ವಿಜಯಪುರ: ಕೊರೊನಾ ಅಪ್ಪಳಿಸಿದ ಬಳಿಕ ಶಾಂತವಾಗಿದ್ದ ಭೀಮಾ ತೀರದಲ್ಲಿ ಮತ್ತೆ ಗುಂಡಿನ ಸದ್ದು ಮೊಳಗಿದೆ. ಕಾರಿನಲ್ಲಿ ತೆರಳುತ್ತಿದ್ದ ಮಹಾದೇವ ಸಾಹುಕಾರ ಭೈರಗೊಂಡನ ಮೇಲೆ ಅಪರಿಚಿತ ದುಷ್ಕರ್ಮಿಗಳ ತಂಡ ಫೈರಿಂಗ್ ಮಾಡಿದೆ.
ವಿಜಯಪುರ ಜಿಲ್ಲೆಯ ಅರಕೇರಿ ತಾಂಡಾ ಎಂಬಲ್ಲಿ ಸಿನಿಮೀಯ ರೀತಿಯಲ್ಲಿ ನಡೆದ ಫೈರಿಂಗ್‍ನಲ್ಲಿ ಮಹಾದೇವ ಸಾಹುಕಾರನಿಗೆ ಎರಡು ಗುಂಡುಗಳು ತಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಭೈರಗೊಂಡನ ಬಲಭುಜದ ಹಿಂಭಾಗಕ್ಕೆ ಒಂದು ಗುಂಡು ತಾಗಿದೆ. ಇನ್ನೊಂದು ಗುಂಡು ಹೊಟ್ಟೆಗೆ ತಾಗಿ ಹೊರಹೋಗಿದೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಬಾಬುರಾಯ ಎಂಬಾತ ಸಾವನ್ನಪ್ಪಿದ್ದಾನೆ.
ಹುಸೇನೆ ಭಜಂತ್ರಿ ಎಂಬಾತನ ತಲೆಗೆ ಗುಂಡು ತಾಗಿದೆ. ಕಾರು ಚಾಲಕನ ಕಾಲು ಕಟ್ ಆಗಿದ್ದು, ಗಾಯಾಳುಗಳುನ್ನು ವಿಜಯಪುರದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಮಹಾದೇವ ಭೈರಗೊಂಡ ತೆರಳುತ್ತಿದ್ದ ಕಾರಿಗೆ ಎರಡು ಟಿಪ್ಪರ್‍ಗಳನ್ನು ಡಿಕ್ಕಿ ಹೊಡೆಸಿದ ಬಳಿಕ ಅಪರಿಚಿತರು ಗುಂಡಿನ ದಾಳಿ ನಡೆಸಿ ಪರಾರಿಯಾಗಿದ್ದಾರೆ. ವಿಜಯಪುರ ಜಿಲ್ಲೆಯ ಚಡಚಣ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
20 ಜನರ ತಂಡದಿಂದ ಅಟ್ಯಾಕ್..!
ಮಹಾದೇವ ಭೈರಗೊಂಡ ತೆರಳುತ್ತಿದ್ದ ಕಾರಿನ ಮೇಲೆ 20 ಜನರ ತಂಡ ಏಕಾಏಕಿ ದಾಳಿ ನಡೆಸಿದೆ. ದಾಳಿ ಮಾಡಿದವರ ಕೈಯಲ್ಲಿ ಬಂದೂಕುಗಳಿದ್ದವು. ಎರಡು ಟಿಪ್ಪರ್‍ಗಳಿಂದ ಮಹಾದೇವನ ಕಾರಿಗೆ ಅಡ್ಡಗಟ್ಟಿ ನಿಲ್ಲಿಸಿ ಸಿನಿಮೀಯ ರೀತಿಯಲ್ಲಿ ಗುಂಡಿನ ಸುರಿಮಳೆಗೈಯಲಾಗಿದೆ. ಎರಡು ದಿನಗಳಿಂದ ಮಹಾದೇವ ಸಾಹುಕಾರ ಮೇಲೆ ದಾಳಿ ಮಾಡಲು ಆತನ ಚಲನವಲನಗಳ ಮೇಲೆ ಈ ತಂಡ ನಿಗಾ ಇರಿಸಿತ್ತು ಎಂದು ಪ್ರತ್ಯಕ್ಷದರ್ಶಿ ತಮ್ಮಾರಾವ್ ಭೈರಗೊಂಡ ತಿಳಿಸಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel