ಪಶ್ಚಿಮ ಬಂಗಾಳದಲ್ಲಿ ನಡೆದ ಪಂಚಾಯತ್ ಚುನಾವಣೆಯಲ್ಲಿ ಟಿಎಂಸಿ ಭರ್ಜರಿ ಗೆಲುವು ಸಾಧಿಸಿದ್ದು, ಆಡಳಿತರೂಢ ತೃಣಮೂಲ ಕಾಂಗ್ರೆಸ್ ಭರ್ಜರಿ ಜಯ ಸಾಧಿಸಿದೆ.
ಗಲಭೆ, ಹಿಂಸಾಚಾರದ ಮಧ್ಯೆಯೂ ಅಲ್ಲಿ ಪಂಚಾಯತ್ ಚುನಾವಣೆಯ ಫಲಿತಾಂಶ ಹೊರಬಿದ್ದಿದೆ. ಟಿಎಂಸಿ(TMC) ಭರ್ಜರಿ ಜಯ ಸಾಧಿಸಿದೆ. 74 ಸಾವಿರ ಸ್ಥಾನಗಳಿಗೆ ನಡೆದಿದ್ದ ಚುನಾವಣೆಯಲ್ಲಿ ಟಿಎಂಸಿ ಗೆಲುವು ಸಾಧಿಸಿದೆ. ಗ್ರಾಮ ಪಂಚಾಯತ್ ನಲ್ಲಿ 30,391 ಸ್ಥಾನಗಳಲ್ಲಿ, ತಾಲೂಕು ಪಂಚಾಯಿತಿಯ 2,155 ಸ್ಥಾನಗಳಲ್ಲಿ, ಜಿಲ್ಲಾ ಪಂಚಾಯಿತಿಯ 88 ಸ್ಥಾನಗಳಲ್ಲಿ ಟಿಎಂಸಿ ಗೆಲುವು ಸಾಧಿಸಿದೆ.
ಬಿಜೆಪಿ ಗ್ರಾಮ ಪಂಚಾಯತ್ನ 8,239 ಸ್ಥಾನಗಳಲ್ಲಿ, ತಾಲೂಕು ಪಂಚಾಯಿತಿಯಲ್ಲಿ 214 ಸ್ಥಾನಗಳಲ್ಲಿ, ಜಿಲ್ಲಾ ಪಂಚಾಯಿತಿಯ 13 ಸ್ಥಾನಗಳಲ್ಲಿ ಗೆದ್ದಿದೆ. ಅಖಿಲ ಭಾರತ ಸೆಕ್ಯುಲರ್ ಫ್ರಂಟ್ ಮತ್ತು ಸ್ವತಂತ್ರರು ಸೇರಿದಂತೆ 1732 ಸ್ಥಾನಗಳಲ್ಲಿ ಗೆಲವಿನ ನಗೆ ಬೀರಿದ್ದಾರೆ.
ಅಲ್ಲಿ ಮತ ಎಣಿಕೆಯ ದಿನವೂ ಸಾಕಷ್ಟು ಹಿಂಸಾಚಾರಗಳು ನಡೆದಿವೆ. ದಿನ್ಹಾಟಾ, ಹೌರಾ, ಬಸಿರ್ಹತ್, ಕೂಚ್ ಬೆಹಾರ್, ಮಾಲ್ಡಾ, ದಕ್ಷಿಣ 24 ಪರಗಣ ಜಿಲ್ಲೆಗಳ ವಿವಿಧ ಮತ ಎಣಿಕೆ ಕೇಂದ್ರಗಳಲ್ಲಿ ಬಾಂಬ್ ಸ್ಫೋಟಗಳು ಮತ್ತು ಘರ್ಷಣೆಗಳು ನಡೆದಿವೆ ಎಂದು ತಿಳಿದು ಬಂದಿದೆ.
ಹಲವೆಡೆ ಭದ್ರತಾ ಪಡೆಗಳು ಲಾಠಿ ಚಾರ್ಜ್ ನಡೆಸಿವೆ. ಈ ಬಾರಿಯ ಚುನಾವಣೆಯಲ್ಲಿ 37 ಜನ ಪಶ್ಚಿಮ ಬಂಗಾಳದಲ್ಲಿ ಸಾವನ್ನಪ್ಪಿದ್ದಾರೆ.