ನವದೆಹಲಿ: ಕೇಂದ್ರ ಸರ್ಕಾರವು ಮತ್ತೆ ಮೂವರಿಗೆ ಭಾರತ ಪತ್ನ ಪ್ರಶಸ್ತಿ ಘೋಷಿಸಿದೆ.
ಮಾಜಿ ಪ್ರಧಾನಿ ಪಿ ವಿ ನರಸಿಂಹರಾವ್, ಚೌಧರಿ ಚರಣ್ ಸಿಂಗ್ ಹಾಗೂ ಹಸಿರು ಕ್ರಾಂತಿಯ ಹರಿಕಾರ ಸ್ವಾಮಿನಾಥನ್ ಅವರಿಗೆ ಭಾರತರತ್ನ ಘೋಷಿಸಿದೆ.
ಈ ವಿಚಾರವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಸಾಮಾಜಿಕ ಜಾಲತಾಣದ ಮೂಲಕ ತಿಳಿಸಿದ್ದಾರೆ. ಈ ಮೂಲಕ ಈ ಬಾರಿ ಐವರು ಸಾಧಕರಿಗೆ ಕೇಂದ್ರ ಸರ್ಕಾರ ಭಾರತ ರತ್ನ ಪ್ರಶಸ್ತಿ ಘೋಷಿಸಿದಂತಾಗಿದೆ. ಮೊದಲು ಬಿಹಾರದ ಮಾಜಿ ಮುಖ್ಯಮಂತ್ರಿ ಕರ್ಪೂರಿ ಠಾಕೂರ್ಗೆ ಘೋಷಣೆ ಮಾಡಲಾಗಿತ್ತು. ನಂತರ ಮಾಜಿ ಗೃಹ ಸಚಿವ, ಬಿಜೆಪಿಯ ಹಿರಿಯ ನಾಯಕ ಲಾಲ್ ಕೃಷ್ಣ ಅಡ್ವಾಣಿಗೆ ಭಾರತ ರತ್ನ ಘೋಷಿಸಲಾಗಿತ್ತು. ಈಗ ಮೂವರ ಹೆಸರು ಘೋಷಿಸಲಾಗಿದೆ.
ಔಧರಿ ಚರಣ್ ಸಿಂಗ್ 1979 ರಿಂದ 80ರವರೆಗೆ ಪ್ರಧಾನಿಯಾಗಿದ್ದರೆ, ಪಿವಿ ನರಸಿಂಹ ರಾವ್ 1991ರಿಂದ 96 ವರೆಗೆ ಪ್ರಧಾನಿಯಾಗಿದ್ದರು.