ಬೆಂಗಳೂರು : ಮಹಿಳೆಯರಿಗೆ ಮಾತ್ರವಲ್ಲದೆ ಪುರುಷರಲ್ಲೂ ಸ್ತನ ಕ್ಯಾನ್ಸರ್ ಕಂಡು ಬರುವ ಸಾಧ್ಯತೆಗಳಿವೆ ಎಂದು ಅಪೋಲೋ ಆಸ್ಪತ್ರೆಯ ಬ್ರೆಸ್ಟ್ ಕ್ಯಾನ್ಸರ್ ಸರ್ಜನ್ ಡಾ.ಜಯಂತಿ ಥುಮ್ಸಿ ಹೇಳಿದ್ದಾರೆ.
ಶನಿವಾರ ಸ್ತನ ಕ್ಯಾನ್ಸರ್ ಜಾಗೃತಿ ಆನ್ ಲೈನ್ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಡಾ.ಜಯಂತಿ ಥುಮ್ಸಿ ಅವರು, ಪುರುಷರೂ ಕೂಡ ಸ್ತನ ಕ್ಯಾನ್ಸರ್ ಗೆ ತುತ್ತಾಗುತ್ತಾರೆ.
ಇದನ್ನೂ ಓದಿ : ಭಾರತಕ್ಕಿಂತ ಪಾಕ್, ನೇಪಾಳದಲ್ಲಿ ಹೆಚ್ಚಿದೆ ಇಂಟರ್ ನೆಟ್ ವೇಗ
ಈ ಕುರಿತು ಜಾಗೃತಿ ಮೂಡಿಸುತ್ತಿರುವುದು ಉತ್ತಮ ಬೆಳೆವಣಿಗೆ. ಸ್ತನ ಕ್ಯಾನ್ಸರ್ ಮಹಿಳೆಯರಿಗೆ ಹೋಲಿಸಿದರೇ ಪುರುಷರಲ್ಲಿ 100.1 ಅನುಪಾತದಲ್ಲಿ ಬಾಧಿಸುತ್ತದೆ.
ಈ ಸಮಸ್ಯೆ ಅನುವಂಶಕವಾಗಿಯೂ ಎದುರಾಗುತ್ತದೆ ಎಂದು ತಿಳಿಸಿದರು. ಅಲ್ಲದೇ ಈ ತೊಂದರೆ ಇದ್ದರೆ ಕೂಡಲೇ ವೈದ್ಯರನ್ನು ಭೇಟಿಯಾಗಿ ತಪಾಸಣೆ ಮಾಡಿಸಬೇಕು ಎಂದು ಸಲಹೆ ನೀಡಿದ್ದಾರೆ.
ಇನ್ನು ಕಾರ್ಯಕ್ರಮದಲ್ಲಿ ಅಪೋಲೋ ಆಸ್ಪತ್ರೆಯ ಮೆಡಿಕಲ್ ಆಂಕಾಲಜಿಸ್ಟ್ ಸಿ.ಎನ್. ಪಾಟೀಲ್ ಮಾತನಾಡಿ, ಅಕ್ಟೋಬರ್ ಸ್ತನ ಕ್ಯಾನ್ಸರ್ ಜಾಗೃತಿ ಮೂಡಿಸುವಂತ ತಿಂಗಳಾಗಿದೆ.
ಎಲ್ಲರೂ ಈ ಕಾಯಿಲೆ ಬಗ್ಗೆ ಅರಿವು ಬೆಳೆಸಿಕೊಳ್ಳಬೇಕು. ಬೇರೆಯವರಿಗೂ ತಿಳಿಹೇಳಬೇಕು ಎಂದು ಹೇಳಿದರು.
ಎಫ್‌ಎಟಿಎಫ್ ಗ್ರೇ ಪಟ್ಟಿಯಲ್ಲೇ ಉಳಿಯಲಿರುವ ಪಾಕಿಸ್ತಾನ
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel