ಬಿಗ್ ಬಾಸ್ ಸೀಸನ್ 8 | 8ನೇ ಸ್ಪರ್ಧಿ.. ಬ್ರೋ ಗೌಡ ಅಲಿಯಾಸ್ ಶಮಂತ್
ಬಿಗ್ ಬಾಸ್ ಸೀಸನ್ 8 ಕಾರ್ಯಕ್ರಮದ ಎಂಟನೇ ಸ್ಪರ್ಧಿಯಾಗಿ ನಟಿ ನಿಧಿ ಸುಬ್ಬಯ್ಯ ಅವರು ದೊಡ್ಮನೆಗೆ ಎಂಟ್ರಿಕೊಟ್ಟಿದ್ದಾರೆ.
ಕಿಚ್ಚ ಸುದೀಪ್ ನಿರೂಪಣೆಯ ಕನ್ನಡ ಕಿರುತೆರೆಯ ಬ್ಲಾಕ್ ಬಸ್ಟರ್ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ ಎಂಟು ಇಂದಿನಿಂದ ಆರಂಭವಾಗಿದೆ. ಈಗಾಗಲೇ ಏಳು ಸ್ಪರ್ಧಿಗಳು ಬಿಗ್ ಬಾಸ್ ಮನೆಗೆ ಎಂಟ್ರಿಯಾಗಿದ್ದು,ಎಂಟನೇ ಸ್ಪರ್ಧಿಯಾಗಿ ನಿಧಿ ಸುಬ್ಬಯ್ಯ ಬಿಗ್ ಹೌಸ್ ಗೆ ಕಾಲಿಟ್ಟಿದ್ದಾರೆ.
ಸದ್ಯ ದೊಡ್ಮನೆಗೆ ಎಂಟ್ರಿ ಕೊಟ್ಟವರಿಗೆ ಒಂದು ಟಾಸ್ಕ್ ನೀಡಲಾಗಿದ್ದು, ವಿಶೇಷ ಬಾಲ್ ಗಳನ್ನು ಹುಡುಕುತ್ತಿದ್ದಾರೆ.
ಇನ್ನು ಬಿಗ್ ಬಾಸ್ ನ ಮೊದಲ ಸ್ಪರ್ಧಿಯಾಗಿ ಧನುಶ್ರೀ ಹಾಗು ಎರಡನೇ ಸ್ಪರ್ಧಿಯಾಗಿ ಶುಭಪೂಂಜಾ, ಮೂರನೇ ಸ್ಪರ್ಧಿಯಾಗಿ ಹಿರಿಯ ನಟ ಅಶ್ವತ್, ನಾಲ್ಕನೇ ಸ್ಫರ್ಧಿಯಾಗಿ ಯುವ ಗಾಯಕ ವಿಶ್ವ, ಐದನೇ ಸ್ಪರ್ಧಿಯಾಗಿ ಕಿರುತೆರೆ ನಟಿ ವೈಷ್ಣವಿ, ಆರನೇ ಸ್ಪರ್ಧಿಯಾಗಿ ಬೈಕ್ ರೇಸರ್ ಅರವಿಂದ್, ಏಳನೇ ಸ್ಪರ್ಧಿಯಾಗಿ ನಟಿ ನಿಧಿ ಸುಬ್ಬಯ್ಯ ಅವರು ಮನೆಯೊಳಗೆ ಕಾಲಿಟ್ಟಿದ್ದಾರೆ.