ಬಿಜೆಪಿ ಎಂಎಲ್ಎಗಳು ಸಿಂಹ ಇದ್ದ ಹಾಗೆ : ಕೆ.ಎಸ್.ಈಶ್ವರಪ್ಪ
ಕಲಬುರಗಿ : 40 ಅಲ್ಲ, ನಾಲ್ಕು ಜನ ಶಾಸಕರನ್ನು ಕಾಂಗ್ರೆಸ್ ಪಕ್ಷ ಸೆಳೆಯಲಿ ನೋಡೋಣ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಸವಾಲ್ ಹಾಕಿದ್ದಾರೆ.
40 ಬಿಜೆಪಿ ಶಾಸಕರು ಕಾಂಗ್ರೆಸ್ ಗೆ ಸೇರಲಿದ್ದಾರೆ ಎಂಬ ಮಾಜಿ ಶಾಸಕ ರಾಜೂ ಕಾಗೆ ಹೇಳಿಕೆಗೆ ಕಲಬುರಗಿಯಲ್ಲಿ ಕೆ.ಎಸ್.ಈಶ್ವರಪ್ಪ ಪ್ರತಿಕ್ರಿಯೆ ನೀಡಿದ್ದಾರೆ.
ಬಿಜೆಪಿ ಎಂಎಲ್ಎಗಳು ಸಿಂಹ ಇದ್ದ ಹಾಗೇ, ನಮ್ಮ ಶಾಸಕರು ಮಾರಾಟದ ವಸ್ತುಗಳಲ್ಲ. ಬಿಜೆಪಿಯ ಶಾಸಕರು ಕಾಂಗ್ರೆಸ್ ಪಕ್ಷಕ್ಕೆ ಹೋಗುವ ಮಾತೇ ಇಲ್ಲ.
ಇಡೀ ದೇಶದಲ್ಲಿ ಕಾಂಗ್ರೆಸ್ ಪಕ್ಷ ಪೀಸ್, ಪೀಸ್ ಆಗುತ್ತದೆ. ಕಾಂಗ್ರೆಸ್ ಪಕ್ಷ ಮೊದಲು ತನ್ನ ಅಸ್ತಿತ್ವ ಉಳಿಸಿಕೊಳ್ಳುವ ಕೆಲಸ ಮಾಡಲಿ ಎಂದು ಈಶ್ವರಪ್ಪ ವ್ಯಂಗ್ಯವಾಡಿದರು.
ಇನ್ನು ಡಿ.ಕೆ.ಶಿವಕುಮಾರ್ ಅವರನ್ನು ಯಾವ ಹುಚ್ಚ ಆಸ್ಪತ್ರೆಗೆ ಸೇರಿಸಬೇಕು ಎಂದು ಕಿಡಿಕಾರಿದ ಈಶ್ವರಪ್ಪ, ನಲವತ್ತು ಜನ ಶಾಸಕರು ಬಿಜೆಪಿಯಿಂದ ಕಾಂಗ್ರೆಸ್ ಗೆ ಬರುತ್ತಾರೆ ಅಂತ ಹೇಳುತ್ತಾರೆ.
ನಾಲ್ಕು ಜನ ಶಾಸಕರು ಕೂಡಾ ಹೋಗುವುದಿಲ್ಲ. ಸಾಯುವ ಪಾರ್ಟಿಗೆ ಯಾರು ಹೋಗುತ್ತಾರೆ ಎಂದು ಟಾಂಗ್ ನೀಡದರು.









