ರಾಧಾ ಕೃಷ್ಣ ಅಶ್ಲೀಲ ಪೋಟೋ ಮಾರಾಟ – ಅಮೇಜಾನ್ ವಿರುದ್ಧ ದೂರು ದಾಖಲು…
ಭಗವಾನ್ ಕೃಷ್ಣ ಮತ್ತು ರಾಧೆಯ ‘ಅಶ್ಲೀಲ’ ಚಿತ್ರಗಳನ್ನು ಮಾರಾಟ ಮಾಡಿದ್ದಕ್ಕಾಗಿ ಅಮೇಜಾನ್ ಮತ್ತು ಎಕ್ಸೋಟಿಕ್ ಇಂಡಿಯಾ ಇ ಕಾಮರ್ಸ್ ವೆಬ್ ಸೈಟ್ ವಿರುದ್ಧ ದೂರು ದಾಖಲಾಗಿದೆ. ಬೆಂಗಳೂರಿನಲ್ಲಿ ಹಿಂದೂ ಕಾರ್ಯಕರ್ತರು ದೂರು ದಾಖಲಿಸಿದ ನಂತರ ಇ ಕಾಮರ್ಸ್ ಸೈಟ್ ವಿರುದ್ಧ ಟ್ವಿಟರ್ ನಲ್ಲಿ ಆಕ್ರೋಶ ವ್ಯಕ್ತವಾಗಿದೆ.
ಹಿಂದೂ ಜನಜಾಗೃತಿ ಸಮಿತಿಯ ಸದಸ್ಯರು ಬೆಂಗಳೂರಿನ ಸುಬ್ರಹ್ಮಣ್ಯ ನಗರ ಠಾಣೆಗೆ ಮನವಿ ಸಲ್ಲಿಸಿ ಅಮೆಜಾನ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು. ಕೃಷ್ಣ ಜನ್ಮಾಷ್ಟಮಿ ಹಬ್ಬದ ಎರಡನೇ ದಿನವಾದ ಶುಕ್ರವಾರ ದೂರು ದಾಖಲಿಸಲಾಗಿದೆ.
Press Release
Members of @HinduJagrutiOrg submitted a memorandum to the Police Inspector, Subramanya Nagar Benguluru, requesting action against @amazonIN for selling obscene painting of Lord Krishna with Radha on their website.#Boycott_Amazon #Boycott_ExoticIndia pic.twitter.com/E5ASG6PLSH
— HJS Karnataka (@HJSKarnataka) August 19, 2022
ಹಿಂದೂ ಸಂಘಟನೆಯ ಪ್ರಕಾರ, ಈ ಅಶ್ಲೀಲ ಪೇಂಟಿಂಗ್ ಅನ್ನು ಎಕ್ಸೋಟಿಕ್ ಇಂಡಿಯಾ ತನ್ನ ವೆಬ್‌ಸೈಟ್‌ನಲ್ಲಿ ಜನ್ಮಾಷ್ಟಮಿ ಮಾರಾಟದ ಅಡಿಯಲ್ಲಿ ಸೇಲ್ ಮಾಡುತ್ತಿದೆ. ಈ ಕುರಿತು ಅಮೆಜಾನ್ ಯಾವುದೇ ಹೇಳಿಕೆಯನ್ನು ನೀಡದಿದ್ದರೂ, ಅಮೆಜಾನ್ ಮತ್ತು ಎಕ್ಸೋಟಿಕ್ ಇಂಡಿಯಾ ಎರಡೂ ತಮ್ಮ ವೆಬ್‌ಸೈಟ್‌ಗಳಿಂದ ಪೇಂಟಿಂಗ್ ಅನ್ನು ತೆಗೆದುಹಾಕಿದೆ ಎಂದು ಹಿಂದೂ ಕಾರ್ಯಕರ್ತರು ಹೇಳಿದ್ದಾರೆ. “ಆದರೆ ಇದು ಸಾಕಾಗುವುದಿಲ್ಲ. ಅಮೆಜಾನ್ ಮತ್ತು ಎಕ್ಸೋಟಿಕ್ ಇಂಡಿಯಾ ಎರಡೂ ಬೇಷರತ್ ಕ್ಷಮೆಯಾಚಿಸಬೇಕು ಮತ್ತು ಹಿಂದೂಗಳ ಭಾವನೆಗಳನ್ನು ಎಂದಿಗೂ ನೋಯಿಸುವುದಿಲ್ಲ ಎಂದು ಪ್ರತಿಜ್ಞೆ ಮಾಡಬೇಕು” ಎಂದು ಹಿಂದೂ ಜನ ಜಾಗೃತಿ ಸಂಸ್ಥೆ ಹೇಳಿದೆ.
ಟ್ವಿಟರ್ ಬಳಕೆದಾರರು ‘ಅಶ್ಲೀಲ’ ಪೇಂಟಿಂಗ್‌ಗಳ ಬಗ್ಗೆ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಂತೆ, ‘ಬಾಯಿಕಾಟ್ ಅಮೆಜಾನ್’ ಮತ್ತು ‘ಬಾಯ್ಕಾಟ್ ಎಕ್ಸೋಟಿಕ್ ಇಂಡಿಯಾ’ ಎಂಬ ಹ್ಯಾಶ್‌ಟ್ಯಾಗ್‌ಗಳು ಟ್ವೀಟರ್ ಪ್ಲಾಟ್‌ಫಾರ್ಮ್‌ನಲ್ಲಿ ಟ್ರೆಂಡಿಂಗ್ ಆಗಿವೆ.
ವಿವಾದದ ಬಳಿಕ ಎಕ್ಸೋಟಿಕ್ ಇಂಡಿಯಾ ಕ್ಷಮೆಯಾಚಿಸಿ ಟ್ವೀಟ್ ಮಾಡಿದೆ ಮತ್ತು ‘ಅನುಚಿತ ಚಿತ್ರ’ವನ್ನು ತೆಗೆದುಹಾಕಿರುವುದರಿಂದ ಸೈಟ್ ಅನ್ನು ಬಹಿಷ್ಕರಿಸದಂತೆ ಜನರನ್ನು ವಿನಂತಿಸಿದೆ.








