Chamarajanagar : ನಾಳೆ ಆಷಾಢ ಮಾಸದ ಶ್ರೀ ಚಾಮರಾಜೇಶ್ವರ ಬ್ರಹ್ಮರಥೋತ್ಸವ
ಚಾಮರಾಜನಗರ : ಚಾಮರಾಜನಗರದಲ್ಲಿ 5 ವರ್ಷಗಳ ನಂತರ ಆಷಾಢ ಮಾಸದ ಚಾಮರಾಜೇಶ್ವರ ರಥೋತ್ವವವು ವಿಜೃಂಭಣೆಯಿಂದ ನಾಳೆ ನಡೆಯಲಿದೆ.
ಸಾಮಾನ್ಯವಾಗಿ ಆಷಾಡ ಮಾಸದಲ್ಲಿ ಶುಭ ಕಾರ್ಯಗಳು ಅಥವಾ ರಥೋತ್ಸವಗಳು ನಡೆಯುವುದಿಲ್ಲ. ಆದರೆ ಚಾಮರಾಜನಗರದಲ್ಲಿ ಆಷಾಡ ಮಾಸದಲ್ಲಿಯೇ ಶ್ರೀ ಚಾಮರಾಜೇಶ್ವರಸ್ವಾಮಿಯ ಬ್ರಹ್ಮರಥೋತ್ಸವವು ನಡೆಯುತ್ತೆ.

5 ವರ್ಷದ ಹಿಂದೆ ಕಿಡಿಗೇಡಿಯಿಂದ ರಥಕ್ಕೆ ಬೆಂಕಿ ಬಿದ್ದು ರಥವು ಹಾಳಾಗಿತ್ತು ತದ ನಂತರ ರಥೊತ್ಸವ ನಡೆಯದೆ ಭಕ್ತರಲ್ಲಿ ನಿರಾಸೆ ಮೂಡಿತ್ತು.
ಇದೀಗ 5 ವರ್ಷದ ನಂತರ ನೂತನ ರಥ ನಿರ್ಮಾಣಗೊಂಡ ಬಳಿಕ ಶ್ರೀ ಚಾಮರಾಜೇಶ್ವರ ರಥೋತ್ಸವವು ವಿಜೃಂಭಣೆಯಿಂದ ನಡೆಯಲಿದೆ.
ರಥೋತ್ಸವವು ಯಶಸ್ವಿಯಿಂದ ನಡೆಯಲು ಜಿಲ್ಲಾಡಳಿತವು ಸಕಲ ಸಿದ್ದತೆಗಳನ್ನು ಕೈಗೊಂಡಿದೆ ಹಾಗಾಗಿ ಲಕ್ಷಾಂತರ ಭಕ್ತರು ಸೇರುವ ನಿರೀಕ್ಷೆ ಇದ್ದು ಪೋಲೀಸ್ ಬಿಗಿಬಂದೋಬಸ್ತ್ ಮಾಡಲಾಗಿದೆ.