ಶೈನ್ ಜೀವನದಲ್ಲಿ 3 ಪ್ರಮುಖ ಪಾತ್ರ ವಹಿಸಿದ್ದಾರಂತೆ ಪುನೀತ್ ರಾಜ್ ಕುಮಾರ್..!  

1 min read

ಶೈನ್ ಜೀವನದಲ್ಲಿ 3 ಪ್ರಮುಖ ಪಾತ್ರ ವಹಿಸಿದ್ದಾರಂತೆ ಪುನೀತ್ ರಾಜ್ ಕುಮಾರ್..!

ಬೆಂಗಳೂರು:  ಬಿಗ್ ಬಾಸ್ ಸೀಸನ್ 7ರ ವಿನ್ನರ್ ಶೈನ್ ಶೆಟ್ಟಿ ಅಪ್ಪು ಅನ್ನ ನೆನೆದು ಭಾವುಕರಾಗಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದ್ದಾರೆ. ಇಂದಿಗೆ ಅಪ್ಪು ನಮ್ಮನ್ನ ಅಗಲಿ 13 ದಿನ ಕಳೆದಿದೆ. ಇದೀಗ ನಟ ಶೈನ್ ಶೆಟ್ಟಿ ಅವರು ತನ್ನ ಜೀವನದಲ್ಲಿ ಅಪ್ಪು ಪ್ರಮುಖ ಪಾತ್ರ ವಹಿಸಿರುವುದನ್ನು ಸ್ಮರಿಸಿ ಭಾವುಕರಾಗಿ ಬರೆದುಕೊಂಡಿದ್ದಾರೆ..

“ಬದುಕು ಒಂದು ಸಿನಿಮಾ ಅನ್ನುವುದು ಎಷ್ಟು ನಿಜ. ಆ ಸಿನಿಮಾದ ಚಿತ್ರಕಥೆಯಲ್ಲಿ 3 ಭಾಗವಿದೆಯೋ ಹಾಗೆಯೆ ಪುನೀತ್ ರಾಜ್ ಕುಮಾರ್ ಸರ್ ನನ್ನ ಜೀವನದಲ್ಲಿ ಕೂಡ 3 ಪ್ರಮುಖ ಪಾತ್ರ ವಹಿಸಿದ್ದಾರೆ. ಮೊದಮೊದಲು ನನ್ನ ಈ ಕಲಾ ಪ್ರವಾಸ ಶುರುವಾದಾಗ, ಪುನೀತ್ ಸರ್ ಅವರನ್ನು ಕನ್ನಡ ಚಿತ್ರರಂಗದ ಪವರ್ ಸ್ಟಾರ್ ಆಗಿ ಎದುರು ನೋಡುತ್ತಿದ್ದೆ, ಬೆಳ್ಳಿ ಪರದೆಯ ಮೇಲೆ ಅವರು ಮೂಡಿಸಿದ ಜಾದೂಗೆ ಬೆರಗಾಗಿದ್ದೆ. ಅವರ ಜೊತೆ ನಟಿಸಲು ಹಾಗೂ ಹಲವಾರು ಬಾರಿ ರಂಗಮಂಚಿಕೆ ಹಂಚಿಕೊಳ್ಳಲು ಅವಕಾಶ ದೊರೆತಾಗ ಒಂದು ಪುಟ್ಟ ಗೆಳೆತನ ಚಿಗುರೊಡೆಯಿತು. ಆಗ ಅವರು ನನ್ನ ಆಸೆ, ಪ್ರತಿಭೆಗಳನ್ನು ಹೊಗಳಿದಲ್ಲದ್ದೆ, ಅವರ ಅತ್ಯಮೂಲ್ಯವಾದ ಮಾರ್ಗದರ್ಶನ ನೀಡಿ ನನ್ನ ಗುರಿಯನ್ನು ತಲುಪಲು ಪ್ರೇರಿಸಿದರು. ಈ ಸಿನಿಮಾ ಫೀಲ್ಡ್ ನಲ್ಲಿ ಉಳಿಯೋದಕ್ಕೆ ಅಥವಾ ಬೆಳೆಯೋದಕ್ಕೆ ಅಪ್ಪು ಸರ್ ರವರ ಪ್ರೋತ್ಸಾಹ ಒಂದು ಕಾರಣ ಎಂದು ಹೇಳಿದರೆ ತಪ್ಪಾಗಲಾರದು”.

ಬಿಗ್ ಬಾಸ್ “ಪ್ರಣಯ ಪಕ್ಷಿ”ಗಳನ್ನ ಭೇಟಿಯಾದ ಶುಭಾ..!

“ಆ ಸ್ನೇಹ ಭ್ರಾತೃತ್ವದ ರೂಪ ಪಡೆಯಲು ಬಹಳ ಸಮಯ ಬೇಕಾಗಿರಲಿಲ್ಲ. ಪುನೀತ್ ಸರ್ ಅವರನ್ನು ಅಷ್ಟು ಕೊಂಡಾಡಲು ಅವರ ಸುತ್ತಮುತ್ತ ಇದ್ದ ಜನರನ್ನು ವೃತ್ತಿಯಲ್ಲಷ್ಟೇ ಅಲ್ಲ ವೈಯಕ್ತಿಕ ವಿಚಾರದಲ್ಲಿಯೂ ಹುರಿದುಂಬಿಸುತ್ತಿದ್ದರೆಂಬುದೇ ಸಾಕ್ಷಿ. ಗಲ್ಲಿ ಕಿಚನ್ ಶುರುವಾದಾಗ ತಮ್ಮ ಬೆಂಬಲದ ಜೊತೆಗೆ ಉತ್ತಮ ಉದ್ಯಮಿಯಾಗುವ ಹಲವಾರು ಆಲೋಚನೆಗಳನ್ನೂ ವ್ಯಕ್ತಪಡಿಸಿದರು”.

“ಬೆಳಿತಾ ಬೆಳಿತಾ ಆ ಮಿನುಗು ತಾರೆ, ಕಷ್ಟ ಪಡ್ತಾ ಆ ಸಲಹೆಗಾರ, ಕಾಲ ಕ್ರಮೇಣ ಪ್ರೀತಿಯ ಸಹೋದರನಾಗಿ ಬದಲಾಗಿ ನನ್ನ ಜೀವನದ ಮೇಲೆ ಗಾಢವಾದ ಪ್ರಭಾವ ಬೀರಿದ್ದಾರೆ. ನೀವು ಕಲಿಸಿದ ಪಾಠ, ಮೌಲ್ಯಗಳನ್ನು ಎಂದಿಗೂ ಜೀವಂತವಾಗಿ ಇರಿಸಿಕೊಳ್ಳುತ್ತಾ.. ಹೋಗ್ಬನ್ನಿ ಪುನೀತ್ ಸರ್” ಎಂದು ಬರೆದುಕೊಂಡಿದ್ದಾರೆ.

“ ಸಾರಿ ಕರ್ಮ ರಿಟರ್ನ್ಸ್” ಅಂತ ಕಮ್ ಬ್ಯಾಕ್ ಮಾಡ್ತಿದ್ದಾರೆ ರಾಗಿಣಿ  

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd