ADVERTISEMENT
Wednesday, August 12, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಕಸದಿಂದ ರಸ ತೆಗೆಯುವ ರೈತಸ್ನೇಹಿ ಭೂಸಿರಿ ಭೂಮಿತ್ರಕ್ಕೆ ಬಿಎಸ್‍ವೈ ಚಾಲನೆ

Kariyappa N by Kariyappa N
December 11, 2020
in Newsbeat, Politics, Samagra karnataka, ರಾಜ್ಯ
bhoosiri
Share on FacebookShare on TwitterShare on WhatsappShare on Telegram

ಬೆಂಗಳೂರು: ಸಾವಯವ ಕೃಷಿಗೆ ಹೆಚ್ಚು ಒತ್ತು ನೀಡಲು ರೈತರ ಜೊತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬೆನ್ನೆಲುಬಾಗಿ ನಿಂತಿದ್ದಾರೆ. ಕೃಷಿ ಹಾಗೂ ರೈತನ ಹಿತಕ್ಕೆ ಸರ್ಕಾರ ಬದ್ಧವಾಗಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದ್ದಾರೆ.
ಕೃಷಿ ಇಲಾಖೆಯ ವತಿಯಿಂದ ನಾಗರಾಜ್ ಹೆಗಡೆ ತಯಾರಿಸಿರುವ ಭೂಸಿರಿ ಹಾಗೂ ಭೂಮಿತ್ರ ಯಂತ್ರವನ್ನು ವಿಧಾನಸೌಧದಲ್ಲಿ ಸಿಎಂ ಯಡಿಯೂರಪ್ಪ ಹಾಗೂ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಲೋಕಾರ್ಪಣೆಗೊಳಿಸಿದರು.


ಲೋಕಾರ್ಪಣೆ ಬಳಿಕ ಮಾತನಾಡಿದ ಕೃಷಿ ಸಚಿವ ಬಿ.ಸಿ.ಪಾಟೀಲ್, ಕಸವನ್ನು ರಸವನ್ನಾಗಿ ಮಾಡುವ ನುಡಿಯಂತೆ ನಾಗರಾಜ್ ಹೆಗಡೆಯವರು ತ್ಯಾಜ್ಯದಿಂದ ತಕ್ಷಣವೇ ತಯಾರಾಗುವ ಸಾವಯವ ಗೊಬ್ಬರವನ್ನು ತಯಾರಿಸುವ ಭೂಸಿರಿ ಯಂತ್ರವನ್ನು ತಯಾರಿಸಿ ರೈತರಿಗೆ ಅನುಕೂಲ ಕಲ್ಪಿಸಿದ್ದಾರೆ ಎಂದರು.
ಕಳೆದ ವರ್ಷ 200 ಕೋಟಿ ರೂ.ಗಳನ್ನು ಸಾವಯವ ಕೃಷಿಗೆ ಯಡಿಯೂರಪ್ಪ ನೀಡಿದ್ದಾರೆ. ಸಾವಯವ ಕೃಷಿ ನಿಟ್ಟಿನಲ್ಲಿ ಭೂಸಿರಿ ಭೂಮಿತ್ರ ಯಂತ್ರಗಳು ಪ್ರಮುಖವಾಗಿವೆ. ಮಣ್ಣಿನ ಪರೀಕ್ಷೆಗೆ ಭೂಮಿತ್ರ ಸಹಾಯಕವಾಗಲಿದೆ.ಪ್ರಯೋಗಾಲಯಗಳಲ್ಲಿ ಮಣ್ಣು ಪರೀಕ್ಷೆಗೆ ಏಳು ದಿನಗಳು ಬೇಕು. ಆದರೆ ತಕ್ಷಣದ ಮಣ್ಣು ಪರೀಕ್ಷೆಗೆ ಭೂಮಿತ್ರ ನೆರವಾಗಲಿದೆ. ರಾಸಾಯನಿಕ ಮುಕ್ತ ಸಾವಯವ ಕೃಷಿಗೆ ಸರ್ಕಾರ ಹೆಚ್ಚು ಒತ್ತು ನೀಡಿದೆ. ರಾಜ್ಯದಲ್ಲಿ ಮೊದಲ ಬಾರಿಗೆ ವಿಶ್ವದಲ್ಲಿಯೇ ತಕ್ಷಣ ತಯಾರಾಗುವ ಭೂಸಿರಿ ಯಂತ್ರವನ್ನು ಮುಖ್ಯಮಂತ್ರಿಗಳು ಹಾಗೂ ಸಭಾಧ್ಯಕ್ಷರು ಲೋಕಾರ್ಪಣೆಗೊಳಿಸಿದ್ದಾರೆ ಎಂದರು.

Related posts

slum-dog-movie-glimpse-tabu-gauri-hegde-vijay-sethupathi-puri-jagannadh

ವಿಜಯ್ ಸೇತುಪತಿ ಮತ್ತು ಪೂರಿ ಜಗನ್ನಾಥ್ ಅವರ ಬಹುನಿರೀಕ್ಷಿತ ಆಕ್ಷನ್-ಡ್ರಾಮಾ ‘ಸ್ಲಮ್ ಡಾಗ್’ ಚಿತ್ರದ ಹೊಸ ಗ್ಲಿಂಪ್ಸ್ ರಿಲೀಸ್;

August 11, 2026
varamahalakshmi-vrata-ashtalakshmi-coin-remedy-for-wealth

ವರಮಹಾಲಕ್ಷ್ಮಿ ವ್ರತದ ದಿನದಂದು ಎಂಟು ಒಂದು ರೂಪಾಯಿ ನಾಣ್ಯಗಳನ್ನು ಇಟ್ಟು ಅಷ್ಟಲಕ್ಷ್ಮಿ ದೇವತೆಗಳ ಆಶೀರ್ವಾದವನ್ನು ಪಡೆಯುವ ಮೂಲಕ ಮಾಡಬಹುದಾದ ತಾಂತ್ರಿಕ ಪರಿಹಾರ.

August 11, 2026


ನಮ್ಮ ದೇಶದಲ್ಲಿ ಪ್ರತಿ ವರ್ಷ ಸುಮಾರು 285 ದಶಲಕ್ಷ ಟನ್ ಆಹಾರ ಉತ್ಪಾದನೆಯಾಗಿ ಹಾಗೂ 305 ದಶಲಕ್ಷ ಟನ್ ತೋಟಗಾರಿಕಾ ಬೆಳೆಗಳ ಉತ್ಪಾದನೆಯಾಗಿ ಈ ಬೆಳೆಗಳಿಂದ ಅಂದಾಜು 500 ದಶಲಕ್ಷ ಟನ್‍ಗಳಷ್ಟು ಬೆಳೆ ಅವಶೇಷಗಳು ಉತ್ಪತ್ತಿಯಾಗುತ್ತದೆ.


ರಾಷ್ಟ್ರದಲ್ಲಿ ಅತೀ ಹೆಚ್ಚು ಬೆಳೆ ಅವಶೇಷಗಳನ್ನು ಉತ್ಪತ್ತಿ ಮಾಡುವ ರಾಜ್ಯಗಳೆಂದರೆ ಉತ್ತರ ಪ್ರದೇಶ. ಅಲ್ಲಿ 60 ದಶಲಕ್ಷ ಟನ್, ಪಂಚಾಬ್ 51 ದಶಲಕ್ಷ ಟನ್ ಹಾಗೂ ಮಹಾರಾಷ್ಟ್ರದಲ್ಲಿ 46 ದಶಲಕ್ಷ ಟನ್‍ಗಳಷ್ಟು ಬೆಳೆ ಅವಶೇಷಗಳು ಉತ್ಪಾದನೆಯಾಗುತ್ತದೆ. ಇವುಗಳಿಂದ ಉತ್ಕøಷ್ಟವಾದ ಸಾವಯವ ಗೊಬ್ಬರವನ್ನು ತಯಾರಿಸಬಹುದಾಗಿದ್ದರೂ ಸಹ ರೈತ ಬಾಂಧವರು ಬಹುತೇಕ ಉತ್ತರ ಭಾರತದಲ್ಲಿ ಭತ್ತ ಹಾಗೂ ಗೋದಿ ಹುಲ್ಲನ್ನು ಬೆಂಕಿ ಹಚ್ಚಿ ಸುಡುವುದು ವಾಡಿಕೆಯಾಗಿದೆ. ಇದರಿಂದ ವಾಯುಮಾಲಿನ್ಯ ಹೆಚ್ಚಾಗಿ ಉಸಿರಾಟದ ತೊಂದರೆಗಳು ಹೆಚ್ಚಾಗುತ್ತಿದೆ. ಇಂತಹ ಸಂದರ್ಭದಲ್ಲಿ ಹೈಟೆಕ್ ಅಗ್ರಿಕ್ಯೂಲಮ್ ಸಂಸ್ಥೆಯವರು ಡಾ: ನಾಗರಾಜ್ ಹೆಗಡೆಯವರ ನೇತೃತ್ವದಲ್ಲಿ ಭೂಸಿರಿ ಎಂಬ ಸಂಚಾರಿ ವಾಹನ ಆಧಾರಿತ ಪ್ರಪಂಚದಲ್ಲಿಯೇ ಮೊದಲನೆಯದಾಗಿ ತಕ್ಷಣವೇ ಗೊಬ್ಬರ ತಯಾರಿಕಾ ಯಂತ್ರವನ್ನು ಹಾಗೂ ಡಾ: ಹೆಗಡೆ ನ್ಯಾನಾಕ್ಯೂಲಮ್ ಸಂಸ್ಥೆಯಿಂದ ಭೂಮಿತ್ರ ಎಂಬ ಅತ್ಯಾಧುನಿಕ ಮಣ್ಣಿನ ಸ್ಪೆಕ್ಟ್ರೋಸ್ಕೋಪಿ ತಂತ್ರಜ್ಞಾನವನ್ನು ಬಳಸಿ ತಕ್ಷಣವೇ ಮಣ್ಣು ಪರೀಕ್ಷೆ ಮಾಡಿ ವರದಿ ನೀಡುವ ಉಪಕರಣವನ್ನು ವಿನ್ಯಾಸಗೊಳಿಸಿದ್ದಕ್ಕಾಗಿ ಅಭಿನಂದಿಸುತ್ತೇನೆ ಎಂದರು.

ಏನಿದು ಭೂಸಿರಿ-ಭೂಮಿತ್ರ ಯಂತ್ರ
ಸಾಮಾನ್ಯವಾಗಿ ಕೃಷಿ ತ್ಯಾಜ್ಯ ವಸ್ತುಗಳು ಕಳೆತು ಸಾವಯವ ಗೊಬ್ಬರವಾಗಲು ಕನಿಷ್ಟ 40 ರಿಂದ 60 ದಿನಗಳು ಬೇಕಾಗುತ್ತವೆ. ಆದರೆ ಈ ಭೂಸಿರಿ ಸಂಚಾರಿ ವಾಹನದಲ್ಲಿ ತಕ್ಷಣವೇ ಗೊಬ್ಬರವನ್ನು ತಯಾರಿಸುವ ತಂತ್ರಜ್ಞಾನವನ್ನು ಅಳವಡಿಸಿರುವುದರಿಂದ ಹಾಗೂ ರೈತರ ಜಮೀನಿಗೆ ಹೋಗಿ ಅವರ ಕ್ಷೇತ್ರಗಳಲ್ಲಿ ಸಂಗ್ರಹ ಮಾಡಿದ ಕೃಷಿ ತ್ಯಾಜ್ಯ ವಸ್ತುಗಳನ್ನು ತಕ್ಷಣವೇ ಕತ್ತರಿಸಿ ಭೂಸಿರಿ ಯಂತ್ರದ ಮೂಲಕ ಸಾವಯವ ಗೊಬ್ಬರ ತಯಾರಿಸಿ ಕೊಡುವುದು ಅತ್ಯಂತ ಸೂಕ್ತವಾಗಿರುತ್ತದೆ.
ನಮ್ಮ ರಾಜ್ಯದಲ್ಲಿ ವರ್ಷದ ಮೂರು ಹಂಗಾಮಿನಲ್ಲಿ ಮೆಕ್ಕೆ ಜೋಳವನ್ನು ಸುಮಾರು 20ಲಕ್ಷಕ್ಕೂ ಹೆಚ್ಚು ಹೆಕ್ಟೇರ್‍ಗಳಷ್ಟು ಪ್ರದೇಶದಲ್ಲಿ ಬೆಳೆಯಲಾಗುತ್ತದೆ. ಈ ಬೆಳೆಯಿಂದ ಬಂದ ಜೋಳದ ದಂಟನ್ನು ರೈತರು ಬಹುತೇಕ ಬೆಂಕಿ ಹಚ್ಚಿ ಸುಡುವುದು, ಇಲ್ಲವೇ ನಿಧಾನಗತಿಯಲ್ಲಿ ಗೊಬ್ಬರವಾಗಲು ಬಿಸಾಡುವುದು ಸಾಮಾನ್ಯ. ಇದೇ ರೀತಿ ಮಲೆನಾಡಿನಲ್ಲಿಯೂ ಕೂಡಾ ಅಡಿಕೆ, ತೆಂಗು ಗಿಡಗಳ ಒಣಗಿದ ಗರಿಗಳು ಹಾಗೂ ಮರಗಳ ಒಣಗಿದ ಎಲೆಗಳು ಜೈವಿಕವಾಗಿ ಕಳೆಯಲು ಕನಿಷ್ಟ 3 ರಿಂದ 4 ತಿಂಗಳುಗಳು ಬೇಕಾಗುವುದು. ಆದರೆ ಈ ಭೂಸಿರಿ ಯಂತ್ರದಿಂದ ತೊಗರಿ ಕಟ್ಟಿಗೆ, ಕತ್ತಿ ಕಟ್ಟಿಗೆ, ಕಬ್ಬಿನ ರವದಿ, ಗೋವಿನ ಜೋಳದ ದಂಟು, ತೆಂಗು ಅಡಿಕೆಯ ಗರಿಗಳು ಮುಂತಾದ ತ್ಯಾಜ್ಯ ವಸ್ತುಗಳನ್ನು ತಕ್ಷಣವೇ ವಿಘಟನೆ ಮಾಡಿ ಭೂಸಿರಿ ಯಂತ್ರದಿಂದ ಸಾವಯವ ಗೊಬ್ಬರ ತಯಾರಿಸುವುದು ಮಣ್ಣಿನ ಫಲವತ್ತತೆ ಹೆಚ್ಚಿಸುವ ದೃಷ್ಟಿಯಿಂದ ವಾತಾವರಣದ ಮಾಲಿನ್ಯ ತಡೆಯುವಲ್ಲಿ ಕೂಡ ಅತ್ಯಂತ ಸೂಕ್ತವಾದ ಮಾರ್ಗವಾಗಿರುತ್ತದೆ.
ಸಾಮಾನ್ಯವಾಗಿ ಪ್ರಯೋಗಾಲಯಗಳಲ್ಲಿ ಮಣ್ಣಿನ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆಯನ್ನು ರಾಸಾಯನಿಕ ವಿಧಾನಗಳಲ್ಲಿ ಮಾಡಿ ವಿಶ್ಲೇಷಣೆ ವರದಿಯನ್ನು ನೀಡಲು ಕನಿಷ್ಟ ಒಂದು ವಾರ ಸಮಯವಾಗುತ್ತದೆ. ಆದರೆ ಭೂಮಿತ್ರ ಯಂತ್ರದ ಮೂಲಕ ತಕ್ಷಣವೇ ಬೆಳೆಗೆ ಬೇಕಾಗುವ ಎಲ್ಲಾ 17 ಪೋಷಕಾಂಶಗಳನ್ನು ಅಲ್ಲದೇ ಹೆಚ್ಚುವರಿಯಾಗಿ ಇನ್ನೂ 5 ಪೋಷಕಾಂಶಗಳು, ಒಟ್ಟಾರೆಯಾಗಿ 23  ಪೋಷಕಾಂಶಗಳನ್ನು ತಕ್ಷಣವೇ ವಿಶ್ಲೇಷಣೆ ಮಾಡಿ ಕೊಡುವ ವ್ಯವಸ್ಥೆ ಈ ಯಂತ್ರದಿಂದ ಸಾಧ್ಯವಾಗಲಿದೆ. ಇದೊಂದು ಮಣ್ಣು ಪರೀಕ್ಷೆಯಲ್ಲಿ ಕ್ರಾಂತಿಕಾರಕ ಸಾಧನೆಯಾಗಿದೆ.
ಈ ಪದ್ದತಿಯು ರಾಸಾಯನಿಕ ಪದ್ದತಿಯಾಗಿರದೇ ಭೌತಿಕ ರಸಾಯನ ವಿಜ್ಞಾನ ಹಾಗೂ ಗಣಕಯಂತ್ರ ವಿಜ್ಞಾನ ಸೇರಿಸಿ ಮಣ್ಣಿನ ಸ್ಪೆಕ್ಟ್ರೋಸ್ಕೋಪಿ ಪದ್ದತಿಯಿಂದ ಶೀಘ್ರವೇ ಮಣ್ಣಿನ ವಿಶ್ಲೇಷಣೆ ಮಾಡಲಾಗುವುದು. ಮಣ್ಣಿನಲ್ಲಿ ಶೇ.45ರಷ್ಟು ಖನಿಜಗಳು, ಶೇ.25 ರಷ್ಟು ಗಾಳಿ, ಶೇ.25ರಷ್ಟು ನೀರು ಮತ್ತು ಶೇ.5ರಷ್ಟು ಸಾವಯವ ಪದಾರ್ಥ ಇರುತ್ತದೆ. ಈ ಮಣ್ಣಿನಲ್ಲಿ ಲಭ್ಯವಿರುವ ಪ್ರತಿಯೊಂದು ಖನಿಜ ಪದಾರ್ಥಗಳು ವಿಶಿಷ್ಟವಾದ ಬೆಳಕಿನ ಕಿರಣಗಳನ್ನು ಹೊರಹೊಮ್ಮುವ ಸಾಧ್ಯತೆ ಇರುತ್ತದೆ. ಈ ರೀತಿ ಹೊರಹೊಮ್ಮುವ ಬೆಳಕಿನ ಕಿರಣಗಳ ಲೈನ್‍ಗಳನ್ನು ಅವುಗಳ ವೇವ್‍ಲೆಂತ್, ಹಾಗೂ ಫ್ರೀಕ್ವೆನ್ಸಿಗಳ ಆಧಾರದ ಮೇಲೆ ಮಣ್ಣಿನ ಪ್ರತಿ ಖನಿಜಗಳ ಲಭ್ಯತೆಯ ಪ್ರಮಾಣವನ್ನು ಲೆಕ್ಕ ಹಾಕಲಾಗುವುದು.
ಈ ಎಲ್ಲಾ ಕಾರಣಗಳಿಂದ ರಾಜ್ಯದಲ್ಲಿ ಭೂಸಿರಿ ಹಾಗೂ ಭೂಮಿತ್ರ ಯಂತ್ರಗಳಿಂದ ಆಧುನಿಕ ಪದ್ದತಿಗಳನ್ನು ಬಳಸಿ ಕೃಷಿ ತ್ಯಾಜ್ಯ ವಸ್ತುಗಳನ್ನು ತಕ್ಷಣವೇ ವಿಘಟನೆ ಮಾಡಿ ಸಾವಯವ ಗೊಬ್ಬರ ತಯಾರಿಸುವಲ್ಲಿ ಹಾಗೂ ಭೂಮಿತ್ರ ಯಂತ್ರ ಬಳಸಿ ತಕ್ಷಣವೇ ಮಣ್ಣಿನಲ್ಲಿಯ 23 ಪೆÇೀಷಕಾಂಶಗಳನ್ನು ಮಣ್ಣಿನ ಸ್ಪೆಕ್ಟ್ರೋಸ್ಕೋಪಿ ವಿಧಾನದ ಮೂಲಕ ವಿಶ್ಲೇಷಣೆ ಮಾಡುವ ಯಂತ್ರಗಳ ಮೂಲಕ ಭೂ ಫಲವತ್ತತೆ ಹಾಗೂ ಭೂ ಉತ್ಪಾದಕತೆಯನ್ನು ಹೆಚ್ಚಿಸುವಲ್ಲಿ ಕ್ರಾಂತಿಕಾರಿ ಬದಲಾವಣೆಯನ್ನು ತರುವ ಸಾಧ್ಯತೆಗಳಿವೆ.

 

Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel

Tags: B C PatilB S YADIYURAPPABhoomitraBhoosiritrash-fed farmer maschine
ShareTweetSendShare
Join us on:

Related Posts

slum-dog-movie-glimpse-tabu-gauri-hegde-vijay-sethupathi-puri-jagannadh

ವಿಜಯ್ ಸೇತುಪತಿ ಮತ್ತು ಪೂರಿ ಜಗನ್ನಾಥ್ ಅವರ ಬಹುನಿರೀಕ್ಷಿತ ಆಕ್ಷನ್-ಡ್ರಾಮಾ ‘ಸ್ಲಮ್ ಡಾಗ್’ ಚಿತ್ರದ ಹೊಸ ಗ್ಲಿಂಪ್ಸ್ ರಿಲೀಸ್;

by admin
August 11, 2026
0

ವಿಜಯ್ ಸೇತುಪತಿ ಮತ್ತು ಪೂರಿ ಜಗನ್ನಾಥ್ ಅವರ ಬಹುನಿರೀಕ್ಷಿತ ಆಕ್ಷನ್-ಡ್ರಾಮಾ 'ಸ್ಲಮ್ ಡಾಗ್' ಚಿತ್ರದ ಹೊಸ ಗ್ಲಿಂಪ್ಸ್ ರಿಲೀಸ್; ‌ಪವರ್‌ಫುಲ್ ಅಧಿಕಾರಿ 'ಗೌರಿ ಹೆಗ್ಡೆ' ಪಾತ್ರದಲ್ಲಿ ಟಬು!...

varamahalakshmi-vrata-ashtalakshmi-coin-remedy-for-wealth

ವರಮಹಾಲಕ್ಷ್ಮಿ ವ್ರತದ ದಿನದಂದು ಎಂಟು ಒಂದು ರೂಪಾಯಿ ನಾಣ್ಯಗಳನ್ನು ಇಟ್ಟು ಅಷ್ಟಲಕ್ಷ್ಮಿ ದೇವತೆಗಳ ಆಶೀರ್ವಾದವನ್ನು ಪಡೆಯುವ ಮೂಲಕ ಮಾಡಬಹುದಾದ ತಾಂತ್ರಿಕ ಪರಿಹಾರ.

by admin
August 11, 2026
0

ಅಷ್ಟ ಐಶ್ವರ್ಯ ಪಡೆಯಲು ತಾಂತ್ರಿಕ ಪರಿಹಾರ ಅಷ್ಟ ಲಕ್ಷ್ಮಿ ನಾಣ್ಯಗಳು ಶುಕ್ರವಾರ ಮಹಾಲಕ್ಷ್ಮಿ ದೇವಿಗೆ ಶುಭ ದಿನ. ಆ ಶುಕ್ರವಾರ ಬರುವ ಶುಕ್ರ ಹೊರೆಯ ಸಮಯದಲ್ಲಿ ನಾವು...

asthalakshmi-mantra-money-remedy-friday-astrology-tips

ಹಣ ಬರಮಾಡಿಕೊಳ್ಳುವ ಈ ಮಂತ್ರವನ್ನು 28-08-2026 ರಂದು 5 ಬಾರಿ ಪಠಿಸಿ. ಅದೃಷ್ಟದ ರಾಜಯೋಗದ ಹಣವು ನಿಮ್ಮ ಬಳಿ ಸೇರುತ್ತದೆ.

by admin
August 11, 2026
0

ಹಣ ಬರಮಾಡಿಕೊಳ್ಳುವ ಈ ಮಂತ್ರವನ್ನು 28-08-2026 ರಂದು 5 ಬಾರಿ ಪಠಿಸಿ. ಅದೃಷ್ಟದ ರಾಜಯೋಗದ ಹಣವು ನಿಮ್ಮ ಬಳಿ ಸೇರುತ್ತದೆ. 28-08-2026 ರಂದು ನಗದು ಅಗತ್ಯವನ್ನು ಪೂರೈಸಲು...

biscoff-swiggy-dineout-dm-a-lonely-cup-campaign-offers

by admin
August 11, 2026
0

ಒಂಟಿ ಕಾಫಿ ಕಪ್ ಫೋಟೋ ಕಳುಹಿಸಿ, ಆಕರ್ಷಕ ಗಿಫ್ಟ್ ಗೆಲ್ಲಿ: ಟೀ - ಕಾಫಿ ಪ್ರಿಯರಿಗಾಗಿ ವಿನೂತನ ಆಫರ್!  ಬೆಂಗಳೂರು: ಬಿಸಿ ಬಿಸಿ ಟೀ ಅಥವಾ ಕಾಫಿ...

ಆಗಸ್ಟ್ 13ರ ಕಾವೇರಿ ಹೋರಾಟದ ಬಂದ್‌ಗೆ ವಿಘ್ನ:  ಸಂಘಟನೆಗಳ  ಒಡಕಿನಿಂದ ಅತಂತ್ರವಾಯ್ತು ಕಾವೇರಿ ಹೋರಾಟ

ಆಗಸ್ಟ್ 13ರ ಕಾವೇರಿ ಹೋರಾಟದ ಬಂದ್‌ಗೆ ವಿಘ್ನ: ಸಂಘಟನೆಗಳ ಒಡಕಿನಿಂದ ಅತಂತ್ರವಾಯ್ತು ಕಾವೇರಿ ಹೋರಾಟ

by Shwetha
August 11, 2026
0

ತಮಿಳುನಾಡಿಗೆ ಕಾವೇರಿ ನೀರು ಬಿಡುವುದನ್ನು ವಿರೋಧಿಸಿ ಆಗಸ್ಟ್ 13ರಂದು ಕರೆ ನೀಡಲಾಗಿದ್ದ ಕರ್ನಾಟಕ ಬಂದ್ ಈಗ ಅನಿಶ್ಚಿತತೆಯ ಸುಳಿಗೆ ಸಿಲುಕಿದೆ. ರಾಜ್ಯದಾದ್ಯಂತ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಜಲಾಶಯಗಳು...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram