400 ಕೋಟಿ ಬಂಡವಾಳದ ಚಿತ್ರಕ್ಕೆ ಬಾಯ್ ಕಟ್ ಅಭಿಯಾನದ್ದೇ ಭಯ….
ರಣಬೀರ್-ಆಲಿಯಾ ಅಭಿನಯದ ಬ್ರಹ್ಮಾಸ್ತ್ರ ಚಿತ್ರ ಸೆಪ್ಟೆಂಬರ್ 9 ರಂದು ತೆರೆಗೆ ಬರಲು ಸಿದ್ಧವಾಗಿದೆ. ಆದರೆ, ಬಿಡುಗಡೆಗೂ ಮುನ್ನವೇ ಸಿನಿಮಾವನ್ನು ಬಹಿಷ್ಕರಿಸಬೇಕು ಎಂಬ ಬಾಯ್ಕಟ್ ಅಭಿಯಾನ ಶುರುವಾಗಿದ್ದು ನಿರ್ಮಾಪಕರ ಆತಂಕವನ್ನು ಹೆಚ್ಚಿಸಿದೆ. ಬ್ರಹ್ಮಾಸ್ತ್ರ ನಿರ್ದೇಶಕ ಅಯಾನ್ ಮುಖರ್ಜಿ ಅವರಿಗೆ ಈ ಚಿತ್ರ ತುಂಬಾ ವಿಶೇಷ. ಈ ಚಿತ್ರಕ್ಕಾಗಿ ಸಾಕಷ್ಟು ಹಣ ಮತ್ತು ಸಮಯವನ್ನು ಹೂಡಿಕೆ ಮಾಡಲಾಗಿದ್ದು, ಬಹಿಷ್ಕಾರದ ಟ್ರೆಂಡ್ ಗೆ ಬ್ರಹ್ಮಾಸ್ತ್ರವೂ ಬಲಿಯಾದರೆ ಚಿತ್ರ ಭಾರೀ ನಷ್ಟ ಅನುಭವಿಸಬೇಕಾಗುತ್ತದೆ.
ಬ್ರಹ್ಮಾಸ್ತ್ರ ನಿರ್ಮಾಣಕ್ಕಾಗಿ 410 ಕೋಟಿ ರುಪಾಯಿ ಖರ್ಚು ಮಾಡಲಾಗಿದೆ ಎಂಬ ವರದಿಗಳಿವೆ. ಸದ್ಯದ ಮಟ್ಟಿಗೆ ಬಾಲಿವುಡ್ ಚಿತ್ರಗಳಲ್ಲೇ ಇದು ಅತ್ಯಧಿಕ ಬಜೆಟ್ ನ ಚಿತ್ರ. RRR, ಸಾಹೋ, ಬಾಹುಬಲಿ, 2.0 ಹೊರತುಪಡಿಸಿ, ಇಲ್ಲಿಯವರೆಗಿನ ಅತಿದೊಡ್ಡ ಬಜೆಟ್ ಚಿತ್ರವೆಂದರೆ 2018 ರಲ್ಲಿ ಥಗ್ಸ್ ಆಫ್ ಹಿಂದೂಸ್ತಾನ್,
ಬ್ರಹ್ಮಾಸ್ತ್ರದ ಬಜೆಟ್‌ನಲ್ಲಿ ಪ್ರಮೋಷನ್ ಮತ್ತುಥಿಯೇಟರ್ ವೆಚ್ಚಗಳನ್ನ ಸೇರಿಸಲಾಗಿಲ. ಬ್ರಹ್ಮಾಸ್ತ್ರದಲ್ಲಿ VFX ನದ್ದೇ ಪ್ರಮುಖ ಪಾತ್ರವಿದ್ದ, ವಿಎಫ್‌ಎಕ್ಸ್ ಎಫೆಕ್ಟ್ ಗಳಿಗಾಗಿ ಹೆಚ್ಚಿನ ಬಂಡವಾಳ ಹೂಡಿದ್ದಾರೆ. ಇದರ ಜೊತೆಗೆ ಲೊಕೇಶನ್, ಸ್ಟಾರ್ ಫೀಸ್ ಸೇರಿದಂತೆ ಹಲವು ವಿಷಯಗಳಿಗೆ ಹಣ ಖರ್ಚು ಮಾಡಲಾಗಿದೆ.
8000 ಸ್ಕ್ರೀನ್‌ಗಳಲ್ಲಿ ಬಿಡುಗಡೆ…
ಬ್ರಹ್ಮಾಸ್ತ್ರ ಇದುವರೆಗಿನ ಅತ್ಯಂತ ದುಬಾರಿ ಚಿತ್ರ, ಆದ್ದರಿಂದ ನಿರ್ಮಾಪಕರು ದೊಡ್ಡ ಮಟ್ಟದಲ್ಲಿ ಬಿಡುಗಡೆ ಮಾಡಲು ನಿರ್ಧರಿಸಿದ್ದಾರೆ. ಬಾಲಿವುಡ್ ಹಂಗಾಮಾ ವರದಿಗಳ ಪ್ರಕಾರ ಬ್ರಹ್ಮಾಸ್ತ್ರ ವಿಶ್ವದಾದ್ಯಂತ 8000 ಸ್ಕ್ರೀನ್‌ಗಳಲ್ಲಿ ಬಿಡುಗಡೆಯಾಗಲಿದೆ. ಇದರಲ್ಲಿ 5000 ಭಾರತೀಯ ಪರದೆಗಳು ಮತ್ತು 3000 ಸಾಗರೋತ್ತರ ಸ್ಕ್ರೀನ್‌ಗಳನ್ನು ನಿಗದಿಪಡಿಸಲಾಗಿದೆ.