ಬೆಲೆ ಏರಿಕೆಗೆ ತತ್ತರಿಸಿರುವ ಜನ ಸಾಮಾನ್ಯರಿಗೆ ಈಗ ವಿದ್ಯುತ್ ದರ ಹೆಚ್ಚಳದ ಶಾಕ್ ನೀಡಲು ಎಸ್ಕಾಮ್‌ಗಳು ಮುಂದಾಗಿವೆ. ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗಕ್ಕೆ (ಕೆಇಆರ್‌ಸಿ) ರಾಜ್ಯದ ವಿದ್ಯುತ್ ಸರಬರಾಜು ಕಂಪನಿಗಳು (ಎಸ್ಕಾಮ್‌ಗಳು) ವಿದ್ಯುತ್ ದರ ಏರಿಕೆ ಮಾಡಲು ಒಪ್ಪಿಗೆ ಸೂಚಿಸುವಂತೆ ಪ್ರಸ್ತಾಪ ಸಲ್ಲಿಸಿವೆ.
ವಿದ್ಯುತ್ ದರ ಹೆಚ್ಚಳ ಪ್ರಸ್ತಾವನೆಗಳು ವಿವಿಧ ಹಂತಗಳು ಈ ರೀತಿಯಾಗಿದೆ.
ಪ್ರಸ್ತಾವನೆ ಸಲ್ಲಿಕೆ:
ಬೆಸ್ಕಾಂ, ಹೆಸ್ಕಾಂ, ಮೆಸ್ಕಾಂ, ಜೆಸ್ಕಾಂ ಮತ್ತು ಸೆಸ್ಕಾಂ ರಾಜ್ಯದ ವಿದ್ಯುತ್ ಸರಬರಾಜು ಕಂಪನಿಗಳು, ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗಕ್ಕೆ (ಕೆಇಆರ್‌ಸಿ) ವಿದ್ಯುತ್ ದರವನ್ನು ಹೆಚ್ಚಿಸುವಂತೆ ಪ್ರಸ್ತಾವನೆಗಳನ್ನು ಸಲ್ಲಿಸಿವೆ.
ಹೆಚ್ಚುವರಿ ವೆಚ್ಚಗಳು:
ವಿದ್ಯುತ್ ಖರೀದಿಗೆ ತಗಲುವ ವೆಚ್ಚ, ಪೂರೈಕೆ, ಕಲ್ಲಿದ್ದಲು ಸಂಗ್ರಹಣೆಗೆ ತಗಲುವ ವೆಚ್ಚ ಸೇರಿದಂತೆ ಇತರೆ ಖರ್ಚುಗಳು ಹೆಚ್ಚಾಗಿದ್ದು, ಆರ್ಥಿಕ ಒತ್ತಡವನ್ನು ಉಲ್ಬಣಗೊಳಿಸುತ್ತಿವೆ ಎಂದು ಕಂಪನಿಗಳು ಪ್ರಸ್ತಾವನೆಯಲ್ಲಿ ತಿಳಿಸಿವೆ.
ಬೆಸ್ಕಾಂ ಪ್ರಸ್ತಾವನೆ:
ಪ್ರತಿ ಯೂನಿಟ್‌ಗೆ ₹1.50 ದರ ಏರಿಕೆ ಮಾಡುವಂತೆ ಬೆಸ್ಕಾಂ ಮನವಿ ಮಾಡಿದೆ.
ಇತರೆ ಎಸ್ಕಾಂಗಳ ಪ್ರಸ್ತಾವನೆ:
ಇತರೆ ಎಸ್ಕಾಂಗಳು ಪ್ರತಿ ಯೂನಿಟ್‌ಗೆ ₹1.20 ದರ ಏರಿಕೆ ಮಾಡುವಂತೆ ಮನವಿ ಮಾಡಿವೆ.
ಹಂತ ಹಂತವಾಗಿ ದರ ಏರಿಕೆ:ಪ್ರಸ್ತಾವನೆಯಲ್ಲಿ ಪ್ರತಿ ಯೂನಿಟ್‌ಗೆ ಮೊದಲ ವರ್ಷ ಎರಡು ಮತ್ತು ಮೂರನೇ ವರ್ಷಗಳಲ್ಲಿ ಈ ಕೆಳಕಂಡಂತೆ ವಿಸ್ತರಣೆ ಮಾಡಲು ಕೋರಿವೆ.
2025-26: ಪ್ರತಿ ಯೂನಿಟ್‌ಗೆ 67 ಪೈಸೆ.
2026-27: ಪ್ರತಿ ಯೂನಿಟ್‌ಗೆ 74 ಪೈಸೆ.
2027-28: ಪ್ರತಿ ಯೂನಿಟ್‌ಗೆ 91 ಪೈಸೆ.
ಕೆಇಆರ್‌ಸಿ ಒಪ್ಪಿಗೆ:
ಒಂದು ವೇಳೆ ಕೆಇಆರ್‌ಸಿ ಒಪ್ಪಿಗೆ ಸೂಚಿಸಿದರೆ, ಪ್ರಸ್ತಾವನೆಯಂತೆ ವಿದ್ಯುತ್ ದರ ಹೆಚ್ಚಾಗಲಿದೆ.