Bengaluru : ಸಿಎಂ ನೇತೃತ್ವದಲ್ಲಿ ವಿಧಾನಸೌಧದಲ್ಲಿ ರಾಜ್ಯ ಸಂಪುಟ ಸಭೆ
ಸಿಎಂ ನೇತೃತ್ವದಲ್ಲಿ ವಿಧಾನಸೌಧದಲ್ಲಿ ರಾಜ್ಯ ಸಂಪುಟ ಸಭೆ ನಡೆಯಲಿದೆ..
ಸಭೆಯಲ್ಲಿ ಹಲವುಮಹತ್ವದ ವಿಷಯಗಳ ಚರ್ಚೆಯಾಗಲಿದೆ.. ಬಾಗಲಕೋಟೆ ಮುಧೋಳದ ರನ್ನನಗರದಲ್ಲಿರುವ ಸಹಕಾರಿ ಸಕ್ಕರೆ ಕಾರ್ಖಾನೆ ಖಾಸಗೀಕರಣ, ಗಿರಿಜಾರಮಣ ಇಂಫೆಕ್ಸ್ ಪ್ರೈ.ಲಿ. ನೀಡುವ ಕುರಿತಾಗಿ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಚರ್ಚೆಯಾಗಲಿದೆ..
ಕೋಲಾರದ ಮಾಲೂರು ತಾಲೂಕಿನ ಮಾಸ್ತಿ ಗ್ರಾಮಲ್ಲಿನ ಕಾರ್ಖಾನೆ, ಮಾಸ್ತಿ ವೆಂಕಟೇಶ ಅಯ್ಯಂಗಾರ್ ವಸತಿ ಶಾಲೆ ಕಟ್ಟಡ ನಿರ್ಮಾಣದ ಬಗ್ಗೆಯೂ ಚರ್ಚೆ ನಡೆಯಬಹುದು.. ಜೊತೆಗೆ 17 ಕೋಟಿ ರೂ. ವೆಚ್ಚದ ಕಟ್ಟಡಕ್ಕೆ ಸಮ್ಮತಿ ಸಿಗುವ ಸಾಧ್ಯತೆಯಿದೆ.
ಅಲ್ಲದೇ ಹಲವು ಬದಲಾವಣೆಯೊಂದಿಗೆ ಬೆಂಗಳೂರು ಪೆರಿಪರಲ್ ರಸ್ತೆ ನಿರ್ಮಾಣಕ್ಕೆ ಒಪ್ಪಿಗೆ ಸಿಗುವ ಸಾಧ್ಯತೆಯೂ ಇದೆ. ಬಸವಕಲ್ಯಾಣದಲ್ಲಿ ನಿರ್ಮಾಣವಾಗಲಿರುವ ಅನುಭವಮಂಟಪ ಕಾಮಗಾರಿ ಕುರಿತು ಚರ್ಚೆಯಾಗಬಹುದು.
ರಾಜ್ಯ ಮುದ್ರಾಂಕ ತಿದ್ದುಪಡಿ ವಿಧೇಯಕಕ್ಕೆ ಒಪ್ಪಿಗೆ ಸಿಗುವ ಸಾಧ್ಯತೆಯಿದೆ. ಕುಮಟಾ ಮಿನಿವಿಧಾನಸೌಧ ನಿರ್ಮಾಣದ ಬಗ್ಗೆಯೂ ಚರ್ಚೆಯಾಗಬಹುದು.
16.20 ಕೋಟಿವೆಚ್ಚಕ್ಕೆ ಅನುಮೋದನೆ ಸಾಧ್ಯತೆಯಿದೆ. ಸಂಡೂರಿನಲ್ಲಿ ಬಹುಗ್ರಾಮಕುಡಿಯುವ ನೀರಿನ ಯೋಜನೆ , 131 ಕೋಟಿವೆಚ್ಚದ ಯೋಜನೆಗೆ ಅನುಮೋದನೆ ಸಾಧ್ಯತೆ