ವಿಜಯ್ ಪ್ರಕಾಶ್ – ಆಶಾ ಭಟ್ ಧ್ವನಿಯಾಗಿರುವ ‘ಬ್ಲಾಂಕ್’ ಹಾಡು ಡಿ.15ಕ್ಕೆ ರಿಲೀಸ್
ಫೆಲಿಸಿಟಿ ಫಿಲಂಸ್ ಲಾಂಛನದಲ್ಲಿ ಎನ್ ಪಿ ಮಂಜುನಾಥ್ ಪ್ರಸನ್ನ ಅವರು ನಿರ್ಮಿಸಿರುವ ‘ಬ್ಲಾಂಕ್’ ಸಿನಿಮಾದಲ್ಲಿ , ವಿಜಯ್ ಪ್ರಕಾಶ್ – ಆಶಾ ಭಟ್ ಧ್ವನಿಯಾಗಿರುವ ಹಾಡು ಡಿಸೆಂಬರ್ 15ರಂದು A2 MUSIC ಮ್ಯೂಸಿಕ್ ಚಾನೆಲ್ ನಲ್ಲಿ ರಿಲೀಸ್ ಆಗಲಿದೆ..
ಚಿತ್ರಕ್ಕಾಗಿ ಖ್ಯಾತ ಗಾಯಕ ವಿಜಯ್ ಪ್ರಕಾಶ್ ಹಾಗೂ ಸರಿಗಮಪ ಖ್ಯಾತಿಯ ಆಶಾ ಭಟ್ ಹಾಡಿರುವ ಈ ಹಾಡು ಬಿಡುಗಡೆಯಾಗಲಿದ್ದು ಎಲ್ಲರ ಗಮನ ಸೆಳೆಯಲಿದೆ. ಶ್ರೀ ಶಾಸ್ತ ಸಂಗೀತ ನೀಡಿದ್ದಾರೆ.
‘ತಲೈವಾ’ ಹುಟ್ಟುಹಬ್ಬ : ಮಿಸ್ ಮಾಡದೇ ನೋಡ್ಲೇ ಬೇಕಾದ ರಜನಿ ಸಿನಿಮಾಗಳು..!
ಎಸ್ ಜಯ್ ನಿರ್ದೇಶಿಸಿರುವ ಈ ಚಿತ್ರ ಸದ್ಯದಲ್ಲೇ ಬಿಡುಗಡೆಯಾಗಲಿದೆ. ಸೈಕಲಾಜಿಕಲ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ನಿರ್ದೇಶಕರೆ ಕಥೆ, ಚಿತ್ರಕಥೆ ಬರೆದಿದ್ದಾರೆ.
“ನಮ್ ನಾಣಿ ಮದ್ವೆ ಪ್ರಸಂಗ”ಕ್ಕೆ ಶುಭಕೋರಿದ ಎಸ್ ಟಿ. ಸೋಮಶೇಖರ್
ಎಸ್ ಜಯ್, ಅಂಬರೀಶ್ ಪತ್ತಾರ್ ಹಾಗೂ ಶ್ರೀಕಾಂತ್ ಆಂಜಲ್ ಸಂಭಾಷಣೆ ಬರೆದಿದ್ದಾರೆ. ಜೆ.ಪಿ.ಮ್ಯಾನ್ ಛಾಯಾಗ್ರಹಣ, ಶ್ರೀಶಾಸ್ತ ಸಂಗೀತ ನಿರ್ದೇಶನ, ಅಶೋಕ್ ಸಾಹಸ ನಿರ್ದೇಶನ ಹಾಗೂ ವಿಜಯ್ ಅವರ ನೃತ್ಯ ನಿರ್ದೇಶನ ‘ಬ್ಲಾಂಕ್’ ಚಿತ್ರಕ್ಕಿದೆ. ಪೂರ್ಣಚಂದ್ರ ಮೈಸೂರು, ಕೃಷಿ ತಾಪಂಡ, ಪ್ರಶಾಂತ್ ಸಿದ್ದಿ, ಸುಚೇಂದ್ರ ಪ್ರಸಾದ್, ಭರತ್ ಹಾಸನ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.