ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿರುವ ಮುದ್ದು ಮುಖದ ಚೆಲುವೆ ದಿವ್ಯಾ ಯಾರು..? ಹಿನ್ನೆಲೆ ಏನು..?
ಇಂದಿನಿಂದ ಬಿಗ್ ಬಾಸ್ ಶೋ ನಲ್ಲಿ 100 ದಿನಗಳ ಆಟ ಶುರುವಾಗಲಿದೆ. ಈಗಾಗಲೇ 17 ಸ್ಪರ್ಧಿಗಳು ದೊಡ್ಮನೆ ಸೇರಾಗಿದೆ. ಹಾಗಾದ್ರೆ 11ನೇ ಸ್ಪರ್ಧಿಯಾಗಿ ಮನೆಗೆ ಸೇರಿರುವ ದಿವ್ಯಾ ಸುರೇಶ್ ಯಾರು…? ದಿವ್ಯಾ ಮಾಡೆಲ್, ಸಿನಿಮಾ ನಟಿ, ಕಿರುತೆರೆಯಲ್ಲೂ ಮಿಂಚು ಹರಿಸಿರುವ ಈಕೆ ಪ್ರೇಮಲೋಕ ಧಾರವಾಹಿಯ ಮೂಲಕ ಮೋಹಕ ರೂಪದಲ್ಲಿ ಎಂಟ್ರಿಕೊಟ್ಟಿದ್ದರು. ನೆಗೆಟಿವ್ ಶೇಡ್ ನಲ್ಲಿ ಕಾಣಿಸಿಕೊಂಡಿದ್ದರು. ಅಂದ್ಹಾಗೆ 2017ರಲ್ಲಿ ರಿಲೀಸ್ ಆಗಿದ್ದ ಕನ್ನಡ ಸಿನಿಮಾ ‘ಹಿಲ್ಟನ್ ಹೌಸ್’ ಚಿತ್ರದ ಮೂಲಕ ದಿವ್ಯ ಸುರೇಶ್ ಸ್ಯಾಂಡಲ್ವುಡ್ ಪ್ರವೇಶಿಸಿದ್ದರು. ಅಷ್ಟೇ ಅಲ್ಲದೇ 2019ರಲ್ಲಿ ‘ಡಿಗ್ರಿ ಕಾಲೇಜ್’ ಮೂಲಕ ಟಾಲಿವುಡ್ ಇಂಡಸ್ಟ್ರಿ ಪ್ರವೇಶಿಸಿದರು. ಆದ್ರೆ ಈ ಸಿನಿಮಾದಲ್ಲಿ ತಮ್ಮ ಬೋಲ್ಡ್ ಪಾತ್ರದಿಂದ ಸಾಕಷ್ಟು ಟ್ರೋಲ್ ಗಳಿಗೂ ಒಳಗಾಗಿದ್ದರು. ಇನ್ನೂ ಇವರು ಮಿಸ್ ಇಂಡಿಯಾ ಸೌತ್ ಕೂಡ ಆಗಿದ್ದಾರೆ.
ಬಿಗ್ ಬಾಸ್ ಗೆ ಬ್ರಹ್ಮಾಂಡವಾಗಿ ಎಂಟ್ರಿ ಕೊಟ್ಟ ಬ್ರಹ್ಮಗಂಟು ಗೀತಾ..!
ಇನ್ನೂ ಕಿಚ್ಚ ಸುದೀಪ್ ನಟನೆಯ ಹೆಬ್ಬುಲಿ ಸಿನಿಮಾದಲ್ಲಿಸುದೀಪ್ ತಂಗಿ ಪಾತ್ರದಲ್ಲಿ ಕಾಣಿಸಿಕೊಳ್ಳುವ ಅವಕಾಶ ದಿವ್ಯಾಗೆ ಒಲಿದಿತ್ತು. ನಂತರದಲ್ಲಿ ಈ ಆಫರ್ ಅನ್ನ ತಿರಸ್ಕರಿಸಿದ್ದರು. ಕಾರಣ ಸುದೀಪ್ಅವರನ್ನ ಕಂಡರೆ ಇವರಿಗೆ ಇಷ್ಟವಂತೆ. ಹೀಗಾಗಿ ಅವರ ತಂಗಿ ಪಾತ್ರದಲ್ಲಿ ಮಾಡಲು ಇಷ್ಟ ಇರಲಿಲ್ಲವಂತೆ. ಮುಂದಿನ ದಿನಗಳಲ್ಲಿ ಸಿನಿಮಾರಂಗದಲ್ಲಿ ಸಾಕಷ್ಟು ಹೆಸರು ಗಳಿಸುವ ಆಸೆ ಹೊಂದಿದ್ದಾರಂತೆ ದಿವ್ಯಾ ಇವರ ಕನಸು ನನಸಾಗುಉವುದಕ್ಕೆ ಬಿಗ್ ಬಾಸ್ ಒಂದು ಒಳ್ಳೆಯ ಪ್ಲಾಟ್ ಫಾರ್ಮ್ ಆಗಲಿದೆ.