bheemasena nalamaharaja
ಪಕ್ಕಾ ಫ್ಯಾಮಿಲಿ ಎಂಟರ್ಟೈನ್‍ಮೆಂಟ್ ಸಿನಿಮಾವಾದ ಸ್ಯಾಂಡಲ್ ವುಡ್ ನ ಭೀಮಸೇನ ನಳಮರಾಜ ಸಿನಿಮಾದ ಟ್ರೇಲರ್ ರಿಲೀಸ್ ಆಗಿದೆ. ಅಮೇಜಾನ್ ಪೈಮ್ ವಿಡಿಯೋದಲ್ಲಿ ಟ್ರೇಲರ್ ಬಿಡುಗಡೆಯಾಗಿದ್ದು, ಪ್ರೇಕ್ಷಕರ ಗಮನ ಸೆಳೆಯುತ್ತಿದೆ.
ಹೌದು ಇತ್ತೀಚೆಗಷ್ಟೇ ಸಿನಿಮಾದ ಟೀಸರ್ ರಿಲೀಸ್ ಆಗಿತ್ತು. ಇದೀಗ ಚಿತ್ರದ ಟ್ರೈಲರ್ ಸಹ ಲಾಂಚ್ ಆಗಿದ್ದು, ಈ ಸಿನಿಮಾ ಒಂದು ವಿಭಿನ್ನವಾದ ಕಥಾಹಂದರ ಹೊಂದಿದೆ. ಟ್ರೈಲರ್ ನಲ್ಲಿ ಅದ್ಭುತ ಲೋಕೇಶನ್ ಗಳನ್ನ ತೋರಿಸಲಾಗಿದ್ದು, ಚಿತ್ರದ ನಿರೀಕ್ಷೆ ಹೆಚ್ಚಾಗಿಸಿದೆ. ಈ ಚಿತ್ರದಲ್ಲಿ ಮನರಂಜನೆಯ ಜೊತೆಗೆ ಸಸ್ಪನ್ಸ್ , ಥ್ರಿಲ್ಲಿಂಗ್ ಹಾಗೂ ಟ್ವಿಸ್ಟ್ ಗಳಿಂದ ಭರಪೂರವಾಗಿದ್ದು, ಅಭಿಮಾನಿಗಳಿಗೆ ಭರ್ಜರಿ ಮನರಂಜನೆ ನೀಡಲಿದೆ.
ಕಾರ್ತಿಕ್ ಸರಗೂರ್ ಅವರು ಆಕ್ಷನ್ ಕಟ್ ಹೇಳಿರುವ ಚಿತ್ರದಲ್ಲಿ ನಟರಾದ ಅರವಿಂದ್ ಅಯ್ಯರ್, ಆರೋಹಿ ನಾರಾಯಣ್, ಪ್ರಿಯಾಂಕಾ ತಿಮ್ಮೇಶ್, ಅಚ್ಯುತ್ ಕುಮಾರ್ , ಆದ್ಯ ಸೇರಿದಂತೆ ಹಲವರ ತಾರಾಬಳಗವಿದೆ. ಅಕ್ಟೋಬರ್ 29ರಿಂದ ಭಾರತ ಹಾಗೂ ಇಡೀ ವಿಶ್ವಾದ್ಯಂತ ಅಮೇಜಾನ್ ಫ್ರೈಮ್‍ನಲ್ಲಿ ಬೀಮಸೇನಾ ನಳಮಹರಾಜ ಎಲ್ಲರನ್ನೂ ರಂಜಿಸಲು ಬರುತ್ತಿದೆ.
ಟೈಟಲ್ ನಂತೆಯೇ ಸಿನಿಮಾದ ಕಥಾ ಹಂದರವನ್ನ ಹೆಣೆಯಲಾಗಿದೆ. ಒಂದು ಅಡುಗೆಗೆ ಸಿಹಿ, ಕಹಿ, ಉಪ್ಪು, ಹುಳಿ, ಖಾರ ಹೇಗೆ ಮುಖ್ಯವೋ ಜೀವನವೂ ಇಂತಹ ಕಹಿ, ಸಿಹಿ, ಕಟುವಾದ ಅನುಭವಗಳಿಂದಲೇ ಕೂಡಿರುತ್ತೆ ಎಂಬ ಒಂದು ಒಳ್ಳೆ ಸಂದೇಶ ಈ ಚಿತ್ರದಲ್ಲಿದೆ.
ಸ್ಯಾಂಡಲ್ ವುಡ್ ನ “ಭೀಮಸೇನ ನಳಮಹರಾಜ” ಟೀಸರ್ ರಿಲೀಸ್..!
ಈ ಚಿತ್ರಕ್ಕೆ ಪುಷ್ಕರ್ ಮಲ್ಲಿಕಾರ್ಜುನಯ್ಯ, ರಕ್ಷಿತ್ ಶೆಟ್ಟಿ ಹಾಗೂ ಹೇಮಂತ್ ಎಂ ರಾವ್ ಬಂಡವಾಳ ಹೂಡಿದ್ದಾರೆ. ಟ್ರೇಲರ್ ವೀಕ್ಷಿಸಿರುವ ಸಿನಿಪ್ರಿಯರು ಚಿತ್ರ ಬಿಡುಗಡೆಗಾಗಿ ಕಾತರದಿಂದ ಕಾದುಕುಳಿತಿದ್ದಾರೆ.
bheemasena nalamaharaja
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel