ದಿ. ಜಿ.ರಾಜುಗೌಡರ 17 ನೇ ಪುಣ್ಯ ಸ್ಮರಣೆ ಅಂಗವಾಗಿ ಉಚಿತ ಕಣ್ಣಿನ ಪೊರೆ ತಪಾಸಣೆ ಶಿಬಿರ ಆಯೋಜನೆ..!
ಚಾಮರಾಜನಗರ : ಚಾಮರಾಜನಗರದ ಕೊಳ್ಳೇಗಾಲದಲ್ಲಿ ಮಾಜಿ ಸಚಿವ ದಿವಂಗತ ಜಿ.ರಾಜುಗೌಡರ ಅಭಿಮಾನಿ ಬಳಗದ ವತಿಯಿಂದ ಉಚಿತ ಕಣ್ಣಿನ ಪೊರೆ ತಪಾಸಣೆ ಮತ್ತು ಶಸ್ತ್ರ ಚಿಕಿತ್ಸಾ ಶಿಬಿರವನ್ನು ನಡೆಸಲಾಯಿತು. ದೊಡ್ಡಿಂದುವಾಡಿ ಶ್ರೀ ಜಿ.ವಿ ಗೌಡ ಸ್ಮಾರಕ ಸರ್ಕಾರಿ ಪ್ರೌಢಶಾಲಾ ಆಚರಣದಲ್ಲಿ ರಾಜುಗೌಡರ 17 ನೇ ವರ್ಷದ ಪುಣ್ಯ ಸ್ಮರಣೆ ಅಂಗವಾಗಿ ಉಚಿತ ಕಣ್ಣಿನ ಪೊರೆ ತಪಾಸಣೆ ಮತ್ತು ಶಸ್ತ್ರ ಚಿಕಿತ್ಸಾ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.
ಇನ್ನೂ ಕಾರ್ಯಕ್ರಮಕ್ಕೆ ರಾಜು ಗೌಡರ ಪುತ್ರ ಹನೂರು ಶಾಸಕ ಆರ್.ನರೇಂದ್ರ ಚಾಲನೆ ನೀಡಿದ್ರು. ಬಳಿಕ ಮಾತನಾಡಿ ಉಚಿತ ಆರೋಗ್ಯ ಶಿಬಿರವನ್ಬು ಏರ್ಪಡಿಸಲಾಗಿದ್ದು ಕಣ್ಣಿನ ಸಂಬಂಧಿ ಖಾಯಿಲೆಗಳಿಂದ ಬಳಲುತ್ತಿರುವ ಜನರಿಗೆ ಈ ಶಿಬಿರದ ಪ್ರಯೋಜನವಾಗಲಿದೆ. ಅದರಂತೆ ನೂರಾರು ಜನರು ಭೇಟಿ ನೀಡಿ ಕಣ್ಣಿನ ಚಿಕಿತ್ಸೆ ಪಡೆದಿದ್ದಾರೆ ಎಂದರು. ಇನ್ನೂ ಅನೇಕ ಬಡ ವರ್ಗದವರು ಬಂದು ಕಣ್ಣು ತಪಾಸಣೆ ಮಾಡಿಸಿಕೊಂಡರು.
ಬೆಳಗಾವಿ ಲೋಕಸಭಾ ಚುನಾವಣೆ : ಪ್ರಚಾರಕ್ಕೆ ಜಾರಕಿಹೊಳಿ ಬರ್ದರ್ಸ್ ಬರುತ್ತಾರೆ..! – ಶೆಟ್ಟರ್
ಸಿಡಿ ವಿಚಾರವಾಗಿ ನೋ ಕಮೇಂಟ್ಸ್ – ಉಮೇಶ್ ಕತ್ತಿ
ಕೆ.ಹೆಚ್.ಮುನಿಯಪ್ಪರನ್ನ ಕಾಂಗ್ರೆಸ್ ಪಕ್ಷದಿಂದ ಉಚ್ಛಾಟಿಸಿ : ವರ್ತೂರು ಪ್ರಕಾಶ್