ದೆಹಲಿ: ಒಡಿಶಾ ರಾಜ್ಯದಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆ ಹಾಗೂ ಲೋಕಸಭೆ ಚುನಾವಯಣೆಗೆ ಬಿಜೆಡಿಯೊಂದಿಗೆ ಹೊಂದಾಣಿಕೆ ಮಾಡಿಕೊಂಡಿಲ್ಲ ಎಂದು ಬಿಜೆಪಿ ಹೇಳಿದೆ.
ಹೀಗಾಗಿ ನವೀನ್ ಪಟ್ನಾಯಕ್ ಅವರೊಂದಿಗೆ ಮೈತ್ರಿ ಮಾಡಿಕೊಳ್ಳದೆ ಏಕಾಂಗಿಯಾಗಿ ಸ್ಪರ್ಧಿಸುವುದಾಗಿ ಬಿಜೆಪಿ ಹೇಳಿದೆ. ಈ ಕುರಿತು ಬಿಜೆಪಿ ಒಡಿಶಾ ಅಧ್ಯಕ್ಷ ಮನಮೋಹನ್ ಸಮಲ್, ಬಿಜೆಪಿ-ಬಿಜೆಡಿ ಮೈತ್ರಿ ಇಲ್ಲ ಎಂದು ಎಕ್ಸ್ ಮೂಲಕ ಬರೆದುಕೊಂಡಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡ ಈ ಕುರಿತು ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಕೂಡ ಹೇಳಿದ್ದಾರೆ.
ಕಳೆದ 10 ವರ್ಷಗಳಿಂದ, ಒಡಿಶಾದ ಬಿಜು ಜನತಾ ದಳ (ಬಿಜೆಡಿ) ಪಕ್ಷವು ನವೀನ್ ಪಟ್ನಾಯಕ್ ನೇತೃತ್ವದಲ್ಲಿ ಕೇಂದ್ರದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸರ್ಕಾರವನ್ನು ರಾಷ್ಟ್ರೀಯ ಮಹತ್ವದ ಅನೇಕ ವಿಷಯಗಳಲ್ಲಿ ಬೆಂಬಲಿಸುತ್ತಿದೆ, ಇದಕ್ಕಾಗಿ ನಾವು ಅವರಿಗೆ ನಮ್ಮ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇವೆ. ದೇಶಾದ್ಯಂತ ಎಲ್ಲೆಲ್ಲಿ ಡಬಲ್ ಇಂಜಿನ್ ಸರ್ಕಾರವಿದೆಯೋ ಅಲ್ಲೆಲ್ಲಾ ಅಭಿವೃದ್ಧಿ ಮತ್ತು ಕಲ್ಯಾಣ ಕಾರ್ಯಗಳು ಆಗಿವೆ. ಆದರೆ ಇಂದು, ಮೋದಿ ಸರ್ಕಾರದ ಅನೇಕ ಕಲ್ಯಾಣ ಯೋಜನೆಗಳು ಒಡಿಶಾದಲ್ಲಿ ಜನರನ್ನು ತಲುಪುತ್ತಿಲ್ಲ, ಇದರಿಂದಾಗಿ ಒಡಿಶಾದ ಬಡ ಸಹೋದರಿಯರು ಮತ್ತು ಸಹೋದರರಿಗೆ ಅದರ ಪ್ರಯೋಜನಗಳು ಸಿಗುತ್ತಿಲ್ಲ. ಒಡಿಶಾ-ಗುರುತಿಸುವಿಕೆ, ಒಡಿಶಾ-ಹೆಮ್ಮೆ ಮತ್ತು ಒಡಿಶಾದ ಜನರ ಹಿತಾಸಕ್ತಿಗೆ ಸಂಬಂಧಿಸಿದ ಹಲವು ವಿಷಯಗಳ ಬಗ್ಗೆ ನಮಗೆ ಕಳವಳವಿದೆ ಎಂದು ಅಲ್ಲಿನ ಮೈತ್ರಿ ಹೇಳಿದೆ.
ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರ ಆಪ್ತ ವಿಕೆ ಪಾಂಡಿಯನ್ ಇತ್ತೀಚೆಗೆ ಬಿಜೆಪಿ ಮತ್ತು ಬಿಜೆಡಿ ನಡುವಿನ ಮಾತುಕತೆ ರಾಜಕೀಯ ಮೀರಿದ್ದು ಎಂದು ಹೇಳಿಕೆ ನೀಡಿದ್ದರು. ಹೀಗಾಗಿ ಮೈತ್ರಿ ಆಗಬಹುದು ಎಂದು ಎಲ್ಲರೂ ಭಾವಾಸಿದ್ದರು. 1998 ರಿಂದ 2009 ರವರೆಗೆ 10 ವರ್ಷಗಳ ಕಾಲ ಮೈತ್ರಿ ಮಾಡಿಕೊಂಡ ನಂತರ ಬಿಜೆಪಿ ಮತ್ತು ಬಿಜೆಡಿ 2009 ರಲ್ಲಿ ಬೇರ್ಪಟ್ಟಿದ್ದವು. ಈಗ ಮತ್ತೆ ಒಂದಾಗಲಿವೆ ಎನ್ನಲಾಗಿತ್ತಾದರೂ ಬೇರೆಯಾಗಿವೆ.