ಬಾಲಿವುಡ್ ನ ಬಾದ್ ಷಾ ಶಾರುಖ್ ಖಾನ್ ಎರಡು ವರ್ಷ ಸಿನಿಮಾದಿಂದ ಬ್ರೇಕ್ ಪಡೆದುಕೊಂಡಿದ್ದರು. ಇದರಿಂದ ಬೇಸರಗೊಂಡಿದ್ದ ಶಾರೂಕ್ ಖಾನ್ ಅಭಿಮಾನಿಗಳಿಗೆ ಇದೀಗ ಗುಡ್ ನ್ಯೂಸ್ ಸಿಕ್ಕಿದೆ. 2018ರಲ್ಲಿ ಕೊನೆಯದಾಗಿ ಶಾರುಖ್ ಖಾನ್ ‘ಜೀರೋ’ ಸಿನಿಮಾದಲ್ಲಿ ಕಾಣಿಸಿಕೊಮಡಿದ್ರು. ಆದ್ರೆ ಈ ಚಿತ್ರ ಹೀನಾಯ ಸೋಲು ಅನುಭವಿಸುವಂತಾಗಿತ್ತು. ಇದಾದ ಬಳಿಕ ಶಾರೂಕ್ ಸಿನೆಮಾಗಳಿಂದ ಬಿಡುವು ಪಡೆದುಕೊಂಡಿದ್ದರು.
ಇದೀಗ ಹೊಸ ಸಿನಿಮಾವೊಂದರಲ್ಲಿ ಶಾರುಖ್ ಖಾನ್ ನಟಿಸುತ್ತಿದ್ದು, ಯಶ್ ರಾಜ್ ಫಿಲಮ್ಸ್ ನಿಂದ ನಿರ್ಮಾಣ ಮಾಡಲಾಗ್ತಾಯಿದೆ. ಅಲ್ಲದೇ ಟೈಟಲ್ ಕೂಡ ಫಿಕ್ಸ್ ಆಗಿದ್ದು, ಚಿತ್ರಕ್ಕೆ ‘ಪಠಾಣ್’ ಎಂದು ಹೆಸರಿಡಲಾಗಿದೆ.
‘ಪಠಾಣ್’ ಗೆ ಸಿದ್ಧಾರ್ಥ್ ಆನಂದ್ ಅವರು ಆಕ್ಷನ್ ಕಟ್ ಹೇಳುತ್ತಿದ್ದು, ಸಿನಿಮಾದಲ್ಲಿ ನಟ ಜಾನ್ ಅಬ್ರಹಂ ಖಳನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ. 2021 ರ ಅಂತ್ಯಕ್ಕೆ ಚಿತ್ರ ಬಿಡುಗಡೆ ಆಗುವ ನಿರೀಕ್ಷೆ ಇದೆ. ಇದೀಗ ತಮ್ಮ ನೆಚ್ಚಿನ ನಾಯಕನನ್ನು ಮತ್ತೆ ತೆರೆ ಮೇಲೆ ಕಾಣುವ ಅಭಿಮಾನಿಗಳ ಆಸೆ ಈಡೇರಿದೆ.