ಐದು ಚಿನ್ನ ಗೆದ್ದು ಒಲಿಂಪಿಕ್ಸ್ ಅಭಿಯಾನ ಮುಗಿಸಿದ ಕಾಲೆಬ್ ಡ್ರೆಸೆಲ್
ಟೋಕಿಯೊ : ಬರೋಬ್ಬರಿ ಐದು ಚಿನ್ನದ ಪದಕಗಳನ್ನು ಗೆಲ್ಲುವ ಮೂಲಕ ಅಮೆರಿಕಾದ ಈಜುಪಟು ಕಾಲೆಬ್ ಡ್ರೆಸೆಲ್, ಟೋಕಿಯೊ ಒಲಿಂಪಿಕ್ಸ್ ಅಭಿಯಾನವನ್ನು ಕೊನೆಗೊಳಿಸಿದ್ದಾರೆ.
ಒಂದರ ಹಿಂದೆ ಒಂದರಂತೆ ಸತತವಾಗಿ ನಡೆದ ಸ್ಪರ್ಧೆಯಲ್ಲಿ ಅತ್ಯದ್ಭುತ ಪ್ರದರ್ಶನ ನೀಡಿದ ಡ್ರೆಸೆಲ್, ವೈಯಕ್ತಿಕ ವಿಭಾಗದಲ್ಲಿ ಮೂರು ಮತ್ತು ರಿಲೇಯಲ್ಲಿ ಎರಡು ಚಿನ್ನಕ್ಕೆ ಕೊರೊಳೊಡ್ಡಿದ್ದಾರೆ.
ಡ್ರೆಸೆಲ್, 100 ಮೀ. ಬಟರ್ಫ್ಲೈ, 50 ಮೀ. ಫ್ರೀಸ್ಟೈಲ್, 100 ಮೀ. ಫ್ರೀಸ್ಟೈಲ್, 4*100 ಮೀ. ಮೆಡ್ಲೆ ರಿಲೇ ಮತ್ತು 4*100 ಮೀ. ಫ್ರೀಸ್ಟೈಲ್ ರಿಲೇ ವಿಭಾಗದಲ್ಲಿ ಚಿನ್ನದ ಪದಕಕ್ಕೆ ಮುತ್ತಿಟ್ಟಿದ್ದಾರೆ. ಆ ಮೂಲಕ ಒಲಿಂಪಿಕ್ಸ್ನಲ್ಲಿ ಒಟ್ಟು ಏಳು ಚಿನ್ನದ ಪದಕ ಗೆದ್ದ ಸಾಧನೆ ಮಾಡಿದ್ದಾರೆ.








