ಭಾರತದಲ್ಲಿ ಜನರ ಸಾವನ್ನು ಅಣಕಿಸಿದ ನಾಚಿಕೆಗೇಡಿನ ಚೀನಾ..!  

1 min read

ಭಾರತದಲ್ಲಿ ಜನರ ಸಾವನ್ನು ಅಣಕಿಸಿದ ನಾಚಿಕೆಗೇಡಿನ ಚೀನಾ..!

ಭಾರತ ಸೇರಿ ಇಡೀ ವಿಶ್ವಕ್ಕೆ ಕೊರೊನಾ ಮಹಾಮಾರಿಯನ್ನ ಪಾರ್ಸಲ್ ಮಾಡಿ ಲಕ್ಷಾಂತರ ಜನರ ಸಾವಿಗೆ ಕಾರಣವಾಗಿರುವ ಚೀನಾ ನಾಚಿಕೆಯಿಲ್ಲದ ವರ್ತನೆ ತೋರುತ್ತಿದೆ. ಇಡೀ ಪ್ರಪಂಚಕ್ಕೆ ಕೊರೊನಾ ಹಬ್ಬಿಸಿ ತನ್ನ ದೇಶದಲ್ಲಿ ಕೊರೊನಾ ಪರಿಸ್ಥಿತಿ ಕಂಟ್ರೋಲ್ ಮಾಡಿರುವ ಚೀನಾ ಇಡೀ ದೇಶದ ಆರ್ಥಿಕ ಪರಿಸ್ಥಿತಿ ಹಾಗೂ ಜನರ ಸಾವು ನೋಡಿ ಮರುಕ ಪಡುವ ಹೊರತಾಗಿ ರಣಕೇಕೆಹಾಕುತ್ತಾ ನಗುತ್ತಿದೆ. ಅದ್ರಲ್ಲೂ ಭಾರತದಲ್ಲಿ ಜನ ಪ್ರಾಣ ಕಳೆದುಕೊಳ್ತಿದ್ರೆ ಇತ್ತ ಚೀನಾ ಅದನ್ನ ಅಣಕಿಸುತ್ತಾ ವಿಕೃತಿ ಮೆರೆಯುತ್ತಿದೆ. ಚೀನಾದ ನೀಚ ಬುದ್ದಿ ಮತ್ತೊಮ್ಮೆ ವಿಶ್ವದ ಮುಂದೆ ಬಟಾಬಯಲಾಗಿದೆ.

ಕೋವಿಡ್ ಪರಿಸ್ಥಿತಿಯಲ್ಲಿ ಬಾರತಕ್ಕೆ ಸಹಾಯ ಮಾಡ್ತೇವೆ ಎಂದು ಹೇಳುವ ಇದೇ ಚೀನಾ ನಮ್ಮ ಪರಿಸ್ಥಿತಿ ನೋಡಿ ಅಣಕಿಸೋ ವಿಕೃತಿ ಮೆರೆಯುತ್ತಿದೆ. ಟಿಯಾನ್‌ ಹೆ ಬಾಹ್ಯಾಕಾಶ ನಿಲ್ದಾಣದ ಮೋಡ್ಯೂಲೊಂದರ ಉಡಾವಣಾ ಚಿತ್ರಗಳು ಮತ್ತು ಉಡಾವಣೆಯ ವೇಳೆ ಅದು ಬೆಂಕಿಯುಗುಳುತ್ತಿರುವ ಚಿತ್ರಗಳನ್ನು ಭಾರತದಲ್ಲಿ ಈಗ ನಡೆಯುತ್ತಿರುವ ಸಾಮೂಹಿಕ ಹೊರಾಂಗಣ ಶವಸಂಸ್ಕಾರದ ಚಿತ್ರಗಳೊಂದಿಗೆ ಹೋಲಿಸಲಾಗಿತ್ತು. ಚೀನಾವೂ ಬೆಂಕಿಯನ್ನು ಹೊತ್ತಿಸುತ್ತಿದೆ ಹಾಗೂ ಭಾರತವೂ ಬೆಂಕಿಯನ್ನು ಹೊತ್ತಿಸುತ್ತಿದೆ ಎಂಬ ವಿವರಣೆಯನ್ನು ಅದಕ್ಕೆ ಕೊಡಲಾಗಿತ್ತು.

ಚೀನಾ ಕಮ್ಯುನಿಸ್ಟ್ ಪಕ್ಷದ ಸೆಂಟ್ರಲ್ ಪೊಲಿಟಿಕಲ್ ಆಯಂಡ್ ಲೀಗಲ್ ಅಫೇರ್ಸ್‌ ಕಮಿಶನ್ ತನ್ನ ಅಧಿಕೃತ ಸೈನಾ ವೈಬೊ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಈ ಸಂದೇವನ್ನು ಶನಿವಾರ ಹಾಕಿತ್ತು. ಅದರ ಜೊತೆಗೇ, ಭಾರತದಲ್ಲಿ ಈಗ ಹೊಸ ಕೊರೋನ ವೈರಸ್ ಸೋಂಕು ಪ್ರಕರಣಗಳ ಸಂಖ್ಯೆ ದಿನಕ್ಕೆ 4 ಲಕ್ಷವನ್ನೂ ದಾಟಿದೆ ಎಂಬ ಹ್ಯಾಶ್‌ಟ್ಯಾಗೊಂದನ್ನು ಬರೆಯಲಾಗಿತ್ತು.

ಈ ಸಂದೇಶದ ಬರ್ಬರತೆಗೆ ಚೀನೀ ಸಾಮಾಜಿಕ ಮಾಧ್ಯಮ ಬಳಕೆದಾರರು ಆಘಾತ ವ್ಯಕ್ತಪಡಿಸಿದ ಬಳಿಕ, ಅದೇ ದಿನ ರಾತ್ರಿ ಅದನ್ನು ಅಳಿಸಿ ಹಾಕಲಾಗಿದೆ. ಈ ಮೂಲಕ ಚೀನಾದ ಮಾನ ವಿಶ್ವದ ಮುಂದೆ ಹರಾಜಾಗಿದೆ.. ಅಷ್ಟೇ ಅಲ್ಲ.. ಕೇವಲ ಬಾರತೀಯರು ಅಥವ ವಿಶ್ವದ ಜನರಷ್ಟೇ ಅಲ್ಲದೇ ಚೀನೀಯರೇ ಈ ಪೋಸ್ಟ್ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಇನ್ನು ಈ ಬಗ್ಗೆ ಟ್ವೀಟ್ ಮಾಡಿರೋ ಚೀನಾ ಸರ್ಕಾರಿ ಪತ್ರಿಕೆ ಗ್ಲೋಬಲ್ ಟೈಮ್ಸ್​​ನ ಸಂಪಾದಕ ಹೂ ಶಿಜಿನ್  ತಮ್ಮ ದೇಶದ ವಿಕೃತಿಯ ಬಗ್ಗೆ ಮಾತನಾಡೋ ಬದಲು ಭಾರತದ ಲೋಪ ದೋಷಗಳನ್ನೇ ಹೇಳಿಕೊಂಡು ಮತ್ತೆ ಆಕ್ರೋಶಕ್ಕೆ ಗುರಿಯಾಗಿದ್ದಾರೆ. ​​​​​, ಚೀನಾ ಭಾರತಕ್ಕೆ ಆಕ್ಸಿಜನ್ ಕಾನ್ಸನ್​ಟ್ರೇಟರ್ಸ್​ ಮತ್ತು ವೆಂಟಿಲೇಟರ್​ನಂತಹ ಅಗತ್ಯ ವೈದ್ಯಕೀಯ ವಸ್ತುಗಳನ್ನು ನೀಡುತ್ತೆ. ಭಾರತ ಅದನ್ನು ಬಡವರಿಗೆ ಬಳಸೋ ಬದಲು ಶ್ರೀಮಂತರನ್ನು ಉಳಿಸಲು ಬಳಸುತ್ತೆ ಅಂತ ನಮ್ಮ ವ್ಯವಸ್ಥೆ ಬಗ್ಗೆ ಪ್ರಶ್ನೆ ಮಾಡಿದ್ದಾರೆ.

ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರೋ ಭಾರತದಲ್ಲಿರೋ ಚೀನಾ ರಾಯಭಾರಿ, ನಾವು ಭಾರತಕ್ಕೆ ಎಲ್ಲಾ ರೀತಿಯ ಸಹಾಯ ಮಾಡ್ತೀವಿ. ಭಾರತ ಆರ್ಡರ್ ಮಾಡಿರೋ 40 ಸಾವಿರ ಆಕ್ಸಿಜನ್ ಜನರೇಟರ್ಸ್​​ಗಳ ಉತ್ಪಾದನೆಗೆ ಹಗಲು ರಾತ್ರಿ ಕೆಲಸ ಮಾಡಲಾಗ್ತಿದೆ ಅಂತ  ಚೀನಾದ ನಡೆಯನ್ನ ಸಮರ್ಥನೆ ಮಾಡಿಕೊಂಡಿದ್ಧಾರೆ. ಇನ್ನೂ ಈ ಸಂದೇಶಕ್ಕೆ ಆನ್‌ ಲೈನ್‌ನಲ್ಲಿ ಭಾರೀ ಟೀಕೆ ವ್ಯಕ್ತವಾದ ಬಳಿಕ ಅದನ್ನು ಈಗ ಡಿಲೀಟ್ ಮಾಡಲಾಗಿದೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd