ದೊಡ್ಮನೆಯಲ್ಲಿ ಕಮಾಲ್ ಮಾಡ್ತಾರಾ ಶಿವಮೊಗ್ಗದ ಬೆಡಗಿ ದಿವ್ಯ ಉರುಡುಗ..!
ಇಂದಿನಿಂದ ಬಿಗ್ ಬಾಸ್ ಶೋ ನಲ್ಲಿ 100 ದಿನಗಳ ಆಟ ಶುರುವಾಗಲಿದೆ. ಈಗಾಗಲೇ 17 ಸ್ಪರ್ಧಿಗಳು ದೊಡ್ಮನೆ ಸೇರಾಗಿದೆ. 15ನೇ ಸ್ಪರ್ಧಿಯಾಗಿ ನಟಿ ದಿವ್ಯ ಉರುಡುಗ ಬಿಗ್ ಬಾಸ್ ಮನೆ ಸೇರಾಗಿದೆ. ಕನ್ನಡ ಚಿತ್ರರಂಗ ಮತ್ತು ಕಿರುತೆರೆಯಲ್ಲಿ ಸಕ್ರಿಯವಾಗಿರುವ ಶಿವಮೊಗ್ಗದ ಬೆಡಗಿ ದಿವ್ಯಾ ಉರುಡುಗ ತೀರ್ಥಹಳ್ಳಿಯವರು.
ಬಿಗ್ ಬಾಸ್ ಮನೆಯಲ್ಲಿ ಹೋರಾಟ ಮುಂದುವರೆಸ್ತಾರಾ ಪ್ರಶಾಂತ್ ಸಂಬರಗಿ..!
ಕಿರುತೆರೆಯಲ್ಲಿ ಚಿಟ್ಟೆ ಹೆಜ್ಜೆ, ಓಂ ಶಕ್ತಿ ಓಂ ಶಾಂತಿ, ಅಂಬಾರಿ, ಖುಷಿ, ಸೇರಿ ಹಲವು ಧಾರವಾಹಿಗಳಲ್ಲಿ ಗುರುತಿಸಿಕೊಂಡಿರುವ ದಿವ್ಯಾ ‘ಸೂಪರ್ ಕಬ್ಬಡ್ಡಿ’ ರಿಯಾಲಿಟಿ ಶೋನಲ್ಲಿ ಕೂಡ ಭಾಗಿಯಾಗಿದ್ದರು. ಅಲ್ಲದೇ 2017ರಲ್ಲಿ ತೆರೆಕಂಡ ‘ಹುಲಿರಾಯ’ ಚಿತ್ರದಿಂದ ತಮ್ಮ ಸಿನಿಮಾ ಜರ್ನಿ ಆರಂಭಿಸಿದ್ದರು. ಬಳಿಕ ‘ಧ್ವಜ’ ಮತ್ತು ಫೇಸ್ 2 ಪೇಸ್’ ಎಂಬ ಚಿತ್ರಗಳಲ್ಲಿಯೂ ನಾಯಕಿಯಾಗಿ ನಟಿಸಿದ್ದಾರೆ.