CBSE EXAM: ಸಿಬಿಎಸ್ಸಿ 10 ಮತ್ತು 12 ನೇ ತರಗತಿ ಪರೀಕ್ಷಾ ವೇಳಾಪಟ್ಟಿ ಬಿಡುಗಡೆ…
ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (CBSE) 10 ಮತ್ತು 12 ನೇ ತರಗತಿಯ ಬೋರ್ಡ್ ಪರೀಕ್ಷೆಗಳ ದಿನಾಂಕವನ್ನ ಅಧಿಕೃತ CBSE ವೆಬ್ಸೈಟ್ ನಲ್ಲಿ ಬಿಡುಗಡೆ ಮಾಡಿದೆ.
ಅಧಿಕೃತ ಅಧಿಸೂಚನೆಯ ಪ್ರಕಾರ, 10 ನೇ ತರಗತಿಯ CBSE ಬೋರ್ಡ್ ಪರೀಕ್ಷೆಗಳು 2023 ಫೆಬ್ರವರಿ 15 ರಿಂದ ಪ್ರಾರಂಭವಾಗಿ ಮಾರ್ಚ್ 21, 2023 ರಂದು ಮುಕ್ತಾಯಗೊಳ್ಳುತ್ತವೆ. ಹಾಗೆಯೇ, 12 ನೇ ತರಗತಿಯ ಬೋರ್ಡ್ ಪರೀಕ್ಷೆಗಳು ಫೆಬ್ರವರಿ 15, 2023 ರಿಂದ ಪ್ರಾರಂಭವಾಗಿ ಏಪ್ರಿಲ್ 5, 2023 ರ ನಡುವೆ ನಡೆಯುಲಿವೆ.
ಪರೀಕ್ಷೆಗಳು ಬೆಳಗ್ಗೆ 10:30 ಕ್ಕೆ ಆರಂಭವಾಗಲಿವೆ. ಹೆಚ್ಚಿನ ಪರೀಕ್ಷೆಗಳ ಅವಧಿಯನ್ನ ಮೂರುಗಂಟೆ ನೀಡಲಾಗಿದೆ. ಅಂದರೇ ಮಧ್ಯಾಹ್ನ 1.30ಕ್ಕೆ ಪರೀಕ್ಷೆಗಳು ಮುಕ್ತಾಯಗೊಳ್ಳುತ್ತವೆ. ಕೆಲವು ಪರೀಕ್ಷೆಗಳಿಗೆ ಎರಡು ಗಂಟೆಗಳ ಅವಧಿ ನೀಡಲಾಗಿದ್ದು ಮಧ್ಯಾಹ್ನ 12:30 ಕ್ಕೆ ಮುಕ್ತಾಯಗೊಳ್ಳುತ್ತವೆ.
ಈ ಶೈಕ್ಷಣಿಕ ವರ್ಷದಲ್ಲಿ ಕರೊನಾ ಸಾಂಕ್ರಾಮಿಕತೆ ಭಾದಿಸದ ಕಾರಣ ಶೇಕಡಾ 100 ರಷ್ಟು ಪಠ್ಯಕ್ರಮದಲ್ಲಿ ಪರೀಕ್ಷೆ ನಡೆಸಲಾಗುವುದು ಎಂದು ಸಿಬಿಎಸ್ ಸಿ ತಿಳಸಿದೆ. ಹೆಚ್ಚಿನ ಮಾಹಿತಿಗಾಗಿ – ಅಧಿಕೃತ ವೆಬ್ ಸೈಟ್ cbse.gov.in. ಗೆ ಭೇಟಿ ನೀಡಿ…
CBSE EXAM : Class 10th, 12th exams to be based on 100% syllabus