ಸ್ಯಾಂಡ್ವಿಚ್ ಅರ್ಧ ಕಟ್ ಮಾಡಿ ಕೊಡಿ ಎಂದಿದ್ದಕ್ಕೆ ಕೆಫೆಯೊಂದು ಎಕ್ಸ್ಟ್ರಾ ಚಾರ್ಜ್ ಮಾಡಿರುವ ಘಟನೆ ನಡೆದಿದೆ.
ಇಟಲಿಯ ಲೇಕ್ ಕೊಮೊ ಬಳಿ ಜನಪ್ರಿಯ ಹಾಲಿಡೇ ತಾಣವಾದ ಗೆರಾ ಲಾರಿಯೊದಲ್ಲಿನ ಬಾರ್ ಪೇಸ್ ನಲ್ಲಿ ಟೋಸ್ಟೆಡ್ ಸ್ಯಾಂಡ್ವಿಚ್ ಅನ್ನು ಅರ್ಧ ಕಟ್ ಮಾಡಿ ಕೊಡಿ ಎಂದಿದ್ದಾರೆ. ಆಹಾರ ಸೇವಿಸಿದ ಬಳಿಕ ಬಿಲ್ ನೋಡಿ ಆಶ್ಚರ್ಯಚಕಿತನಾಗಿದ್ದಾರೆ. ಕೆಫೆ ಸ್ಯಾಂಡ್ವಿಚ್ ಅನ್ನು ಕಟ್ ಮಾಡಿದ್ದಕ್ಕೆ ಅವು ವಿಧಿಸಿದ ಶುಲ್ಕ ಎಷ್ಟು ಗೊತ್ತಾ 2 ಯೂರೋ ಅಂದರೆ ಅಂದಾಜು 182 ರೂ. ಶುಲ್ಕ ವಿಧಿಸಲಾಗಿದೆ.
ಸ್ಯಾಂಡ್ವಿಚ್ ಅನ್ನು ಕಟ್ ಮಾಡಿ ಕೊಟ್ಟಿದ್ದಕ್ಕೆ ಸ್ಯಾಂಡ್ವಿಚ್ನ ಒಟ್ಟು ವೆಚ್ಚ 7.50 ಯೂರೋದಿಂದ 9.50 ಯೂರೋಗೆ ಹೆಚ್ಚಳವಾಗಿದೆ. ಈ ಹಿನ್ನೆಲೆ ಆ ಕೆಫೆ ಮೇಲೆ ಬೇಸತ್ತ ಗ್ರಾಹಕ ಕೇವಲ 1 ಸ್ಟಾರ್ ರೇಟಿಂಗ್ ನೀಡಿದ್ದಾನೆ. ಆದರೂ, ಈ ಕೆಫೆಗೆ ಗ್ರಾಹಕರು ಅಂದಾಜು 4.5 ರೇಟಿಂಗ್ ನೀಡಿದ್ದಾರೆ.
ಈ ಆರೋಪವನ್ನು ಕೆಫೆಯ ಮಾಲೀಕ ಕ್ರಿಸ್ಟಿನಾ ಬಿಯಾಚಿ ಅವರು ಸಮರ್ಥಿಸಿಕೊಂಡಿದ್ದು, ಹೆಚ್ಚುವರಿ ಮನವಿಗೆ ಹೆಚ್ಚು ವೆಚ್ಚ ಉಂಟಾಗುತ್ತದೆ ಎಂದು ವಿವರಿಸಿದ್ದಾರೆ. ಒಂದರ ಬದಲಿಗೆ ಎರಡು ಪ್ಲೇಟ್ಗಳನ್ನು ಬಳಸುವುದು ಮತ್ತು ಅವುಗಳನ್ನು ತೊಳೆಯಲು ಸಮಯ ಮತ್ತು ಶ್ರಮವು ಶುಲ್ಕವನ್ನು ಸಮರ್ಥಿಸುತ್ತದೆ ಎಂದು ಹೇಳಿದ್ದಾರೆ.








