ಬಿಎಸ್ ವೈ ಕೋಟೆಯಲ್ಲಿ ಸಿದ್ದರಾಮಯ್ಯಗೆ ಭಾರಿ ಕ್ರೇಜ್
ಶಿವಮೊಗ್ಗ : ಮಾಜಿ ಸಿಎಂ ಸಿದ್ದರಾಮಯ್ಯ ಇಂದು ಖಾಸಗಿ ಕಾರ್ಯಕ್ರಮದ ನಿಮಿತ್ತ ಶಿವಮೊಗ್ಗಗೆ ಭೇಟಿ ನೀಡಿದ್ದಾರೆ.
ಅವರು ಹೆಲಿಕ್ಯಾಪ್ಟರ್ ನಲ್ಲಿ ಬರುತ್ತಿದ್ದಂತೆಯೇ ಅಲ್ಲಿ ನೆರೆದಿದ್ದವರಿಂದ ನೂಕು ನುಗ್ಗಲು ಉಂಟಾಗಿದೆ.
ಹೌದು..! ಬಿಜೆಪಿಯ ರಾಜಾಹುಲಿ ಬಿ.ಎಸ್.ಯಡಿಯೂರಪ್ಪ ಅವರ ಭದ್ರಕೋಟೆ ಶಿವಮೊಗ್ಗಗೆ ಇಂದು ಸಿದ್ದರಾಮಯ್ಯ ಭೇಟಿ ನೀಡಿದ್ದಾರೆ.
ಅವರು ಶಿವಮೊಗ್ಗಗೆ ಆಗಮಿಸುತ್ತಿದ್ದಂತೆ ಅಲ್ಲಿ ನೆರೆದಿದ್ದ ಕಾಂಗ್ರೆಸ್ ಕಾರ್ಯಕರ್ತರಿಂದ ನೂಕು ನುಗ್ಗಲು ಉಂಟಾಗಿದೆ.
ಈ ವೇಳೆ ಪೊಲೀಸರು ಕಾರ್ಯಕರ್ತರನ್ನು ಹತೋಟಿಗೆ ತರಲು ಹರ ಸಾಹಸ ಪಟ್ಟಿದ್ದಾರೆ.
ಇನ್ನು ಸಿದ್ದರಾಮಯ್ಯ ಅವರನ್ನು ಸ್ಥಳೀಯ ನಾಯಕರು ಹೂವಿನ ಹಾರ ಹಾಕಿ ಸ್ವಾಗತ ಮಾಡಿದರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ ಸಿಎಂ ಬಿ.ಎಸ್.ಯಡಿಯೂರಪ್ಪ ವಿರುದ್ಧ ವಾಗ್ದಾಳಿ ನಡೆಸಿದರು.
ಬಿಜೆಪಿಯಲ್ಲೇ ಬಿ.ಎಸ್.ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ಬದಲಾಯಿಸಬೇಕಿದೆ ಎಂಬ ಕೂಗಿದೆ.
ಬಾ ಲೇ ಮಗನೇ ಎಂದು ತೋಳು ತಟ್ಟಿದ ಭೀಮಾನಾಯ್ಕ್
ಹೀಗಾಗಿ ಬಿಹಾರ ಚುನಾವಣೆ ಬಳಿಕ ರಾಜ್ಯದಲ್ಲಿ ಸಿಎಂ ಬದಲಾವಣೆ ಆಗಬಹುದು. ಬಿಜೆಪಿಯಲ್ಲಿ ಎರಡು ಮೂರು ಗುಂಪುಗಳಿವೆ.
ಅವರು ಸಿಎಂ ಬದಲಾವಣೆ ಆಗಬೇಕು ಎಂದು ಹೈಕಮಾಂಡ್ ಬಳಿ ಮನವಿ ಮಾಡಿಕೊಂಡಿದ್ದಾರೆ.
ನನ್ನ ಮಾಹಿತಿ ಪ್ರಕಾರ ಶೀಘ್ರದಲ್ಲೇ ಸಿಎಂ ಬದಲಾವಣೆ ಖಚಿತ ಎಂದು ಭವಿಷ್ಯ ನುಡಿದರು.
ಇನ್ನು ಬಿ.ಎಸ್. ಯಡಿಯೂರಪ್ಪ ಆಪರೇಷನ್ ಕಮಲದ ಜನಕ ಎಂದು ಗುಡುಗಿದ ಸಿದ್ದರಾಮಯ್ಯ, ಬಿಎಸ್ ವೈ ಅವರಿಂದಲೇ ಆಪರೇಷನ್ ಕಮಲ ನಡೆದಿದೆ.
ಅವರಿಗೆ ಅಧಿಕಾರ ಬೇಕು ಅಂದ್ರೆ, ಎಲ್ಲಿ ಬೇಕಾದರೂ ಸಹ ಆಪರೇಷನ್ ಕಮಲ ನಡೆಸುತ್ತಾರೆ ಎಂದರು.
ಮಾಜಿ IAS ಅಧಿಕಾರಿ ಸಸಿಕಾಂತ್ ಸೆಂಥಿಲ್ ಕಾಂಗ್ರೆಸ್ ಸೇರ್ಪಡೆ
ಈ ವೇಳೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸುಂದರೇಶ್, ಮಾಜಿ ಶಾಸಕ ಕೆ.ಬಿ.ಪ್ರಸನ್ನ ಕುಮಾರ್ ಸೇರಿ ಕಾಂಗ್ರೆಸ್ ಕಾರ್ಯಕರ್ತರು ಹಾಜರಿದ್ದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel