕ ನೀಡಿ ಎಡವಟ್ಟು ಮಾಡಿಕೊಂಡಿದೆ.
ಬಿಕಾಂ 3ನೇ ಸೆಮಿಸ್ಟರ್ ಅಂಕ ಪ್ರಕಟಣೆಯಾಗಿದ್ದು 70 ಕ್ಕೆ 73 ಅಂಕ ನೀಡಿ ನೆಗೆಪಾಟಲಿಗೀಡಾಗಿದೆ. ಬೆಂಗಳೂರು ವಿವಿ ಟ್ರಾವೆಲ್ ಏಜೆನ್ಸಿ ಆ್ಯಂಡ್ ಟೂರ್ ಆಪರೇಟರ್ ವಿಷಯ ಪರಿಕ್ಷೆಯಲ್ಲಿ ವಿದ್ಯಾರ್ಥಿಗಳಿಗೆ ಗರಿಷ್ಠ ಅಂಕಕ್ಕಿಂತ ಹೆಚ್ಚು ಅಂಕ ನೀಡಿದೆ. ವಿವಿಯ ವ್ಯಾಪ್ತಿಗೆ ಬರುವ ಬಹುತೇಕ ಕಾಲೇಜುಗಳ ವಿದ್ಯಾರ್ಥಿಗಳಿಗೆ ಈ ಅಂಕ ನೀಡಿ ಎಡವಟ್ಟು ಮಾಡಿಕೊಂಡಿದೆ.
2021 ಡಿಸೆಂಬರ್ ನಲ್ಲಿ ಪರೀಕ್ಷೆ ನಡೆದಿತ್ತು. 70 ಅಂಕ ಥಿಯರಿ ಮತ್ತು 30 ಅಂಕ ಇಂಟರ್ನಲ್ಸ್ ಸೇರಿ ಒಟ್ಟು 100 ಅಂಕ ನಿಗದಿ ಮಾಡಲಾಗಿತ್ತು. ಆದರೆ ಥಿಯರಿಯಲ್ಲಿ ಗರಿಷ್ಠ 70 ಅಂಕಕ್ಕೆ 73 ಅಂಕ ನೀಡಿದೆ. ಇದು ವಿವಿಯ ಎಡವಟ್ಟಿಗೆ ಕಾರಣವಾಗಿದೆ. ಈ ಅಂಕಗಳನ್ನು ಕಂಡ ವಿದ್ಯಾರ್ಥಿಗಳು ಕಾಲೇಜು ಗಮನಕ್ಕೆ ತಂದಿದ್ದಾರೆ.
ಕೆಲವೊಮ್ಮೆ ವಿದ್ಯಾರ್ಥಿಗಳು ಪಾಸ್ ಆದರೆ ಸಾಕು ಅಂತ ಅಂದುಕೊಂಡಿರುತ್ತಾರೆ. ಹೆಚ್ಚಿನ ಅಂಕ ಪಡೆಯಲು ಕೆಲ ವಿದ್ಯಾರ್ಥಿಗಳು ಹಗಲು ರಾತ್ರಿಯನ್ನದೇ ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಓದಿರುತ್ತಾರೆ. ಆದರೆ ವಿದ್ಯಾರ್ಥಿಗಳು ಈ ಅಂಕಗಳನ್ನು ನೋಡಿ ಆಶ್ಚರ್ಯಗೊಂಡಿದ್ದಾರೆ.