ಬೆಂಗಳೂರು: ಬೆಸ್ಕಾಂ (BESCOM) ಸಿಬ್ಬಂದಿಯ ನಿರ್ಲಕ್ಷ್ಯಕ್ಕೆ ತಾಯಿ ಹಾಗೂ ಮಗಳು ಸಾವನ್ನಪ್ಪಿರುವ ಘಟನೆಯೊಂದು ನಡೆದಿದೆ.
ಈ ಘಟನೆ ನಗರದ ವೈಟ್ ಫೀಲ್ಡ್‌ನ (Whitefield) ಕಾಡುಗೋಡಿಯಲ್ಲಿ (Kadugodi) ನಡೆದಿದ್ದು, ಇಬ್ಬರೂ ದಾರುಣವಾಗಿ ಸಾವನ್ನಪ್ಪಿದ್ದಾರೆ. ತಾಯಿ ಸೌಂದರ್ಯ ಹಾಗೂ ಮಗಳು ಲೀಲಾ ಸಾವನ್ನಪ್ಪಿದವರು ಎನ್ನಲಾಗಿದೆ. ವಿದ್ಯುತ್ ತಂತಿಯೊಂದು ನೆಲದಲ್ಲಿ ಬಿದ್ದಿರುವುದನ್ನು ಯಾರೂ ಗಮನಿಸಿಲ್ಲ. ಅದನ್ನು ತುಳಿದು ವಿದ್ಯುತ್ ಪ್ರವಹಿಸಿದ ಕಾರಣ ಇಬ್ಬರೂ ಸಾವನ್ನಪ್ಪಿದ್ದಾರೆ.
ಇಬ್ಬರೂ ದುರ್ದೈವಿಗಳು ತಮಿಳುನಾಡಿನಿಂದ ನಗರಕ್ಕೆ ಆಗಮಿಸಿದ್ದರು. ಮನೆಗೆ ಬರುತ್ತಿದ್ದ ಸಂದರ್ಭದಲ್ಲಿ ನೆಲದಲ್ಲಿ ಬಿದ್ದಿದ್ದ ತಂತಿಯನ್ನು ಗಮನಿಸಿದೆ ಅದನ್ನು ತುಳಿದಿದ್ದಾರೆ. ಪರಿಣಾಮ ತಾಯಿ ಹಾಗೂ ಮಗಳು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಈ ಕುರಿತು ಕಾಡುಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.