ಬರ್ತ್ ಡೇ ಗಿಫ್ಟ್ ಗಾಗಿ 35 ಯುವತಿಯರ ಜೊತೆ ಏಕಕಾಲಕ್ಕೆ ಡೇಟಿಂಗ್ ಮಾಡ್ತಿದ್ದವ ಅರೆಸ್ಟ್..!

1 min read

ಬರ್ತ್ ಡೇ ಗಿಫ್ಟ್ ಗಾಗಿ 35 ಯುವತಿಯರ ಜೊತೆ ಏಕಕಾಲಕ್ಕೆ ಡೇಟಿಂಗ್ ಮಾಡ್ತಿದ್ದವ ಅರೆಸ್ಟ್..!

ಸಹಜವಾಗಿ ನಮ್ಮ ಬರ್ತ್ ಡೇಗೆ ನಮ್ಮ ಪ್ರೀತಿ ಪಾತ್ರರು ಏನೇನೆಲ್ಲಾ ಗಿಫ್ಟ್ ಕೊಡಬಹುದೆಂಬ ಕ್ಯೂರಿಯಾಸಿಟಿ ನಮಗಿರುತ್ತೆ.. ಅದು ಸಹಜ.. ಇನ್ನೂ ಕೆಲವರು ಗಿಫ್ಟ್ ಗಳನ್ನ ಪಡೆಯಲು ಕೆಲ ಜುಗಾಡ್ ಗಳನ್ನೂ ಮಾಡೋದುಂಟು. ಆದ್ರೆ ಇಲ್ಲೊಬ್ಬ ಭೂಪ ಕೇವಲ ಬರ್ತ್ ಡೇ ಗಿಫ್ಟ್ ಗಳಿಗಾಗಿ ಬರೋಬ್ಬರಿ 35 ಯುವತಿಯರ ಜೊತೆ ಏಕಕಾಲಕ್ಕೆ ಡೇಟಿಂಗ್ ಮಾಡುತ್ತಾ ಸಿಕ್ಕಿಬಿದ್ದಿದ್ದು, ಇದೀಗ ಜೈಲು ಸೇರಿದ್ದಾನೆ. ಇಂತಹ ವಿಚಿತ್ರ ಘಟನೆ ನಡೆದಿರೋದು ಜಪಾನ್ನಲ್ಲಿ.

ಹೌದು… 38 ವರ್ಷದ ಈ ವ್ಯಕ್ತಿ ವರ್ಷಪೂರ್ತಿ ಬರ್ತ್ ಡೇ ಗಿಫ್ಟ್ ಪಡೆಯುವುದಕ್ಕೋಸ್ಕ ಈ ವ್ಯಕ್ತಿ ಇಂಥ ಐಡಿಯಾ ಮಾಡಿದ್ದ..35 ಜನರ ಬಳಿಯೂ ತನ್ನ ಹುಟ್ಟಿದ ದಿನಾಂಕವನ್ನು ಬೇರೆಬೇರೆಯಾಗಿ ಹೇಳಿಕೊಂಡಿದ್ದ ಈ ಮಹಿಳೆಯರನ್ನು ವಂಚಿಸಿದ್ದ. 35 ಮಹಿಳೆಯರೊಂದಿಗೆ ಡೇಟಿಂಗ್ ಮಾಡುತ್ತಿದ್ದ ಈತ, ಪ್ರತಿಯೊಬ್ಬರ ಬಳಿಯೂ, ನಾನು ನಿನ್ನನ್ನು ತುಂಬ ಇಷ್ಟಪಡುತ್ತೇನೆ ಎಂದೇ ಹೇಳಿಕೊಂಡಿದ್ದ.

ವರ್ಷಪೂರ್ತಿ ಒಬ್ಬರಲ್ಲ ಒಬ್ಬರಿಂದ ಬೆಲೆಬಾಳುವ ಉಡುಗೋರೆ ಪಡೆಯುವ ಸಲುವಾಗಿ 35 ಯುವತಿಯರ ಬಳಿಯೂ ತನ್ನ ಹುಟ್ಟಿದ ದಿನಾಂಕವನ್ನು ಬೇರೆಬೇರೆಯಾಗಿಯೇ ಹೇಳಿಕೊಂಡಿದ್ದ. ಈತನ ನಿಜವಾದ ಹುಟ್ಟುಹಬ್ಬ ನವೆಂಬರ್ 13ರಂದು ಆದರೂ, ವರ್ಷದ ಎಲ್ಲ ತಿಂಗಳಲ್ಲೂ ಹೊಂದಿಸಿ ಬರ್ತ್ ಡೇಟ್ ಸೃಷ್ಟಿ ಮಾಡಿಕೊಂಡಿದ್ದರಿಂದ ತಿಂಗಳಲ್ಲಿ ಮೂರರಂತೆ ವರ್ಷಕ್ಕೆ 35 ಗಿಫ್ಟ್ ಪಕ್ಕಾ ಆಗಿತ್ತು. ಹಾಗೇ, ಆತನ ಗರ್ಲ್ಫ್ರೆಂಡ್ಸ್ ಅವನಿಗಾಗಿ ಕೇಕ್ ಕತ್ತರಿಸಿ ಸಂಭ್ರಮಿಸುತ್ತಿದ್ದರು.

ಈ ವ್ಯಕ್ತಿಯ ಟಾರ್ಗೆಟ್ ಕೇವಲ ಶ್ರೀಮಂತ ಮನೆಯ ಯುವತಿಯರೇ.. ಎಲ್ಲರ ಬಳಿ ನಾನು ನಿನ್ನನ್ನೇ ಮದುವೆಯಾಗ್ತೆನೆಂದು ಕಲರ್ ಕಲರ್ ಕಾಗೆ ಹಾರಿಸಿ ಗಿಫ್ಟ್ ಗಳನ್ನ ದೋಚಿದ್ದಾನೆ. ಆದ್ರೆ ಈತನ ಅಸಲಿಯತ್ತು ಗೊತ್ತಾಗಿ ಯುವತಿಯರೆಲ್ಲಾ ಒಟ್ಟಾಗಿ ಸೇರಿ ಈತನಿಗೆ ತಕ್ಕ ಪಾಠ ಕಲಿಸಿದ್ದಾರೆ. ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ಆರೋಪಿಯನ್ನ ಬಂಧಿಸಿ ಜೈಲಿಗಟ್ಟಿದ್ದಾರೆ.

BIGGBOSS 8 – 9ನೇ ವಾರದ ಕ್ಯಾಪ್ಟನ್ ಆದ ರಘು ಗೌಡಗೆ ಬಿಗ್ ಬಾಸ್ ನಿಮದ ಬಂಪರ್ ಸಪ್ರೈಸ್..!

ನೀವು ಯೋಚನೆ ಮಾಡುತ್ತಿರಬಹುದು ಮಾಟಮಂತ್ರ ನಿಜವೇ.ಇದರಿಂದ ನಮ್ಮ ಜೀವನದ ಮೇಲೆ ಪ್ರಭಾವ ಅದು ಹೇಗೆ ಬೀರುತ್ತದೆ ಎಂದು ಗೊತ್ತಾ ?

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd