‘ಬೀಸ್ಟ್’ ಚಿತ್ರೀಕರಣ ಮುಗಿಸಿ ವಿಶೇಷ ಫೋಟೋ ಶೇರ್ ಮಾಡಿದ ಸಿನಿಮಾತಂಡ
ಚೆನ್ನೈ : ಕಾಲಿವುಡ್ ನ ಸೂಪರ್ ಸ್ಟಾರ್ ದಳಪತಿ ವಿಜಯ್ ಮತ್ತು ಪೂಜಾ ಹೆಗ್ಡೆ ನಟನೆಯ ಬಹುನಿರೀಕ್ಷಿತ ಸಿನಿಮಾದ ‘ಬೀಸ್ಟ್’ ನ ಸಿನಿಮಾದ ಶೂಟಿಂಗ್ ಮುಗಿದಿದ್ದು ಸಿನಿಮಾ ತಂಡ ಶೂಟಿಂಗ್ ನ ಕೊನೆಯ ದಿನದ ಫೋಟೋವನ್ನ ಶೇರ್ ಮಾಡಿ ಅಭಿಮಾನಿಗಳಿಗೆ ಖುಷಿ ನೀಡಿದೆ.. ನಿರ್ದೇಶಕ ನೆಲ್ಸನ್ ದಿಲೀಪ್‍ಕುಮಾರ್ ಹಾಗೂ ವಿಜಯ್ ಪರಸ್ಪರ ಅಪ್ಪಿಕೊಂಡಿರುವ ಫೋಟೋ ಇದಾಗಿದೆ.. ವಿಜಯ್ ನಟನೆಯ ‘Beast’ ಸಿನಿಮಾದ ಕೊನೆಯ ದಿನದ ಶೂಟಿಂಗ್ ನಿನ್ನೆ ಚೆನ್ನೈನ ಗೋಕುಲಂ ಸ್ಟುಡಿಯೋದಲ್ಲಿ ನಡೆದಿದೆ.
ಈ ವೇಳೆ ಫುಲ್ ಖುಷ್ ಆದ ದಳಪತಿ ಮತ್ತು ನಿರ್ದೇಶಕ ನೆಲ್ಸನ್ ದಿಲೀಪ್‍ಕುಮಾರ್ ಅಪ್ಪಿಕೊಂಡಿದ್ದಾರೆ. ಈ ಫೋಟೋ ಕ್ಯಾಮೆರಾ ಕಣ್ಣಿಗೆ ಸಿಕ್ಕಿದ್ದು, ನಿರ್ಮಾಣ ಸಂಸ್ಥೆಯಾದ ಸನ್ ಪಿಕ್ಚರ್ಸ್ ಆ ಫೋಟೋವನ್ನು ಟ್ವಟ್ಟರ್ ನಲ್ಲಿ ಹಂಚಿಕೊಂಡಿದೆ. ಬೀಸ್ಟ್ ಶೂಟಿಂಗ್‍ನ ಕೊನೆಯ ದಿನದಂದು ಗೋಕುಲಂ ಸ್ಟುಡಿಯೋದಲ್ಲಿ ಪೆಪ್ಪಿ ಹಾಡನ್ನು ಚಿತ್ರೀಕರಿಸಲಾಯಿತು. ಈ ವೇಳೆ ನೆಲ್ಸನ್ ದಿಲೀಪ್‍ಕುಮಾರ್ ಅವರನ್ನು ವಿಜಯ್ ಅಪ್ಪಿಕೊಂಡಿದ್ದಾರೆ. ಆ ಫೋಟೋವನ್ನು ಸನ್ ಪಿಕ್ಚರ್ಸ್ ಟ್ವಿಟ್ಟರ್ ನಲ್ಲಿ, ಕೊನೆಯ ದಿನದ ಚಿತ್ರೀಕರಣದ ವಿಶೇಷ ಕ್ಷಣ ಇಲ್ಲಿದೆ ಎಂದು ಬರೆದು ಟ್ವೀಟ್ ಮಾಡಿದೆ. ಈ ಫೋಟೋಗೆ ವಿಜಯ್ ಮತ್ತು ದಿಲೀಪ್‍ಕುಮಾರ್ ಅವರನ್ನು ಟ್ಯಾಗ್ ಮಾಡಿದೆ.
ಇತ್ತೀಚೆಗೆ ಅಂದ್ರೆ ಡಿಸೆಂಬರ್ 10 ರಂದು ಪೂಜಾ ಹೆಗ್ಡೆ ತಮ್ಮ ಬಾಗದ ಶೂಟಿಂಗ್ ಮುಗಿಸಿದ್ದರು.. ನಂತರ ಸಿನಿಮಾದ ಸೆಟ್ ನಲ್ಲಿನ ಅನುಭವನ್ನು ಹಂಚಿಕೊಂಡ ವೀಡಿಯೋವನ್ನು ಸನ್ ಪಿಕ್ಚರ್ಸ್ ಟ್ವಿಟ್ಟರ್ ಹಂಚಿಕೊಂಡಿತ್ತು. ಬೀಸ್ಟ್ ಸಿನಿಮಾದಲ್ಲಿ ಕೆಲಸ ಮಾಡಿದ್ದು, ತುಂಬಾ ಸಂತೋಷವಾಗುತ್ತಿದೆ. ಸೆಟ್‍ನಲ್ಲಿಯೂ ಸಖತ್ ಖುಷಿ ಇತ್ತು. ಈ ಸಿನಿಮಾ ಚಿತ್ರೀಕರಣದ ಸಮಯದಲ್ಲಿ ತುಂಬಾ ನಕ್ಕಿದ್ದೇವೆ. ಈ ಸಿನಿಮಾ ನೋಡಿ ನೀವು ಕೂಡ ತುಂಬಾ ನಗುತ್ತೀರಿ ಎಂದು ನಾನು ಭಾವಿಸುತ್ತೇನೆ. ಸಿನಿಮಾದ ಕಥೆ ವಿಶಿಷ್ಟವಾಗಿ ಮೂಡಿಬಂದಿದೆ. ಚಿತ್ರದ ಶೂಟಿಂಗ್ ಸಮಯ ನನಗೆ ರಜೆಗೆ ಬಂದಿದ್ದೇನೆ ಅನಿಸುತ್ತಿತ್ತು. ಇವತ್ತು ಈ ಸಿನಿಮಾದ ಚಿತ್ರೀಕರಣದಲ್ಲಿ ನನ್ನ ಕೊನೆಯ ದಿನವಾಗಿದೆ. ನನಗೆ ತುಂಬಾ ದುಃಖವಾಗುತ್ತಿದೆ. ಈ ಸಿನಿಮಾ ಅದಷ್ಟು ಬೇಗ ನಿಮ್ಮ ಮುಂದೆ ಬರುತ್ತೆ. ಚಿತ್ರಮಂದಿರಗಳಲ್ಲಿ ಸಿನಿಮಾವನ್ನು ನೋಡಿ ಎಂದು ಹೇಳಿದ್ದರು ಕನ್ನಡದ ಚೆಲುವೆ ಪೂಜಾ ಹೆಗ್ಡೆ.
https://twitter.com/i/status/1469187959702228993
ಸಿನಿಮಾ 2022ರಲ್ಲಿ ಥಿಯೇಟರ್ ಗಳಲ್ಲಿ ರಿಲೀಸ್ ಆಗಲಿದ್ದು, ದಳಪತಿ ಫ್ಯಾನ್ಸ್ ಕಾತರದಿಂದ ಸಿನಿಮಾ ರಿಲೀಸ್ ಗಾಗಿ ಕಾಯುತ್ತಿದ್ದಾರೆ..








