Bollywood actor sonu sood
ಸೋನು ಸೂದ್ ಗೆ ಹಣದ ಮೇಲೆ ಅತಿಯಾಸಯಿತ್ತು – ನಿರ್ಮಾಪಕ ತಮ್ಮಾರೆಡ್ಡಿ
ಮುಂಬೈ : ಕಳೆದ ವರ್ಷ ಕೋವಿಡ್ ಅಲೆ ಲಾಕ್ ಡೌನ್ ನಂತರ ಶುರುವಾದ ಸೋನು ಸೂದ್ ಮಾನವೀಯತಾ, ಸಮಾಜಮುಖಿ ಕೆಲಸಗಳು ಈವರೆಗೂ ನಿಂತಿಲ್ಲ. ಕಷ್ಟ ಅಂತ ಬಂದೋರಿಗೆ ಕೈಲಾದ ಸಸಹಾಯ ಮಾಡದೇ ಬಿಡಲ್ಲ. ಬಡವ ಶ್ರೀಮಂತ ಅಂತ ನೋಡದೇ , ಜಾಗ ಯಾವುದೇ ಇರಲಿ , ಜನ ಯಾರೇ ಇರಲಿ ಕಷ್ಟಕ್ಕೆ ನೆರವಾಗಿ ಬಡವರ ಪಾಲಿನ ದೇವಾರಾಗಿದ್ದಾರೆ ರಿಯಲ್ ಹೀರೋ ಸೋನು ಸೂದ್..
ಬೆಡ್ ಕೊಡಿಸುವುದು , ಆಕ್ಸಿಜನ್ ಪೂರೈಕೆ, ವಿದ್ಯಾರ್ಥಿಗಳಿಗೆ ನೆರವಾಗುದು , ಆಹಾರ ಪೂರೈಕೆ ಹೀಗೆ ಅನೇಕರಿಗೆ ತಮ್ಮ ಫೌಂಡೇಶನ್ ಮೂಲಕ ಸಹಾಯ ಮಾಡ್ತಿರುವ ಸೋನು ಅಪಾರ ಅಭಿಮಾನಿಗಳನ್ನ ಸಂಪಾದನೆ ಮಾಡಿದ್ದಾರೆ.. ಅಭಿಮಾನಿಗಳು ಸಹೃದಯಿ ಸೋನು ಅವರನ್ನ ಆರಾಧಿಸುತ್ತಿದ್ದಾರೆ.
ಈ ನಡುವೆ ತೆಲುಗಿನ ನಿರ್ಮಾಪಕರೊಬ್ಬರು ಸೋನು ಸೂದ್ ಅವರ ವರ್ಚಸ್ಸಿಗೆ ತದ್ವಿರುದ್ಧವಾದ ಹೇಳಿಕೆಯೊಂದನ್ನ ನೀಡಿದ್ದಾರೆ.. ತೆಲುಗಿನ ಸಿನಿಮಾನಿರ್ಮಾಪಕ ತಮ್ಮಾರೆಡ್ಡಿ ಭಾರಧ್ವಜ ಸೋನು ಸೂದ್ ಗೆ ‘ಕೆಲವು ವರ್ಷಗಳ ಹಿಂದೆ ಅತಿಯಾದ ಹಣದ ಆಸೆಯಿತ್ತು ಎಂದಿದ್ದಾರೆ. ಇದಕ್ಕೆ ಒಂದು ಉದಾಹರಣೆಯನ್ನೂ ಕೊಟ್ಟಿದ್ದಾರೆ.
ಕೆಲವು ವರ್ಷಗಳ ಹಿಂದೆ ಅಂಗವಿಕಲರಿಗಾಗಿ ನಾನು ಕಾರ್ಯಕ್ರಮವೊಂದನ್ನು ಏರ್ಪಡಿಸಿದ್ದೆ. ಆ ಕಾರ್ಯಕ್ರಮಕ್ಕೆ ಸೋನು ಸೂದ್ ಅತಿಥಿಯಾಗಿ ಬರಬೇಕೆಂಬ ಆಸೆಯಿಂದ ಅವರನ್ನು ಆಹ್ವಾನಿಸಿದೆ. ಆದರೆ ‘ಹಣ ಕೊಟ್ಟರೆ ಮಾತ್ರ ನಾನು ಕಾರ್ಯಕ್ರಮಕ್ಕೆ ಬರುತ್ತೇನೆ’ ಎಂದಿದ್ದರು. ಈತನೊಬ್ಬ ಮನಿ ಮೈಂಡೆಂಡ್ ಮನುಷ್ಯ ಎಂದು ತಿಳಿದುಕೊಂಡಿದ್ದೆ’ ಎಂದಿದ್ದಾರೆ.
ಆದರೆ ಈಗ ಸೋನು ಸೂದ್ ಮಾಡುತ್ತಿರುವ ಸಮಾಜ ಸೇವೆ ನೋಡಿ ಅಭಿಪ್ರಾಯ ಬದಲಿಸಿಕೊಂಡಿದ್ದೇನೆ ಎಂದಿದ್ದಾರೆ. ‘ತಮ್ಮ ಆಸ್ತಿಯನ್ನು ಗಿರವಿ ಇಟ್ಟು ಹಣ ಪಡೆದು ಅದರಿಂದ ಜನರಿಗೆ ಸಹಾಯ ಮಾಡುತ್ತಿದ್ದಾರೆ ಸೋನು ಸೂದ್. ಹಲವರಿಗೆ ಸೋನು ಸೂದ್ ದೇವರೇ ಆಗಿದ್ದಾರೆ’ ಎಂದಿದ್ದಾರೆ.
ಅಂದ್ಹಾಗೆ ಸೋನು ಬಹುಭಾಷಾ ನಟ , ಕನ್ನಡ , ಹಿಂದಿ ತೆಲುಗು ಸಿನಿಮಾಗಳಲ್ಲಿ ಹೆಚ್ಚು ಸಕ್ರಿಯರಾಗಿದ್ದಾರೆ. ಅದ್ರಲ್ಲೂ ತೆಲುಗಿನಲ್ಲಿ ಹೆಚ್ಚು ಸಿನಿಮಾಗಳನ್ನ ಮಾಡಿದ್ದಾರೆ.. ರೀಲ್ ನಲ್ಲಿ ಪರದೆ ಮೇಲೆ ಹೆಚ್ಚು ವಿಲ್ಲನ್ ರೋಲ್ ಗಳಲ್ಲೇ ಕಾಣಿಸಿಕೊಳ್ಳುವ ಸೋನು ಆನ್ ಸ್ಕ್ರೀನ್ ಮೇಲೆ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸುತ್ತಾರೆ. ರೀಲ್ ನಲ್ಲಿ ವಿಲ್ಲನೇ ಆದ್ರು ರಿಯಲ್ ಲೈಫ್ ನ ರಿಯಲ್ ಹೀರೋ ಸೋನು ಸೂದ್.
ಕೊರೊನ ಮಹಾಮಾರಿ:
ಕೊರೊನ ವೈರಸ್ ಹರಡಲು ಬೇಕಾಗಿರುವುದು ನಮ್ಮ ಸಹಾಯ ಆದರೆ ಹರಡದಂತೆ ಮಾಡಬೇಕಾಗಿರುದು ನಮ್ಮ ಸಹಕಾರ”.
ತಪ್ಪದೇ ಹೊರಗೆ ಹೋದಾಗ ಸ್ವಚ್ಛವಾದ ಮಾಸ್ಕ ಧರಿಸಿ.
ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ .
ಜನ ನಿಬಿಡ ಪ್ರದೇಶದಿಂದ ದೂರವಿರಿ.
ಮನೆ ಸಮೀಪದ ಅಂಗಡಿಯಲ್ಲಿ ಫೋನ್ ಮೂಲಕ ತಮಗೆ ಬೇಕಾದ ದಿನಸಿ ಮತ್ತು ಇತರ ವಸ್ತುಗಳನ್ನು ಪಟ್ಟಿ ಮಾಡಿ ನಿರ್ದಿಷ್ಟ ಸಮಯ ಗೊತ್ತು ಮಾಡಿ.
ನಿಮ್ಮ ಮನೆಗೆ ನೀವೇ ಲಕ್ಷ್ಮಣ ರೇಖೆ ಸೃಷ್ಟಿ ಮಾಡಿ.
ಅನಗತ್ಯ ಓಡಾಟ ಸಲ್ಲದು. ಹೊರಗಡೆ ಹೋಗಿ ಬಂದ ಮೇಲೆ ಬಟ್ಟೆ ಬದಲಾಯಿಸಿ ಸ್ನಾನ ಮಾಡಿ.
ನಮ್ಮ ಹೋರಾಟ ಕೊರೊನ ನಿರ್ಮೂಲನೆಯತ್ತ.
ಇದು ಸಾಕ್ಷ ಟಿವಿಯ ಕಳಕಳಿಯ ವಿನಂತಿ.