ಮನುಕುಲವೇ ತಲೆತಗ್ಗಿಸುವ ಕೃತ್ಯ – ತಂಗಿ ಮೇಲೆ ಅಣ್ಣನಿಂದಲೇ ಅತ್ಯಾಚಾರ – ಕಾಮುಕನಿಗೇ ಮನೆಯವರ ಬೆಂಬಲ..!

1 min read

ಮನುಕುಲವೇ ತಲೆತಗ್ಗಿಸುವ ಕೃತ್ಯ – ತಂಗಿ ಮೇಲೆ ಅಣ್ಣನಿಂದಲೇ ಅತ್ಯಾಚಾರ – ಕಾಮುಕನಿಗೇ ಮನೆಯವರ ಬೆಂಬಲ..!

ತೆಲಂಗಾಣ : ತಂಗಿ , ಅಕ್ಕನಿಗೆ ಸಮಾಜದಲ್ಲಿ ರಕ್ಷಾಧಾಗವಾಗಿ ಕೆಲಸ ಮಾಡುವುದು ಅಣ್ಣ ತಮ್ಮಂದಿರು. ಆದ್ರೆ ಇಂತಹ ಪವಿತ್ರ ಸಂಬಂಧಕ್ಕೆ ಅಪವಾದವೆಂಬಂತೆ ನೀಚನೋರ್ವ ನಡೆದುಕೊಂಡಿದ್ದಾನೆ. ಸ್ವಂತ ತಂಗಿಯ ಮೇಲೆಯೇ ಪದೇ ಪದೇ ಅತ್ಯಾಚಾರವೆಸಗಿದ್ದಾನೆ. ಆದ್ರೆ ಸಂತ್ರಸ್ತ ಪುತ್ರಿಯ ಪರ ನಿಲ್ಲಬೇಕಿದ್ದ ತಾಯಿ ಮತ್ತು ಅಜ್ಜಿ ತಾತ ಕೂಡ ಇದಕ್ಕೆ ತಲೆಕೆಡಿಸಿಕೊಳ್ದೇ ಆರೋಪಿಯ ಬೆಂಬಲಕ್ಕೆ ನಿಂತಿದ್ದಾರೆ. ಯಾರಿಗಾದ್ರೂ ವಿಚಾರ ತಿಳಿಸಿದ್ರೆ ಪರಿಣಾಮ ನೆಟ್ಟಗಿರೋದಿಲ್ಲ ಎಂದು ಧಮ್ಕಿ ಹಾಕಿದ್ದಾರೆ. ಅಷ್ಟೇ ಅಲ್ಲ ಈ ಬಗ್ಗೆ ಹೇಳಿಕೊಂಡಾಗ ಆಕೆಯ ಮಾವನೂ ಸಹ ಅತ್ಯಾಚಾರವೆಸಗಿದ್ದಾನೆ. ಇಂತಹ ಆಘಾತಕಾರಿ ಘಟನೆ ಬೆಳಕಿಗೆ ಬಂದಿರುವುದು ತೆಲಂಗಾಣದ ಭದ್ರಾದ್ರಿ ಕೊಟ್ಟಗುಡೆಮ್ ನಲ್ಲಿ.

ತಂದೆಯಿಲ್ಲದ ಸಂತ್ರಸ್ತೆ ತನ್ನ ತಾಯಿ ಮತ್ತು ಸಹೋದರನ ಜತೆ ವಾಸವಿದ್ದಳು. ಆದ್ರೆ ಹಲವು ದಿನಗಳಿಂದ ಆಕೆಯ ಅಣ್ಣ ಅತ್ಯಾಚಾರವೆಸಗಿದ್ದಾನೆ. ಈ ಬಗ್ಗೆ ತಾಯಿ ಬಳಿ ಹೇಳಿದ್ರೂ ಆಕೆ ಕೇರ್ ಮಾಡಿಲ್ಲ. ಬಳಿಕ ಮನನೊಂದು ಅಜ್ಜಿ ತಾತನ ಮನೆಗೆ ಹೋಗಿ ಹೇಳಿಕೊಂಡ್ರೂ ಅಲ್ಲಿಯೂ ಕೇರ್ ಮಾಡಿಲ್ಲ. ಬದಲಾಗಿ ಅಲ್ಲಿಯೂ ಅಜ್ಜಿ ತಾತನ ಮಗ ಅಂದ್ರೆ ಸಂತ್ರಸ್ತೆಯ ಮಾವನೂ ಸಹ ಅತ್ಯಾಚಾರವೆಸಗಿದ್ದಾನೆ. ಇದೆಲ್ಲಾ ಗೊತ್ತಿದ್ದರೂ ಪರಿವಾರದವರೂ ಮಾತ್ರ ಆರೋಪಿಗಳ ಪರ ನಿಂತು ಸಂತ್ರಸ್ತೆಗೆ ಧಮ್ಕಿ ಹಾಕಿರುವುದು, ನಿಜಕ್ಕೂ ನಾಚಿಕೆಗೇಡಿನ ಸಂಗತಿಯಾಗಿದೆ.

ಆದ್ರೆ ಯುವತಿ ತನಗಾದ ಅನ್ಯಾಯಾದ ವಿರುದ್ಧ ಕಾಮುಕರು ಹಾಗೂ ಕುಟುಂಬಸ್ಥರ ವಿರುದ್ಧ ಪೊಲೀಸ್ ಠಾನೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ. ಸಂತ್ರಸ್ತೆಯನ್ನ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದಾರೆ. ಮೂಲಗಳ ಪ್ರಕಾರ ಆರೋಪಿಗಳನ್ನ ವಶಕ್ಕೆ ಪಡೆದು ವಿಚಾರಣೆಗೊಳಪಡಿಸಲಾಗಿದೆ ಎನ್ನಲಾಗಿದೆ.

ಪರೀಕ್ಷೆಯಲ್ಲಿ ಕಾಪಿ ಮಾಡೋಕೆ ಬಿಟ್ಟಿಲ್ಲ ಅಂತ ಪ್ರತಿಭಟನೆ ಮಾಡಿದ ವಿದ್ಯಾರ್ಥಿಗಳು..!

ಅಮಿತ್ ಶಾ , ಯೋಗಿ ಆದಿತ್ಯನಾಥ್ ಗೆ ಕೊಲೆ ಬೆದರಿಕೆ..! ಪ್ರಮುಖ ಸ್ಥಳಗಳ ಮೇಲೆ ದಾಳಿ ಮಾಡುವ ಧಮ್ಕಿ..!

ದೇಶದಲ್ಲಿ ಕೊರೊನಾ 2ನೇ ಅಲೆ – ಒಂದೇ ದಿನ 1.15 ಲಕ್ಷ ಕೇಸ್ ಗಳು ಪತ್ತೆ – ಬಲಿಯಾದವರೆಷ್ಟು..?

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd