ಕೇಂದ್ರ ಸರಕಾರಿ ನೌಕರರ ವರ್ಕ್ ಫ್ರಮ್ ಹೋಮ್ ಕ್ಯಾನ್ಸಲ್ Saaksha Tv
ನವದೆಹಲಿ: ಕೇಂದ್ರ ಸರಕಾರಿ ನೌಕರರ ವರ್ಕ್ ಫ್ರಮ್ ಹೋಮ್ ನ್ನು ಕ್ಯಾನ್ಸಲ್ ಮಾಡಲಾಗಿದೆ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಹೇಳಿದ್ದಾರೆ.
ಎಲ್ಲಾ ಹಂತದ ಕೇಂದ್ರ ಸರಕಾರಿ ನೌಕರರ ವರ್ಕ್ ಫ್ರಮ್ ಹೋಮ್ ನ್ನು ಕ್ಯಾನ್ಸಲ್ ಮಾಡಲಾಗಿದ್ದು, ಸೋಮವಾರದಿಂದ ಎಲ್ಲರೂ ಕಚೇರಿಗೆ ಬರಬೇಕು ಇದರಲ್ಲಿ ಯಾವುದೇ ವಿನಾಯಿತಿ ಇಲ್ಲ. ನಿಯಮ ಫೆಬ್ರವರಿ 7, 2022ರಿಂದ ಜಾರಿಗೆ ಬರಲಿದೆ. ಅಲ್ಲದೇ ಕಚೇರಿಗೆ ಬರುವ ಇಲಾಖೆಗಳ ಮುಖ್ಯಸ್ಥರು, ನೌಕರರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಮತ್ತು ಕೊರೊನಾ ನಿಯಮಗಳನ್ನು ಅನುಸರಿಸಬೇಕು ಎಂದು ಆದೇಶ ಹೊರಡಿಲಸಲಾಗಿದೆ.
ದೇಶದಲ್ಲಿನ ಕೊರೊನಾ ಸಾಂಕ್ರಾಮಿಕ ಪರಸ್ಥಿತಿಯ ಅವಲೋಕನವನ್ನು ಭಾನುವಾರ ನಡೆಸಿ, ಕೊರೊನಾ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಕೆಯಾಗಿದೆ. ಸೋಂಕಿತ ದರ ಸಹ ಕಡಿಮೆಯಾಗಿದ್ದರಿಂದ ಈ ನಿರ್ಧಾರ ಕೈಗೌಳ್ಳಲಾಗಿದೆ.