ಬಿಗ್ ಬಾಸ್ ಮನೆಯಲ್ಲಿ ಹೋರಾಟ ಮುಂದುವರೆಸ್ತಾರಾ ಪ್ರಶಾಂತ್ ಸಂಬರಗಿ..!
1 min read
ಬಿಗ್ ಬಾಸ್ ಮನೆಯಲ್ಲಿ ಹೋರಾಟ ಮುಂದುವರೆಸ್ತಾರಾ ಪ್ರಶಾಂತ್ ಸಂಬರಗಿ..!
ಇತ್ತೀಚೆಗೆ ರಾಜಕೀಯವಾಗಿಯೇ ಹೆಚ್ಚಾಗಿ ಗುರುತಿಸಿಕೊಳ್ಳುತ್ತಿರುವ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿ ಯಾರಿಗೆ ತಾನೆ ಗೊತ್ತಿಲ್ಲ. ಸ್ಯಾಂಡಲ್ ವುಡ್ ಡ್ರಗ್ಸ್ ಲಿಂಕ್ ಪ್ರಕರಣ ಸಂಚಲನ ಸೃಷ್ಟಿ ಮಾಡಿತ್ತು. ಈ ವೇಳೆ ಸಂಜನಾ ಗಲ್ರಾನಿ ಸೇರಿ ಅನೇಕರ ವಿರುದ್ಧ ಆರೋಪ ಮಾಡಿ ಸಿಕ್ಕಾಪಟ್ಟೆ ಸುದ್ದುಯಾಗಿದ್ದವರು ಇದೇ ಪ್ರಶಾಂತ್ ಸಂಬರಗಿ. ಡ್ರಗ್ಸ್ ಲಿಂಕ್ ವಿಚಾರವಾಗಿ ಅತಿ ಹೆಚ್ಚು ಸುದ್ದಿಯಲ್ಲಿದ್ದು, ಇವರು ಮತ್ತೆ ಸಂಜನಾ ಗಲ್ರಾಣಿ ಗಲಾಟೆ ಬೀದಿ ರಂಪಾಟವಾಗಿತ್ತು. ಕಾಂಟ್ರವರ್ಸಿಯಿಂದಲೇ ಸುದ್ದಿಗೆ ಬಂದ ಪ್ರಶಾಂತ್ ಸಂಬರಗಿ ಇದೀಗ ದೊಡ್ಮನೆಗೆ ಎಂಟ್ರಿ ಕೊಟ್ಟಿದ್ದಾರೆ.
ಮಾನಸಿಕ ಖಿನ್ನತೆಗೆ ಒಳಗಾಗಿದ್ದರಂತೆ ಬಿಗ್ ಬಾಸ್ ನ ಸ್ಪರ್ಧಿ ಕಮಿಡಿಯನ್ ರಘು..!
ಬಿಜೆಪಿ ಪಕ್ಷವನ್ನು ಬೆಂಬಲಿಸುತ್ತಿರುವ ಪ್ರಶಾಂತ್ ಸಂಬರ್ಗಿ ಸ್ವತಃ ರಾಜಕಾರಣಿಯೂ ಆಗಿದ್ದಾರೆ. ಈ ಹಿಂದೆ ಕೆಲವು ಸಿನಿಮಾಗಳನ್ನು ಕರ್ನಾಟಕದಲ್ಲಿ ವಿತರಣೆ ಸಹ ಮಾಡಿದ್ದರು. ಸುದೀಪ್, ನಟ ಉಪೇಂದ್ರ ಸೇರಿದಂತೆ ಕೆಲವು ನಟರೊಂದಿಗೆ ಜಾಹಿರಾತುಗಳಲ್ಲಿ ಕೆಲಸ ಮಾಡಿದ್ದಾರೆ ಪ್ರಶಾಂತ್ ಸಂಬರ್ಗಿ. ಸಿನಿಮಾರಂಗದಲ್ಲಿ ಗೆಳೆಯರನ್ನು ಹೊಂದಿರುವ ಪ್ರಶಾಂತ್ ಸಂಬರ್ಗಿ ಸಾಕಷ್ಟು ವಿರೋಧಿಗಳನ್ನು ಸಹ ಹೊಂದಿದ್ದಾರೆ. ಈ ಮೂಲಕ ಈ ಬಾರಿಯ ಬಿಗ್ ಬಾಸ್ ಗೆ ರಾಜಕಾರಣಿಯೊಬ್ಬರು ಬರಲಿದ್ದಾರೆ ಎನ್ನುವ ಸುದ್ದಿಗೂ ಪ್ರಶಾಂತ್ ಸಂಬರಗಿ ದೊಡ್ಮನೆ ಪ್ರವೇಶದಿಂದಾಗಿ ತೆರೆಬಿದ್ದಂತಾಗಿದೆ. ಅಂದ್ಹಾಗೆ ಇಂದಿನಿಂದ ಬಿಗ್ ಬಾಸ್ ಶೋ ನಲ್ಲಿ 100 ದಿನಗಳ ಆಟ ಶುರುವಾಗಲಿದೆ. ಈಗಾಗಲೇ 17 ಸ್ಪರ್ಧಿಗಳು ದೊಡ್ಮನೆ ಸೇರಾಗಿದೆ.