ಮೂಗಿನ ಮೂಲಕ ನೀಡುವ ಕೋವ್ಯಾಕ್ಸಿನ್ ಲಸಿಕೆಗೆ ಕೇಂದ್ರದ ಒಪ್ಪಿಗೆ…
ಕರೋನವೈರಸ್ ಕಾಯಿಲೆ (ಕೋವಿಡ್ -19) ವಿರುದ್ಧ ಹೋರಾಡಲು ಮೂಗಿನ ಮೂಲಕ ಕೊಡಲ್ಪಡುವ ಬೂಸ್ಟರ್ ಡೋಸ್ಗಳ ಮೇಲೆ ಪ್ರಯೋಗಕ್ಕೆ ಭಾರತ್ ಬಯೋಟೆಕ್ಗೆ ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (ಡಿಸಿಜಿಐ) ಶುಕ್ರವಾರ ಅನುಮತಿ ನೀಡಿದೆ.
ಕೋವ್ಯಾಕ್ಸಿನ್ ನ ಎರಡು ಡೋಸ್ ಪಡೆದವರು ಮೂರನೇ ಲಸಿಕೆಯಾಗಿ ಮೂಗಿನ ಮೂಲಕ ನೀಡಲಾಗುವ ಬೂಸ್ಟರ್ ಡೋಸ್ ಪಡೆಯಬಹುದು ಎಮದು ಕಂಪನಿ ತಿಳಿಸಿದೆ.ಮೂಗಿನ ಮೂಲಕ ಪಡೆದುಕೊಳ್ಳುವ ಇಂಟ್ರಾನಾಸಲ್ ಲಸಿಕೆ ಚುಚ್ಚು ಮದ್ದು ನೀಡುವ ವಿಧಾನಕ್ಕಿಂತ ಸುಲಭವಾಗಿದೆ.
ಇಂಟ್ರಾನಾಸಲ್ ಬೂಸ್ಟರ್ ಡೋಸ್ ಕೋವಿಡ್ -19 ಸೋಂಕು ಹರಡುವಿಕೆಯನ್ನ ತಡೆಯುವಲ್ಲಿ ಬಹಳ ಪರಿಣಾಮಕಾರಿಯಾಗಿದೆ ಎಂದು ಭಾರತ್ ಬಯೋಟೆಕ್ ಕಂಪನಿ ತಿಳಿಸಿದೆ..