BIGGBOSS 8 – ಮೊನ್ನೆ ಉರುಡುಗ ಅರವಿಂದ್ ಗರ್ಲ್ ಫ್ರೆಂಡ್…. ಇಂದು ಲ್ಯಾಗ್ ಮಂಜು ದಿವ್ಯಾ ಸುರೇಶ್ ಡೌ.. ಎಂದ ಸಂಬರಗಿ..!  

1 min read

BIGGBOSS 8 – ಮೊನ್ನೆ ಉರುಡುಗ ಅರವಿಂದ್ ಗರ್ಲ್ ಫ್ರೆಂಡ್…. ಇಂದು ಲ್ಯಾಗ್ ಮಂಜು ದಿವ್ಯಾ ಸುರೇಶ್ ಡೌ ಎಂದ ಸಂಬರಗಿ..!

ಬಿಗ್ ಬಾಸ 8ನೇ ಆವೃತ್ತಿಯುವ 5 ವರಾಗಳನ್ನ ಯಶಸ್ವಿಯಾಗಿ ಪೂರೈಸಿದ್ದು, 6ನೇವಾರಕ್ಕೆ ಕಾಲಿಟ್ಟಿದೆ. ಈ ನಡುವೆ ದೊಡ್ಡ ದೊಡ್ಡ ಗಲಾಟೆ ಗದ್ದಲುಗಳು ಮನೆಯಲ್ಲಿ ಸೌಂಡ್ ಮಾಡ್ತಿದೆ. ಇಂದು ಬಿಗ್ ಬಾಸ್ ಪ್ರೋಮೋ ರಿಲೀಸ್ ಆಗಿದ್ದು, ಪ್ರೇಕ್ಷಕರನ್ನ ಸಾಕಷ್ಟು ಕುತೂಲಹಕ್ಕೀಡು ಮಾಡಿದೆ. ಹೌದು ಪ್ರೋಮೋದಲ್ಲಿ ಮಾವ, ಅಳಿಯನ ನಡುವಿನ ಜಗಳ ತಾರಕ್ಕೇರಿರೋದನ್ನ ನೋಡಬಹುದು.

ಮಂಜು ಹಾಗೂ ಸಂಬರಗಿ ನಡುವೆ ಪರಸ್ಪರ ಮಾತಿನ ಚಕಮಕಿ ತಾರಕಕ್ಕೇರಿದೆ. ಇದಕ್ಕೆ ಕಾರಣ ಸಂಬರಗಿ ವರ್ತನೆ. ಪ್ರಶಾಂತ್ ಸಂಬರಗಿ ಮನೆಯಲ್ಲಿ ಮೈಂಡ್ ಗೇಮ್ ಆಡ್ತಿದ್ದಾರೆ ಅನ್ನೋದು ಸದಸ್ಯರ ವಾದ. ಅದ್ರಂತೆ ಸಂಬರಗಿ ಕೂಡ ನಡೆದುಕೊಳ್ತಿದ್ದಾರೆ ಅನ್ನೋದನ್ನ ಗಮನಸಿಬಹುದು. ಯಾಕಂದ್ರೆ ಇತ್ತೀಚೆಗಷ್ಟೇ ದಿವ್ಯಾ ಅರವಿಂದ್ ನಡುವಿನ ಬಾಂಧವ್ಯದ ಬಗ್ಗೆ ಮಾತನಾಡಿದ್ದ ಸಂಬರಗಿ ಅರವಿಂದ್ ಜೊತೆಗಿನ ಕಿತ್ತಾಟದದ ನಡುವೆ ಉರುಡುಗ ಹೆಸರನ್ನ ಎಳೆ ತಂದಿದ್ದರು. ಅರವಿಂದ್ ಗರ್ಲ್ ಫ್ರೆಂಡ್ ಎಂದು ಹೇಳಿದ್ದರು. ಇದರಿಂದ ರೊಚ್ಚಿಗೆದ್ದಿದ್ದ  ದಿವ್ಯಾ ನನ್ನ ತಂಟೆಗೆ ಬಂದ್ರೆ ಸರಿ ಇರುವುದಿಲ್ಲ ಅಂತ ಸಂಬರಗಿ ಬೆವರಿಳಿಸಿದ್ದರು.

ಅಷ್ಟೇ ಅಲ್ಲ ಕೆಲ ದಿನಗಳ ಹಿಮದೆ. ನೀನು ಲ್ಯಾಗ್ ಮಂಜು ಬಾಲ ಆಗ್ಬೇಡ ಅಂತ ದಿವ್ಯಾ ಸುರೇಶ್ ಕಿವಿ ತುಂಬುವ ಮೂಲಕ ಇಬ್ಬರ ನಡುವಿನ ಬಾಂಧವ್ಯಕ್ಕೆ ಹುಳಿ ಹಿಂಡುವ ಪ್ರಯತ್ನ ಮಾಡಿದ್ದರು.  ಆದ್ರೆ ಅದರಲ್ಲಿ ಯಶಸ್ವಿಯಾಗಿರಲಿಲ್ಲ. ಈಗ ದಿವ್ಯಾ ಸುರೇಶ್ ಗೆ ನಿನ್ನ ಡವ್ವು ಎಂದು ಮಂಜುವನ್ನ ಎಳೆತಂದು ವಯಕ್ತಿಕವಾಗಿ ಮಾತನಾಡಿದ್ದಾರೆ.

ಪ್ರೋಮೋದಲ್ಲಿರೋದೇನು..?

ಸ್ವಿಮ್ಮಿಂಗ್ ಪುಲ್‍ನಲ್ಲಿ ಪ್ರಶಾಂತ್ ಸಂಬರ್ಗಿ, ಚಕ್ರವರ್ತಿ ಚಂದ್ರಚೂಡ ಹಾಡು ಹೇಳುತ್ತಿದ್ದರು. ಈ ವೇಳೆ ಅಲ್ಲಿಯೇ ಇದ್ದ ದಿವ್ಯಾ ಸುರೇಶ್ ಸ್ವಲ್ಪ ಸೌಂಡ್ ಕಡಿಮೆ ಮಾಡಿ ಎಂದು ಹೇಳಿದ್ದಾರೆ. ಈ ವೇಳೆ ಪ್ರಶಾಂತ್ ಸಂಬರ್ಗಿ ನಮಗೇನು ಹೇಳುತ್ತಿಯಾ ನಿನ್ನ ಡೌಗೆ ಹೇಳು ಎಂದು ಮಂಜುಗೆ ಹೇಳಿದ್ದಾರೆ. ಈ ವೇಳೆ ಸಿಟ್ಟೆಗೆದ್ದ ದಿವ್ಯಾ ನಿಮಗೆ ಅದನ್ನೆಲ್ಲಾ ಮಾತನಾಡುವ ಯಾವ ಹಕ್ಕು ಇಲ್ಲ ಎಂದು ಹೇಳಿದ್ದಾರೆ.

ಈ ವೇಳೆ ಅಲ್ಲಿಗೆ ಬಂದ ಮಂಜು ಮಾವ ನನಗೆ ನೇರವಾಗಿ ಹೇಳು ಯಾಕೆ ಹೀಗೆ ಮಾತನಾಡುತ್ತೀಯಾ ಎಂದು ಹೇಳಿದ್ದಾರೆ. ನನಗೆ ಮಾವ ಅನ್ನಬೇಡಾ ಎಂದು ಸಂಬರ್ಗಿ ಹೇಳಿದ್ದಾರೆ. ಈ ವೇಳೆ ಮಂಜು ಮತ್ತು ಸಂಬರ್ಗಿ ನಡುವೆ ತೀವ್ರ ಮಾತಿನ ಚಕಮಕಿ ನಡೆದಿದ್ದು, ಮುಂದೇನಾಗುತ್ತೇ ಅನ್ನೋದನ್ನ ತಿಳಿಯೋಕೆ ರಾತ್ರಿ 9.30 ವರೆಗೂ ಕಾಯಲೇಬೇಕು..

BiggBoss 8 – 6 ನೇ ವಾರ 6 ಜನ ಡೇಂಜರ್ ಝೋನ್ ನಲ್ಲಿ – ಈ ವಾರ ಹೊರಗಡೆ ಹೋಗೋದ್ಯಾರು..?

 

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd