BIGGBOSS 8 – 9ನೇ ವಾರದ ಕ್ಯಾಪ್ಟನ್ ಆದ ರಘು ಗೌಡಗೆ ಬಿಗ್ ಬಾಸ್ ನಿಮದ ಬಂಪರ್ ಸಪ್ರೈಸ್..!
ಸತತ 53 ದಿನಗಳ ಬಳಿಕ ಕೊನೆಗೂ ಮನೆಯ 9 ನೇ ವಾರದ ಕ್ಯಾಪ್ಟನ್ ಆಗಿ ರಘು ಗೌಡ ಆಯ್ಕೆಯಾಗಿದ್ದಾರೆ. ಈಗಾಗಲೇ ಪುರುಷ ಸದಸ್ಯರ ಪೈಕಿ ಶಮಂತ್ , ರಾಜೀವ್ , ಅರವಿಂದ್ , ವಿಶ್ವನಾಥ್ , ರಾಜೀವ್ , ಮಂಜು ಪಾವಗಡ, ಪ್ರಶಾಂತ್ ಸಂಬರಗಿ ಕೂಡ ಕ್ಯಾಪ್ಟನ್ ಆಗಿದ್ದರು. ಆದ್ರೆ ರಘೂ ಗೌಡ ಗೆ ತಡವಾಗಿ ಈ ಅದೃಷ್ಟ ಒಲಿದಿದೆ.
ಬಿಗ್ ಬಾಸ್ ಕೊಟ್ಟಿದ್ದ ಟಾಸ್ಕ್ ನಲ್ಲಿ ಪ್ರಸಾಂತ್ ಸಂಬರಗಿ , ರಾಜೀವ್ , ಮಂಜು ಪಾವಗಡ ಅವರನ್ನ ಸೋಲಿಸಿ ಮನೆಯ 9 ನೇ ಕ್ಯಾಪ್ಟನ್ ಆಗಿ ದರ್ಬಾರ್ ನಡೆಸಲು ಸಿದ್ದರಾಗಿದ್ದಾರೆ. ಇದೇ ಗೆಲುವಿನ ಹುಮ್ಮಸ್ಸಿನಲ್ಲಿದ್ದ ರಘು ಖುಷಿ ಇಮ್ಮಡಿಗೊಳಿಸಿದ್ದು ಬಿಗ್ ಬಾಸ್ ನೀಡಿದ ಸಪ್ರ್ರೈಸ್..
ಹೌದು… ರಘು ಗೌಡ ಕ್ಯಾಪ್ಟನ್ ಆಗಿ ಆಯ್ಕೆಯಾಗ್ತಿದ್ದಂತೆ ಬಿಗ್ ಬಾಸ್ ಅವರ ಪತ್ನಿಯ ವಾಯ್ಸ್ ರೆಕಾರ್ಡ್ ಅನ್ನ ರಘುಗೆ ಕೇಳಿಸಿದ್ದಾರೆ. ಇದ್ರಿಂದ ರಘು ಭಾವುಕರಾಗಿದ್ದು, ಡಬಲ್ ಹ್ಯಾಪಿಯಾಗಿದ್ದಾರೆ. ಇನ್ನೂ ವಾಯ್ಸ್ ನೋಟ್ ನಲ್ಲಿ ರಘು ಪತ್ನಿ ರಘು ಅವರ ಮೇಲೆ ತುಂಬಾ ಹೆಮ್ಮೆಯಿರುವುದಾಗಿ ಹಾಗೇ ಫಿನಾಲೆಯಲ್ಲಿ ಅವರನ್ನ ನೋಡಲು ಇಷ್ಟಪಡುವುದಾಗಿಯೂ ಹೇಳಿಕೊಂಡಿದ್ದಾರೆ.