BIGGBOSS 8 : ಟಾಸ್ಕ್ ವೇಳೆ ಗಾಯಗೊಂಡ ದಿವ್ಯಾ ಉರುಡುಗ – ಭಾವುಕರಾಗಿ ಅತ್ತ ಅರವಿಂದ್
ಬೆಂಗಳೂರು : ಬಿಗ್ ಬಾಸ್ ಶೋ ಲಾಕ್ ಡೌನ್ ನಿಂದ ಅರ್ಧಕ್ಕೆ ನಿಂತು ಹೋಗಿ ಮತ್ತೆ ಪುರಾರಂಭಾವಗಿದೆ.. ಈ ನಡುವೆ ಈಗಾಗಲೇ ಹೊರಗಡೆ ಹೋಗಿ ಎಪಿಸಸೋಡ್ ಗಳನ್ನ ನೋಡಿ ವಾಪಸ್ ತಪ್ಪುಗಳನ್ನ ಸರಿ ಪಡಿಸಿಕೊಂಡು ಹೊಸ ಗೇಮ್ ಸ್ಟ್ರಾಟರ್ಜಿಗಳೊಂದಿಗೆ ಸ್ಪರ್ಧಿಗಳು ರೀ ಎಂಟ್ರಿ ಕೊಟ್ಟಿದ್ದಾರೆ.. ಹಲವರಲ್ಲಿ ಬದಲಾವಣೆಗಳು ಕಾಣ್ತಿವೆ.. ಈ ನಡುವೆ ಫೈಟ್ ಗಳು ಕೂಡ ಆರಂಭವಾಗಿದೆ.. ಪರಸ್ಪರ ಭಿನ್ನಾಭಿಪ್ರಾಯಗಳು ಕಾಣುತ್ತಿವೆ..
ಆದ್ರೆ ಇಬ್ಬರು ಮಾತ್ರ ಬದಲಾಗಿಲ್ಲ.. ದಿವ್ಯಾ ಉರುಡುಗ – ಅರವಿಂದ್ ನಡುವಿನ ಕೆಮಿಸ್ಟ್ರಿ ಮಾತ್ರ ಮೊದಲ ಇನ್ನಿಂಗ್ಸ್ ಗಿಂತಲೂ ತುಸು ಹೆಚ್ಚಾಗಿಯೇ ಕಾಣಿಸುತ್ತಿದೆ.. ಸದಾ ಒಟ್ಟಾಗಿ ಕಾಣಿಸಿಕೊಳ್ಳುತ್ತಾ ಒಬ್ಬರಿಗೊಬ್ಬರು ಸಪೋರ್ಟ್ ಮಾಡುತ್ತಾ , ಪರಸ್ಪಾರ ಧೈರ್ಯ ತುಂಬುತ್ತಾ ಸಮಾಧಾನ ಮಾಡುತ್ತಾ ಇಬ್ಬರೂ ಒಟ್ಟಿಗೆ ಇರುತ್ತಾರೆ.. ಈ ಜೋಡಿ ಸದಾ ಲೈಮ್ ಲೈಟ್ ನಲ್ಲಿರುತ್ತೆ.. ಅಲ್ಲದೇ ಇವರಿಬ್ಬರಿಗೆ ಅಭಿಮಾನಿಗಳು ಸಹ ಇದ್ದಾರೆ.
ಸಂತೆಯಲ್ಲಿ ಸೀರೆ ಬಿಚ್ಚಿಸಿ ಆಗಿದೆ, ಮರ್ಯಾದೆ ಉಳಿಸೋದ್ರಲ್ಲಿ ಅರ್ಥವಿಲ್ಲ, ಸತ್ಯ ಗೊತ್ತಾಗಲೇ ಬೇಕಿದೆ – ಉಮಾಪತಿ
ಇತ್ತೀಚೆಗೆ ಬಿಗ್ ಬಾಸ್ ‘ಹೀಗೂ ಅಂಟೆ’ ಎಂಬ ಟಾಸ್ಕ್‌ನನ್ನು ನೀಡಿದ್ದರು. ಈ ಟಾಸ್ಟ್ ನಲ್ಲಿ ಎರಡು ತಂಡದ ಒಬ್ಬೊಬ್ಬ ಸದಸ್ಯರು ಬಿಗ್‍ಬಾಸ್ ನೀಡುವ ಜಾಕೆಟ್ ತೊಡಬೇಕು ಹಾಗೂ ಎದುರಾಳಿ ತಂಡದವರು ಆ ಜಾಕೆಟ್‍ಗೆ ಸ್ಟಾರ್ ಒಂದನ್ನು ಅಂಟಿಸಬೇಕು ಎಂದು ಸೂಚಿಸಿದ್ದರು.
ಅದರಂತೆ ವಿಜಯಯಾತ್ರೆ ತಂಡದ ಅರವಿಂದ್ ಜಾಕೆಟ್ ತೊಟ್ಟು ಆಟ ಆಡುವಾಗ, ದಿವ್ಯಾ ಉರುಡುಗ ಮಂಜು ಹಾಗೂ ದಿವ್ಯಾ ಸುರೇಶ್ ಸ್ಟಾರ್ ಅಂಟಿಸಲು ಪ್ರಯತ್ನಿಸುತ್ತಾರೆ. ಈ ವೇಳೆ ಅರವಿಂದ್ ದಿವ್ಯಾ ಉರುಡುಗ ಮೇಲೆ ಜೋರಾಗಿ ಬೀಳುತ್ತಾರೆ. ಟಾಸ್ಕ್ ನಂತರ ನಾನು ಬಹಳ ಜೋರಾಗಿ ಓಡಿ ಬರಬೇಕಾದರೆ ನನ್ನನ್ನು ತಡೆಯಲು ಬರಬೇಡ ಏಟಾಗುತ್ತದೆ ಎಂದು ಒಂದು ಬಾರಿ ದಿವ್ಯಾ ಉರುಡುಗಗೆ ಎಚ್ಚರಿಸುತ್ತಾರೆ.
ದರ್ಶನ್ ಗೆಳೆಯರು ನನ್ನ ತೇಜೋವಧೆ ಮಾಡಲು ಷಡ್ಯಂತ್ರ ಹೂಡಿದ್ದಾರೆ – ಉಮಾಪತಿ
ನಂತರ ನಿಂಗೈತೆ ಇರು ತಂಡದಿಂದ ಜಾಕೆಟ್ ತೊಟ್ಟ ಆಟ ಆಡಲು ದಿವ್ಯಾ ಉರುಡುಗ ಆರಂಭಿಸುತ್ತಾರೆ. ಈ ವೇಳೆ ಅರವಿಂದ್ ದಿವ್ಯಾ ಉರುಡುಗಗೆ ಸ್ಟಾರ್ ಅಂಟಿಸಲು ಪ್ರಯತ್ನಿಸುತ್ತಿರುತ್ತಾರೆ. ಆಗ ಚಕ್ರವರ್ತಿ ದಿವ್ಯಾ ಉರುಡುಗರನ್ನು ಸೇವ್ ಮಾಡಲು ಹೋಗಿ ಗಾರ್ಡನ್ ಏರಿಯಾದಲ್ಲಿದ್ದ ಗಾಜಿಗೆ ದಿವ್ಯಾ ಉರುಡುಗ ಕೈ ತಗುಲಿ ಪೆಟ್ಟಾಗುತ್ತದೆ. ನಂತರ ಮನೆಯ ಎಲ್ಲ ಸದಸ್ಯರು ದಿವ್ಯಾ ಉರುಡುಗರಿಗೆ ಸಮಾಧಾನ ಪಡಿಸುತ್ತಾರೆ ಮತ್ತು ಕನ್ಫೆಷನ್ ರೂಮ್‍ಗೆ ಅರವಿಂದ್ ದಿವ್ಯಾ ಉರುಡುಗರನ್ನು ಚಿಕಿತ್ಸೆಗೆ ಕರೆದುಕೊಂಡು ಹೋಗುತ್ತಾರೆ. ಬಳಿಕ ನಾನು ಅವಳನ್ನು ಸೇವ್ ಮಾಡಿ ಡೈರೆಕ್ಷನ್ ಚೇಂಜ್ ಮಾಡಲು ಪ್ರಯತ್ನಿಸಿದೆ ಆದರೆ ಈ ರೀತಿ ಆಯ್ತು ಎಂದು ಚಕ್ರವರ್ತಿ ಮನೆಯ ಸದಸ್ಯರಿಗೆ ತಿಳಿಸುತ್ತಾರೆ.
“ತೆಲುಗು ಸಿನಿಮಾ ಹೀರೋಗಳಿಗೆ ಬುದ್ಧಿ ಇಲ್ಲ” : ಕೋಟಾ ಶ್ರೀನಿವಾಸ್ ರಾವ್
ಬಳಿಕ ಚಿಕಿತ್ಸೆ ಪಡೆದು ವಾಪಸ್ ಬಂದ ದಿವ್ಯಾ ಉರುಡುಗರನ್ನು ಕಂಡು ಅರವಿಂದ್ ತಬ್ಬಿಕೊಂಡು ಅರವಿಂದ್ ನಿಟ್ಟುಸಿರು ಬಿಟ್ಟು, ದಿವ್ಯಾ ಉರುಡುಗರನ್ನು ಸಮಾಧಾನ ಪಡಿಸುತ್ತಾರೆ. ನಂತರ ದಿವ್ಯಾ ಉರುಡುಗ ಅರವಿಂದ್ ಕೆನ್ನೆಯನ್ನು ಕ್ಯೂಟ್ ಆಗಿ ಹಿಡಿದುಕೊಂಡು, ನನಗೆ ಹೀಗೆ ಪೆಟ್ಟಾಗಿದಕ್ಕೆ ಅತ್ರಾ ಎಂದು ಕೇಳುತ್ತಾರೆ. ಇದಕ್ಕೆ ಅರವಿಂದ್ ಇಲ್ಲ ಎನ್ನುತ್ತಾರೆ. ಆಗ ದಿವ್ಯಾ ಉರುಡುಗ ನನಗೆ ನಿಮ್ಮ ಧ್ವನಿ ಅತ್ತಿರುವಂತೆ ಕೇಳಿಸುತ್ತಿದೆ. ನನಗೆ ಗೊತ್ತು, ನೀವು ಅತ್ತಿದ್ದೀರಾ ಎಂದು ಹೇಳುತ್ತಾರೆ. ಆಗ ಅರವಿಂದ್ ನಿನಗೆ ಏಟಾಗಿದ್ಯಾಲ್ಲ ಅದಕ್ಕೆ ನನ್ನ ಧ್ವನಿ ಸರಿಯಾಗಿ ಕೇಳಿಸುತ್ತಿಲ್ಲ ಎಂದು ಅಣಿಕಿಸಿ, ಜೀವ ಬಾಯಿಗೆ ಬಂದು ಬಿಟ್ಟಿತ್ತು. ಹೊಟ್ಟೆ ಬಳಿ ನೋಡಿದರೆ ರಕ್ತ ಇತ್ತು. ಅದು ಎಲ್ಲಿಂದ ಎಂದು ಗೊತ್ತಾಗುತ್ತಿರಲಿಲ್ಲ ಎಂದು ಗಾಬರಿಗೊಂಡಿದ್ದಾಗಿ ಅರವಿಂದ್ ದಿವ್ಯಾ ಉರುಡುಗಗೆ ಹೇಳಿದ್ದಾರೆ.
ಪ್ರಕರಣಕ್ಕೆ ನಾವು ಮಂಗಳ ಹಾಡಿದ್ದೇವೆ : ದರ್ಶನ್
ನಂತರ ಶಮಂತ್, ದಿವ್ಯಾ ಉರುಡುಗ ಮತ್ತು ಅರವಿಂದ್ ಇದೇ ವಿಚಾರವಾಗಿ ಕುಳಿತು ಚರ್ಚೆ ನಡೆಸುತ್ತಿರುವ ವೇಳೆ ನಾನು ಮೊದಲ ಬಾರಿಗೆ ಅರವಿಂದ್ ವಾಯ್ಸ್ ವೊಂದನ್ನು ಕೇಳಿದೆ, ಅದು ಹತ್ತು ಸೆಕೆಂಡ್, ಶೇಕಿಂಗ್ ವಾಯ್ಸ್ ಆಗಿತ್ತು ಎನುತ್ತಾರೆ. ಆಗ ಅರವಿಂದ್ ಹೌದು ಎಂದು ಹೇಳುತ್ತಾ ಕಣ್ಣಿನ ಅಂಚಲಿನಲ್ಲಿ ನೀರು ತುಂಬಿಕೊಳ್ಳುತ್ತಾರೆ. ಆಗ ದಿವ್ಯಾ ಉರುಡುಗ ಅರವಿಂದ್ ರನ್ನು ತಬ್ಬಿಕೊಂಡು ಸಮಾದಾನ ಪಡಿಸುತ್ತಾರೆ.
BIGGBOSS 8 : 72 ದಿನಗಳ ಹಿಂದೆ ನಾನು ನೋಡಿದ್ದ ಕೆಪಿ ಹೀಗೆ ಇರಲಿಲ್ಲ ಎಂದ ಕಿಚ್ಚ